ಆಹಾರ ಮತ್ತು ಪಾನೀಯವನ್ನು ಸುರಕ್ಷಿತವಾಗಿಡಲು ಫ್ರಿಜ್ ಉತ್ತಮ ಸಾಧನವಾಗಿದೆ, ಬಹುತೇಕ ಎಲ್ಲ ಜನರು ಹಣ್ಣುಗಳು, ತರಕಾರಿಗಳು, ಉಳಿದಿರುವ ಆಹಾರ, ಡೈರಿ ಉತ್ಪನ್ನಗಳು, ಬ್ರೆಡ್ ಅಥವಾ ಇತರ ವಸ್ತುಗಳನ್ನು ಫ್ರಿಜ್ ನಲ್ಲಿ ಇಡುತ್ತಾರೆ. ಫ್ರಿಜ್‌ನಲ್ಲಿ ಇರಿಸಲಾಗಿರುವ ಆಹಾರ ಪದಾರ್ಥಗಳು ಒಂದು ಅಥವಾ ಎರಡು ದಿನ ಸುರಕ್ಷಿತವಾಗಿರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ, ಆದರೆ ಫ್ರಿಜ್‌ನಲ್ಲಿ ಇರಿಸಿದಾಗಲೂ ಕೆಲವು ವಸ್ತುಗಳು ಹಾಳಾಗುತ್ತವೆ ಎಂದು ನಿಮಗೆ ಗೊತ್ತಿದೆಯಾ, ಅದರ ಬಗ್ಗೆ ನಾವಿಂದು ನಿಮಗೆ ಹೇಳುತ್ತಿದ್ದೇವೆ ಕೇಳಿ.
ಸಾಮಾನ್ಯವಾಗಿ ಮನೆಯಲ್ಲಿ ಫ್ರಿಡ್ಜ್ ಇದೆ ಎಂದು ಬೇಕಾಬಿಟ್ಟಿ ಆಹಾರವನ್ನು ಮತ್ತು ಹಾಳಾಗಬಾರದೆಂದು ಎಲ್ಲವನ್ನು ಕೆಲವರು ಅದರಲ್ಲಿ ತುಂಬುತ್ತಾರೆ, ಫ್ರಿಡ್ಜ್ ಆಹಾರವನ್ನು ಹಾಳಾಗದಂತೆ ಕಾಪಾಡುತ್ತದೆ ನಿಜ ಆದರೆ ಎಲ್ಲಾ ಆಹಾರವನ್ನಲ್ಲ, ಕೆಲವೊಂದು ವಸ್ತುಗಳಿಗೆ ಮತ್ತು ಆಹಾರಗಳಿಗೆ ತನ್ನದೇ ಆದ ತಾಪಮಾನ ಬೇಕಿರುತ್ತದೆ, ಹಾಗಿದ್ದರೆ ಯಾವ ಆಹಾರವನ್ನು ಫ್ರಿಡ್ಜ್ ನಲ್ಲಿ ಇಡಬಾರದು ತಿಳಿಯೋಣ ಬನ್ನಿ.
ಬೆಣ್ಣೆ, ಯುನೈಟೆಡ್ ಸ್ಟೇಟ್ಸ್ ಕೃಷಿ ಇಲಾಖೆ ಪ್ರಕಾರ ಬೆಣ್ಣೆಯನ್ನು ಇಡುವಾಗ ನೀವು ಮೊದಲು ಅದನ್ನು ಚೆನ್ನಾಗಿ ಕಟ್ಟಿಕೊಳ್ಳಿ ಮತ್ತು ಬಳಕೆಗೆ ಮೊದಲು 10 ಅಥವಾ 15 ನಿಮಿಷಗಳ ಕಾಲ ರೆಫ್ರಿಜರೇಟರ್‌ನಿಂದ ಹೊರಗಿಡಿ, ಪಾಶ್ಚರೀಕರಿಸಿದ ಹಾಲಿನಿಂದ ಬೆಣ್ಣೆಯನ್ನು ತಯಾರಿಸ ಲಾಗುತ್ತದೆ, ಇದರಿಂದಾಗಿ ಅದು ಹಾಳಾಗುವ ಸಾಧ್ಯತೆಯಿದೆ.
ಮಾರುಕಟ್ಟೆಯಿಂದ ಖರೀದಿಸಿದ ಟೊಮೆಟೊಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ, ಹೆರಾಲ್ಡ್ ಮೆಕ್ ಗೀ ಪ್ರಕಾರ ಟೊಮೆಟೊಗಳನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ಅವುಗಳೊಳಗಿನ ಪೊರೆಯು ಒಡೆಯುತ್ತದೆ, ಇದರಿಂದಾಗಿ ಟೊಮೆಟೊ ಬೇಗನೆ ಕರಗುತ್ತದೆ ಆದ್ದರಿಂದ ಟೊಮೆಟೊವನ್ನು ಹೆಚ್ಚು ಕಾಲ ಇಡುವುದು ಒಳ್ಳೆಯದಲ್ಲ.
ಫ್ರಿಡ್ಜ್ ಒಳಗೆ ಇಟ್ಟ ಬ್ರೆಡ್ ತಿನ್ನುವುದರಿಂದ ಅರೋಗ್ಯ ಹಾಳಾಗುತ್ತದೆ, ಬ್ರೆಡ್ ಅನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರ ಗುಣ ಬದಲಾಗು ತ್ತದೆ ಮತ್ತು ಫ್ರಿಜ್ ನಲ್ಲಿ ಇರಿಸಿದ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಬಹಳ ಹಾನಿ ಮಾಡುತ್ತದೆ, ಆದ್ದರಿಂದ ನೀವು ಬ್ರೆಡ್ ಅನ್ನು ಚೆನ್ನಾಗಿ ಸುತ್ತಿ ಫ್ರಿಜ್ ನಲ್ಲಿ ಇಡಬೇಕು ಮತ್ತು ಒಂದು ಅಥವಾ ಎರಡು ದಿನಗಳಿಗಿಂತ ಹೆಚ್ಚು ಕಾಲ ಇಡಬಾರದು.
ಆಲೂಗಡ್ಡೆಯನ್ನು ರೆಫ್ರಿಜರೇಟರ್‌ನಲ್ಲಿ ಇರಿಸುವ ಮೂಲಕ ಅದರಲ್ಲಿರುವ ಪಿಷ್ಟ ಅಂಶವು ಸಕ್ಕರೆಯಾಗಿ ಬದಲಾಗಲು ಪ್ರಾರಂಭಿಸುತ್ತದೆ, ಇದು ಆಲೂಗೆಡ್ಡೆ ಸತ್ವ ಕಳೆದುಕೊಂಡು ಸಿಹಿಯಾಗುತ್ತದೆ. ನೀವು ಆಲೂಗಡ್ಡೆಯನ್ನು 45 ಡಿಗ್ರಿ ತಾಪಮಾನದಲ್ಲಿ ಇಡಬಹುದು ಮತ್ತು ಅದು ಹಲವಾರು ದಿನಗಳವರೆಗೆ ಸುರಕ್ಷಿತವಾಗಿರುತ್ತದೆ ಎಂದು ತಜ್ಞರು ಉಲ್ಲೇಖಿಸಿದ್ದಾರೆ.
ಜೇನುತುಪ್ಪವನ್ನು ಎಂದಿಗೂ ಕೂಡ ಇಡಬಾರದು, ತನ್ನ ಸತ್ವವನ್ನು ಬೇಗನೆ ಕಳೆದುಕೊಳ್ಳುತ್ತದೆ ಕಾಫಿಯನ್ನು ಫ್ರಿಜ್ ನಲ್ಲಿ ಇಡುವುದರಿಂದ ಅದರ ರುಚಿ ಬದಲಾಗುತ್ತದೆ. ಬೆಳ್ಳುಳ್ಳಿಯನ್ನು ಫ್ರಿಜ್ ನಲ್ಲಿ ಇಡುವುದರಿಂದ ಬೇಗನೆ ಮೊಳಕೆಯೊಡೆಯಲು ಪ್ರಾರಂಭವಾಗುತ್ತದೆ, ಅದರಲ್ಲಿ ತುಂಬಾ ಅಚ್ಚು ಬೆಳೆಯಲು ಪ್ರಾರಂಭಿಸುತ್ತದೆ, ಬದಲಾಗಿ ನೀವು ಬೆಳ್ಳುಳ್ಳಿಯನ್ನು ತಂಪಾದ ಶುಷ್ಕ ಸ್ಥಳದಲ್ಲಿ ಇಡಬೇಕು.
ನೀವು ಈರುಳ್ಳಿಯನ್ನು ಇಟ್ಟುಕೊಂಡರೆ, ಅದರಲ್ಲಿ ತೇವಾಂಶ ಮತ್ತು ಶಿಲೀಂಧ್ರ ಬರುವ ಸಾಧ್ಯತೆ ಹೆಚ್ಚು, ಅವುಗಳನ್ನು ತಂಪಾದ, ಶುಷ್ಕ ಸ್ಥಳದಲ್ಲಿ ಇರಿಸಿ, ಅಲ್ಲದೆ ಈರುಳ್ಳಿ ಮತ್ತು ಆಲೂಗಡ್ಡೆಯನ್ನು ಎಂದಿಗೂ ಒಟ್ಟಿಗೆ ಇಟ್ಟುಕೊಳ್ಳಬೇಡಿ ಎಂಬುದನ್ನು ನೆನಪಿನಲ್ಲಿಡಿ, ಇದನ್ನು ಒಟ್ಟಿಗೆ ಸೇರಿಸುವುದರಿಂದ ಬೇಗನೆ ಹದಗೆಡುತ್ತವೆ.
Comments are closed.