ಆರೋಗ್ಯ

ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ನೇರಳೆ ಗಿಡದ ಕೊಂಬೆಯ ಪುಡಿ ಸಹಕಾರಿ

Pinterest LinkedIn Tumblr

ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಹಿಮೋಗ್ಲೊಬಿನ್ ಮತ್ತು ಆಮ್ಲಜನಕದಿಂದ ಕೂಡಿದ ರಕ್ತ ದೇಹದಲ್ಲಿ ಸಂಚರಿಸುವಂತೆ ಮಾಡುತ್ತದೆ. ರಕ್ತ ಶುದ್ಧಿಗೊಳ್ಳುವುದರಿಂದ ತ್ವಚೆಯು ಕಾಂತಿಯುತವಾಗುತ್ತದೆ. ನೇರಳೆ ಹಣ್ಣಿನ ಬೀಜ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕೂಡ ಕಡಿಮೆಯಾಗುತ್ತದೆ. ಅಜೀರ್ಣ, ಬೇಧಿಯಂತಹ ಹೊಟ್ಟೆಗೆ ಸಂಬಂಧಿತ ಸಮಸ್ಯೆಗೆ ಈ ಹಣ್ಣು ಒಳ್ಳೆಯ ಪರಿಹಾರ. ನೇರಳೆ ಗಿಡದ ಕೊಂಬೆಯ ಪುಡಿ ಕೂಡ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಸಹಾಯಮಾಡುತ್ತದೆ.

ನೇರಳೆ ಹಣ್ಣಿನ ಜ್ಯೂಸ್ ಸೇವನೆಯಿಂದ ಲಾಲಾರಸ ಹೆಚ್ಚುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆಯುತ್ತದೆ. ನೇರಳೆ ಹಣ್ಣು ರಕ್ತದಲ್ಲಿರುವ ಸಕ್ಕರೆ ಪ್ರಮಾಣದ ಮೇಲೆ ಯಾವ ರೀತಿಯ ಪ್ರಭಾವವನ್ನೂ ಬೀರುವುದಿಲ್ಲ.

ಹಾಗಾಗಿ ನೇರಳೆ ಹಣ್ಣು ಸೇವಿಸುವುದರಿಂದ ಸಕ್ಕರೆ ಪ್ರಮಾಣ ಹೆಚ್ಚು ಕಮ್ಮಿಯಾಗುವುದಿಲ್ಲ. ಜೊತೆಗೆ ಈ ಹಣ್ಣಿನಲ್ಲಿ ಡಯಾಬಿಟಿಸ್‌ನ ಲಕ್ಷಣಗಳಾದ ಹೆಚ್ಚು ಹೆಚ್ಚು ಬಾಯಾರಿಕೆ, ಪದೇ ಪದೇ ಮೂತ್ರವಿಸರ್ಜನೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡುವ ಗುಣವಿದೆ.

ದೇಹದ ಸ್ಟಾಮಿನಾ ಹೆಚ್ಚಿಸಲು ನೇರಳೆ ಹಣ್ಣಿನ ಜ್ಯೂಸ್ ಸೇವನೆ ಉತ್ತಮ. ಜೊತೆಗೆ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತದೆ. ನೇರಳೆ ಗಿಡದ ತೊಗಟೆಯನ್ನು ೫ ನಿಮಿಷಗಳ ಕಾಲ ನೀರಿಗೆ ಹಾಕಿ ಕುದಿಸಿ ಸೇವಿಸಿದರೆ ಅಸ್ತಮಾ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆ ನೇರಳೆ ಹಣ್ಣನ್ನು ಸೇವಿಸುವುದರಿಂದ ದಂತ ನೋವು, ಬಾಯಿಯಲ್ಲಿನ ಗುಳ್ಳೆ ಗುಣವಾಗುತ್ತದೆ.

ನೇರಳೆ ಹಣ್ಣಿನಲ್ಲಿರುವ ಈ ಗುಣ ದೇಹವನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ಅತಿ ಕೆಮ್ಮು ಮತ್ತು ಗಂಟಲ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗಾಯಗಳನ್ನು, ಬೇಗ ಗುಣಪಡಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಸಹಾಕಾರಿ

ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಹಿಮೋಗ್ಲೊಬಿನ್ ಮತ್ತು ಆಮ್ಲಜನಕದಿಂದ ಕೂಡಿದ ರಕ್ತ ದೇಹದಲ್ಲಿ ಸಂಚರಿಸುವಂತೆ ಮಾಡುತ್ತದೆ. ರಕ್ತ ಶುದ್ಧಿಗೊಳ್ಳುವುದರಿಂದ ತ್ವಚೆಯು ಕಾಂತಿಯುತವಾಗುತ್ತದೆ. ನೇರಳೆ ಹಣ್ಣಿನ ಬೀಜ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕೂಡ ಕಡಿಮೆಯಾಗುತ್ತದೆ. ಅಜೀರ್ಣ, ಬೇಧಿಯಂತಹ ಹೊಟ್ಟೆಗೆ ಸಂಬಂಧಿತ ಸಮಸ್ಯೆಗೆ ಈ ಹಣ್ಣು ಒಳ್ಳೆಯ ಪರಿಹಾರ. ನೇರಳೆ ಗಿಡದ ಕೊಂಬೆಯ ಪುಡಿ ಕೂಡ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ ದೇಹದಲ್ಲಿನ ಕಲ್ಮಶವನ್ನು ಹೊರಹಾಕಲು ಸಹಾಯಮಾಡುತ್ತದೆ.

ನೇರಳೆ ಹಣ್ಣಿನ ಜ್ಯೂಸ್ ಸೇವನೆಯಿಂದ ಲಾಲಾರಸ ಹೆಚ್ಚುತ್ತದೆ. ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ನಡೆಯುತ್ತದೆ. ನೇರಳೆ ಹಣ್ಣು ರಕ್ತದಲ್ಲಿರುವ ಸಕ್ಕರೆ ಪ್ರಮಾಣದ ಮೇಲೆ ಯಾವ ರೀತಿಯ ಪ್ರಭಾವವನ್ನೂ ಬೀರುವುದಿಲ್ಲ.

ಹಾಗಾಗಿ ನೇರಳೆ ಹಣ್ಣು ಸೇವಿಸುವುದರಿಂದ ಸಕ್ಕರೆ ಪ್ರಮಾಣ ಹೆಚ್ಚು ಕಮ್ಮಿಯಾಗುವುದಿಲ್ಲ. ಜೊತೆಗೆ ಈ ಹಣ್ಣಿನಲ್ಲಿ ಡಯಾಬಿಟಿಸ್‌ನ ಲಕ್ಷಣಗಳಾದ ಹೆಚ್ಚು ಹೆಚ್ಚು ಬಾಯಾರಿಕೆ, ಪದೇ ಪದೇ ಮೂತ್ರವಿಸರ್ಜನೆ ಇಂತಹ ಸಮಸ್ಯೆಗಳನ್ನು ಕಡಿಮೆ ಮಾಡುವ ಗುಣವಿದೆ.

ದೇಹದ ಸ್ಟಾಮಿನಾ ಹೆಚ್ಚಿಸಲು ನೇರಳೆ ಹಣ್ಣಿನ ಜ್ಯೂಸ್ ಸೇವನೆ ಉತ್ತಮ. ಜೊತೆಗೆ ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತದೆ. ನೇರಳೆ ಗಿಡದ ತೊಗಟೆಯನ್ನು ೫ ನಿಮಿಷಗಳ ಕಾಲ ನೀರಿಗೆ ಹಾಕಿ ಕುದಿಸಿ ಸೇವಿಸಿದರೆ ಅಸ್ತಮಾ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಜೊತೆ ನೇರಳೆ ಹಣ್ಣನ್ನು ಸೇವಿಸುವುದರಿಂದ ದಂತ ನೋವು, ಬಾಯಿಯಲ್ಲಿನ ಗುಳ್ಳೆ ಗುಣವಾಗುತ್ತದೆ.

ನೇರಳೆ ಹಣ್ಣಿನಲ್ಲಿರುವ ಈ ಗುಣ ದೇಹವನ್ನು ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಅಂಶ ಅತಿ ಕೆಮ್ಮು ಮತ್ತು ಗಂಟಲ ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಗಾಯಗಳನ್ನು, ಬೇಗ ಗುಣಪಡಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮೂಲಕ ರೋಗ ಪ್ರತಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ.

Comments are closed.