ಆರೋಗ್ಯ

ಸಣ್ಣ ಮಕ್ಕಳಿಗೆ ಆರೋಗ್ಯಕರವಾದ ರುಚಿಯಾದ ಇನ್ ಸ್ಟೆಂಟ್ ಎನಜ್ರಿ ಜ್ಯೂಸ್ ಮಾಡುವ ವಿಧಾನ

Pinterest LinkedIn Tumblr

ನಮ್ಮ ಮಗು ತುಂಬಾ ಸಣ್ಣಗಿದೆಯಾ ಆರೋಗ್ಯವಾಗಿ ದಪ್ಪ ಆಗಬೇಕಾ ನಿಮ್ಮ ಮಗುವಿಗೆ ತಕ್ಷಣ ಎನಜ್ರಿ ಬೇಕಾ ಹಾಗಾದರೆ ನಾನು ಹೇಳುವ ಜ್ಯೂಸ್ ನ ಪ್ರತಿ ದಿನ ಮಗುವಿಗೆ ಕೊಡಿ ಖಂಡಿತವಾಗಿಯೂ ನಿಮ್ಮ ಮಗು ಆರೋಗ್ಯವಾಗಿ ದಪ್ಪವಾಗುತ್ತದೆ. ಜೊತೆಗೆ ತುಂಬಾ ಶಕ್ತಿಯನ್ನು ಈ ಜ್ಯೂಸ್ ಕೊಡುತ್ತದೆ. ಈ ಜ್ಯೂಸ್ ನ ಎರಡು ವರ್ಷ ಮೇಲ್ಪಟ್ಟ ಮಕ್ಕಳಿಗೆ ಎಲ್ಲರಿಗೂ ಕೊಡಬಹುದು. ಶುಗರ್ ಪೇಷಂಟ್ಸ ಇದ್ದರೆ ತೆಗೆದುಕೊಳ್ಳಲು ಬೇಡಿ. ಬೇರೆ ಯಾವುದೇ ಕಾಯಿಲೆ ಇದ್ದರೂ ತೆಗೆದುಕೊಳ್ಳಲು ಬಹುದು. ಎರಡು ವರ್ಷ ಮಗುವಿನಿಂದ ನೂರು ವರ್ಷದವರೆಗಿನ ಎಲ್ಲಾರೂ ತೆಗೆದು ಕೊಳ್ಳಬಹುದು.

ಈ ಜ್ಯೂಸ್ ಗೆ ಬೇಕಾದ ಸಾಮಗ್ರಿಗಳು: ಬಾದಾಮಿ. ಒಬ್ಬರಿಗೆ ಆದರೆ 5 ಇಬ್ಬರಿಗೆ ಆದರೆ 10ರಿಂದ 13 ಬಾದಾಮಿ ತೆಗೆದು ಕೊಳ್ಳಿ. ಒಣದ್ರಾಕ್ಷಿ 30 ರಿಂದ 40 ಅಂದಾಜಿನ ಪ್ರಕಾರ ಒಂದು ಹಿಡಿಯಷ್ಟು ತೆಗೆದುಕೊಳ್ಳಿ. ಇಬ್ಬರು ಮಕ್ಕಳಿಗೆ ಆದರೆ ಹಿಡಿಯಷ್ಟು ಒಂದು ಹಿಡಿಯಷ್ಟು ತೆಗೆದುಕೊಳ್ಳಿ. ಒಂದು ಮಗುವಿಗೆ ಆದರೆ 1/2 ಹಿಡಿಯಷ್ಟು ಸಾಕಾಗುತ್ತದೆ. ಖರ್ಜೂರ 10 ತೆಗೆದುಕೊಳ್ಳಿ ನಾನು ಹೇಳುತ್ತಿರುವ ಪ್ರಮಾಣ 2 ಮಕ್ಕಳಿಗೆ. ಒಬ್ಬರಿಗೆ ಆದರೆ ನಾನು ಹೇಳಿದ ಪ್ರಮಾಣ ದ 1/2 ಮಾತ್ರ ಬಳಸಬೇಕು. ಈ ಎಲ್ಲಾ ವನ್ನೂ ಪ್ರತ್ಯೇಕವಾಗಿ ಒಂದು ಬಟ್ಟಲಿನಲ್ಲಿ 6 ರಿಂದ 8 ಘಂಟೆಗಳ ಕಾಲ ನೆನಸಿಡಬೇಕು. ಬೆಳಿಗ್ಗೆ 10 ಘಂಟೆಗೆ ನೆನಸಿದರೆ ಸಂಜೆ ಮಗು ಶಾಲೆಯಿಂದ ಬಂದ ನಂತರ ಮಾಡಿ ಕೊಡಿ. ಬಾಳೆಹಣ್ಣು 2 ಯಾವುದೇ ಬಾಳೆಹಣ್ಣು ತೆಗೆದುಕೊಳ್ಳಿ ಆದರೆ ಪಚ್ಚೆ ಬಾಳೆಹಣ್ಣು ಆದರೆ ಉತ್ತಮ. ಹಾಲು 150ಎಮ್ ಎಲ್ ನಷ್ಟು ತೆಗೆದುಕೊಳ್ಳಿ. ಕಲ್ಲುಸಕ್ಕರೆ 2 ರಿಂದ 3 ಟಿ ಸ್ಪೂನ್ ನಷ್ಟು ಬಳಸಿ. ಅಥವಾ ಜೇನುತುಪ್ಪ 2ರಿಂದ 3 ಟೀ ಸ್ಪೂನ್ ಬಳಸಿ.

ಮಾಡುವ ವಿಧಾನ: ಬಾಳೆಹಣ್ಣು ಸಣ್ಣಗೆ ಹೆಚ್ಚಿಕ್ಕೊಳ್ಳಿ ಬಾದಾಮಿ ನ ಸಿಪ್ಪೆಯನ್ನು ತೆಗೆದುಕೊಳ್ಳಿ ಕಜ್ರೂರ ದ ಮೇಲಿರುವ ಸಿಪ್ಪೆಯನ್ನು ತೆಗೆದುಕೊಳ್ಳಿ, ಈ ನೀರನ್ನು ಚೆಲ್ಲಬೇಡಿ, ರುಬ್ಬುವಾಗ ಈ ನೀರನ್ನು ಉಪಯೋಗಿಸಬಹುದು. ಬಾದಾಮಿ ನೀರನ್ನು ಮಾತ್ರ ಚೆಲ್ಲಿ. ಮೊದಲಿಗೆ ಮಿಕ್ಸೀ ಜಾರನ್ನು ತೆಗೆದುಕೊಂಡು ಅದಕ್ಕೆ ಬಾದಾಮಿ ಕಜ್ರೂರ, ಕಲ್ಲುಸಕ್ಕರೆ ಮೂರನ್ನು ಹಾಕಿ ಚೆನ್ನಾಗಿ ರುಬ್ಬಿ, ರುಬ್ಬಿದ ನಂತರ ಕಜ್ರೂರ ನೆನಸಿಟ್ಟ ನೀರನ್ನು ಬಳಸಿ, ಒಣದ್ರಾಕ್ಷಿ ರುಬ್ಬಲು ಹಾಕುವುದಿಲ್ಲ, ದ್ರಾಕ್ಷಿ ಎಷ್ಟೇ ರುಬ್ಬಿದರೂ ಸಣ್ಣಗೆ ಹಿಗುವುದಿಲ್ಲ ಮಕ್ಕಳು ತಿನ್ನುವ ಇಷ್ಟ ಪಡುವುದಿಲ್ಲ. ನಂತರ ಒಣದ್ರಾಕ್ಷಿ ನೆನಸಿಟ್ಟ ನೀರನ್ನು ಹಾಕಿ ಬಾಳೆಹಣ್ಣು ಹಾಕಿ ಜೊತೆಗೆ ಹಾಲು ಎಲ್ಲವನ್ನೂ ರುಬ್ಬಿ. ಇಷ್ಷೆ ಆರೋಗ್ಯಕರವಾದ ರುಚಿಯಾದ ಇನ್ ಸ್ಟೆಂಟ್ ಎನಜ್ರಿ ಕೊಡುವಂತಹ ಜ್ಯೂಸ್ ನಿಮಗೆ ರಡಿಯಾಗುತ್ತದೆ.

ಇದನ್ನು ನಿಮ್ಮ ಟೇಸ್ಟ್ ಪ್ರಕಾರ ಮಾಡಿ ಕೊಳ್ಳಲು ಬಹುದು. ಆದರೆ ಸಕ್ಕರೆ ಮಾತ್ರ ಬಳಸಬೇಡಿ. ಇದನ್ನು ಯಾವಗ ಕೊಡಬೇಕು ಅಂದರೆ ಸಂಜೆ ವೇಳೆಗೆ ಕೊಟ್ಟರೆ ತುಂಬಾ ಒಳ್ಳೆಯದು ಏಕೆಂದರೆ ಬೆಳಿಗ್ಗೆ ಯಿಂದ ಸಂಜೆಯ ವರೆಗೂ ಸ್ಕೂಲ್ ಲಲ್ಲಿ ಸುಸ್ತಾಗಿರುವುದರಿಂದ ಮನೆಗೆ ಬಂದ ತಕ್ಷಣ ಮಾಡಿ ಕೊಡುವುದರಿಂದ ಇನ್ ಸ್ಟೆಂಟ್ ಎನಜ್ರಿ ಸಿಗುತ್ತದೆ. ಮತ್ತು ಆರೋಗ್ಯವಾಗಿ ದಪ್ಪವಾಗಲು ಸಹಾಯವಾಗುತ್ತದೆ. ಸರಿಯಾಗಿ ಮಕ್ಕಳು ಊಟ ಮಾಡುವುದಿಲ್ಲ ನಮ್ಮ ಮಕ್ಕಳು ಎನ್ನುವವರು ಸಹ ಈ ಜ್ಯೂಸ್ ನ ಮಾಡಿಕೊಡಿ ತುಂಬಾ ಇಷ್ಟ ಮಕ್ಕಳು ಕುಡಿಯುತ್ತಾರೆ. 3 ರಿಂದ 4 ತಿಂಗಳಲ್ಲೇ ಮಗು ಆರೋಗ್ಯ ವಾಗಿ ದಪ್ಪ ಆಗುತ್ತದೆ. ಪ್ರಯತ್ನಿಸಿ ನೋಡಿ.

Comments are closed.