ಆರೋಗ್ಯ

ನೈಸರ್ಗಿಕವಾದ ಎಲೆ ಬಳಸಿ ಸರಳ ಫೇಸ್ ಪ್ಯಾಕ್

Pinterest LinkedIn Tumblr

ನಾವು ನಮ್ಮ ಮುಖದ ಕಾಂತಿಗೆ ನಾನಾ ಬಗೆಯ ಫೇಸ್ ಪ್ಯಾಕ್ ಗಳನ್ನು ಬಳಸುತ್ತೇವೆ. ಅವುಗಳಲ್ಲಿ ಕೆಲವು ನಮ್ಮ ಚರ್ಮಕ್ಕೆ ಆಗದೇ ಇರಬಹುದು. ಆದರೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಮುಖಕ್ಕೆ ಫೇಸ್ ಪ್ಯಾಕ್ ಮಾಡಿಕೊಂಡರೆ ಯಾವುದೇ ಅಡ್ಡ ಪರಿಣಾಮ ಗಳಿಲ್ಲದೆ ಮುಖವು ಕಾಂತಿಯುತವಾಗಿ ಸುಂದರವಾಗಿ ಕಾಣುವುದು. ಯಾವುದೇ ರೀತಿಯ ನಮ್ಮ ಚರ್ಮಕ್ಕೆ ಸುಕ್ಕು ಬರುವುದಿಲ್ಲ ಮತ್ತು ಇನ್ನಿತರೇ ಸಮಸ್ಯೆಗಳು ಸಹ ಆಗೋದಿಲ್ಲ. ಅಲ್ಲದೆ ನೈಸರ್ಗಿಕವಾಗಿ ಮಾಡುವ ಫೇಸ್ ಪ್ಯಾಕ್ ಗೆ ಸಮವಾದುದು ಮತ್ತೊಂದಿಲ್ಲ. ಅಲ್ಲದೇ ಅನೇಕ ಬಗೆಯ ಹಣ್ಣುಗಳಿಂದಲೂ ಸಹ ಮುಖವನ್ನು ಕಾಂತಿಯುವಾಗಿ ಮಾಡಬಹುದು. ಆದರೆ ಈಗ ನಾವು ಹೇಳುತ್ತಿರುವುದು ಯಾವುದೇ ಹಣ್ಣುಗಳಿಂದ ಮಾಡುವಂತದ್ದಲ್ಲ, ಬದಲಾಗಿ ನಮ್ಮ ಸುತ್ತಲೇ ಇರುವ ನೈಸರ್ಗಿಕವಾದ ಎಲೆಗಳನ್ನು ಬಳಸಿ ಖರ್ಚಿಲ್ಲದಂತೆ ಫೇಸ್ ಪ್ಯಾಕ್ ನ್ನು ಮಾಡಿಕೊಳ್ಳಬಹುದು.

ಈಗ ನಾವು ಹೇಳಲು ಹೊರಟಿರುವ ಎಲೆಗಳೆಂದರೆ ಅದು ಸೀಬೆ ಹಣ್ಣು ಅಥವಾ ಪೇರಳೆ ಹಣ್ಣಿನ ಎಲೆಗಳು. ಪೇರಳೆ ಹಣ್ಣಿನಲ್ಲಿ ಇರುವಂತೆಯೇ ಅದರ ಎಲೆಗಳಲ್ಲೂ ಸಹ ವಿಟಮಿನ್ ಬಿ, ವಿಟಮಿನ್ ಸಿ, ವಿಟಮಿನ್ ಎ ಅಂಶಗಳು ಸಾಕಷ್ಟು ಇರುತ್ತವೆ. ಇವುಗಳು ನಮ್ಮ ಚರ್ಮಕ್ಕೆ ಬೇಕಾದ ಒಳ್ಳೆಯ ಪೋಷಕಾಂಶಗಳಾಗಿವೆ. ಇದು ನಮ್ಮ ಚರ್ಮದ ಯಾವುದೇ ಅಲರ್ಜಿ, ಕಲೆಗಳು, ಮೊಡವೆಗಳಿದ್ದರೂ ವಾಸಿ ಮಾಡುತ್ತದೆ. ಅಲ್ಲದೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಇರುತ್ತದೆ. ನಿಮಗೆ ನಿಮ್ಮ ಮಂಕಾದ ಮುಖವನ್ನು ನೋಡಿ ಬೇಸರವಾಗಿದ್ದರೆ ಸೀಬೆ ಎಲೆಗಳ ಸಹಾಯದಿಂದ ಕಾಂತಿಯುತವಾಗಿ ಸುಂದರವಾಗಿ ಕಾಣುವಂತೆ ಮಾಡಬಹುದು. ಆದ್ದರಿಂದ ಇವನ್ನು ಉಪಯೋಗಿಸಿ ಫೇಸ್ ಪ್ಯಾಕ್ ನ್ನು ಮಾಡುವುದು ಹೇಗೆಂದು ತಿಳಿಯೋಣ.

ಆರರಿಂದ ಏಳು ಪೇರಳೆ ಎಲೆಗಳನ್ನು ಕೊಯ್ದು ಅದನ್ನು ಚೆನ್ನಾಗಿ ತೊಳೆದುಕೊಂಡು ಅದನ್ನು ಪೇಸ್ಟ್ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ಒಣಗಲು ಬಿಡಬೇಕು. ನಂತರ ತಣ್ಣೀರಿನಿಂದ ಚೆನ್ನಾಗಿ ಮುಖವನ್ನು ತೊಳೆದುಕೊಂಡು ಮೆತ್ತಗಿನ ಬಟ್ಟೆಯಲ್ಲಿ ಮುಖವನ್ನು ಒರೆಸಬೇಕು. ಹೀಗೆ ವಾರಕ್ಕೊಮ್ಮೆ ಈ ವಿಧಾನವನ್ನು ಮಾಡಿಕೊಂಡರೆ ಕೆಲವೇ ವಾರಗಳಲ್ಲಿ ನಿಮ್ಮ ಮುಖ ಕಾಂತಿಯುತವಾಗಿ ಹಾಗು ಸುಂದರವಾಗಿ ಕಾಣಿಸುವುದರಲ್ಲಿ ಸಂದೇಹವಿಲ್ಲ. ನೀವು ಯಾವುದೇ ರೀತಿಯ ಕೆಮಿಕಲ್ ಫೆಸ್ ಪ್ಯಾಕ್ ಅಥ್ವಾ ಕ್ರೀಮ್ ಬಳಕೆ ಮಾಡ್ತಾ ಇದ್ರೆ ಅದು ಸದ್ಯದ ಮಟ್ಟಿಗೆ ಚೆನ್ನಾಗಿಯೇ ಕೆಲಸ ಮಾಡುತ್ತದೆ ಆದ್ರೆ ಬರ ಬರುತ್ತಾ ಅದು ದೊಡ್ಡ ಸಮಸ್ಯೆಗಳು ಆಗಲಿದೆ.

Comments are closed.