ಆರೋಗ್ಯ

ಯಾವ ಒಂದು ಯೋಗಾಸನದಿಂದ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಬಹುದು ಗೋತ್ತೆ?

Pinterest LinkedIn Tumblr

ಈ ಯೋಗಾಸನ ಮಾಡುವುದರಿಂದ ಥೈರಾಯ್ಡ್ ಸಮಸ್ಯೆಯನ್ನು ನಿಯಂತ್ರಿಸಬಹುದು. ಮನುಷ್ಯ ಎಂದಮೇಲೆ ಒಂದಲ್ಲ ಒಂದು ಸಮಸ್ಯೆಗಳು ಇದ್ದೆ ಇರುತ್ತವೆ ಮನುಷ್ಯನ ಆಗಿ ಹುಟ್ಟಿದ ಮೇಲೆ ಜೀವನದಲ್ಲಿ ಏನೇ ಬಂದರು ಸಹ ಅದನ್ನು ಧೈರ್ಯದಿಂದ ಎದುರಿಸಲೇಬೇಕು ಹಾಗೇನೇ ಈ ಮನುಷ್ಯನ ಆರೋಗ್ಯದಲ್ಲಿಯೂ ಸಹ ಅಷ್ಟೇ ಏನಾದರೂ ಸಮಸ್ಯೆ ಇದ್ದೆ ಇರುತ್ತದೆ ಏಕೆಂದರೆ ಕಾಲ ಕಳೆದಂತೆ ನಮ್ಮ ಬದಲಾದ ಜೀವನ ಶೈಲಿಯೇ ನಮಗೆ ಬರುವ ಹಲವಾರು ಕಾಯಿಲೆಗಳಿಗೆ ದಾರಿ ಮಾಡಿಕೊಟ್ಟಿದೆ ಹಿಂದಿನ ಕಾಲದಲ್ಲಿ ಪೂರ್ವಜರು ರೊಟ್ಟಿ ತಿಂದು ಗಟ್ಟಿಯಾಗಿ ಇರುತ್ತಿದ್ದರು ಆದರೆ ಇಂದಿನ ಕಾಲದಲ್ಲಿ ಈ ಪೀಳಿಗೆಯವರು ನಾವುಗಳು ಮೈದಾ ಪರೋಟ, ಎಣ್ಣೆ ಪೂರಿ ತಿಂದು ಗಾಳಿಗೆ ಹಾರ್ತಾ ಇದ್ದೀವಿ ಅಂದ್ರೆ ಇಷ್ಟೇ ನಮಗೂ ಅವರಿಗೂ ಇರೋ ವ್ಯತ್ಯಾಸ

ಅವರು ಶಕ್ತಿ ಜೊತೆಗೆ ಬಾಯಿರುಚಿ ತಿನ್ನುತ್ತಿದ್ದರು ನಾವು ಬಾಯಿರುಚಿ ಜೊತೆಗೆ ಅಲ್ಲೋ ಇಲ್ಲೊ ಸ್ವಲ್ಪ ಶಕ್ತಿ ಪಡೆಯುತ್ತೇವೆ ಹಾಗಾಗಿ ಎಲ್ಲಿಲ್ಲದ ಕಾಯಿಲೆಗಳು ನಮ್ಮನ್ನು ಹುಡುಕಿಕೊಂಡು ಬರುತ್ತಿವೆ ಆದ್ದರಿಂದ ಇಂದಿನ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ ರಕ್ತದೊತ್ತಡ ಸಕ್ಕರೆಕಾಯಿಲೆ ಎಂತೆಯೇ ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ಕೂಡ ಒಂದು ಸಾಮಾನ್ಯ ಕಾಯಿಲೆ ಎನ್ನುವಂತಾಗಿದೆ.

ಥೈರಾಯ್ಡ್ ಗ್ರಂಥಿ ಹೆಚ್ಚು ಥೈರಾಯ್ಡ್ ಉತ್ಪಾದಿಸಲು ಪ್ರಾರಂಭಿಸುತ್ತದೆ ಈ ಕಾರಣದಿಂದಾಗಿ ನಮಗೆ ಅನೇಕ ಸಮಸ್ಯೆಗಳು ಕಾಡಲು ಶುರುವಾಗುತ್ತವೆ ಸರಿಯಾದ ಸಮಯದಲ್ಲಿ ಈ ಥೈರಾಯ್ಡ್ ಕಾಯಿಲೆಯನ್ನು ಗುರುತಿಸಿ ಅದಕ್ಕೆ ಸರಿಯಾದ ಚಿಕಿತ್ಸೆ ಪಡೆಯದೆ ಹೋದಲ್ಲಿ ಅದಕ್ಕೆ ಅಪಾಯವನ್ನು ಸಹ ನಾವು ಎದುರಿಸಬೇಕಾಗುತ್ತದೆ. ಔಷಧಿ ಮಾತ್ರೆಗಳ ಜೊತೆಗೆ ಯೋಗಾಸನಗಳು ಸಹ ಈ ಥೈರಾಯ್ಡನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ.

ಹಾಗಾದರೆ ಈ ಥೈರಾಯ್ಡ್ ಕಾಯಿಲೆಯನ್ನು ಯಾವ ಒಂದು ಯೋಗಾಸನದಿಂದ ದೂರ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಥೈರಾಯ್ಡ್ ರೋಗಿಗಳಿಗೆ ಬಾಲಾಸನ ಬಹಳ ಒಳ್ಳೆಯದು ಇದನ್ನು ಮಕ್ಕಳ ಭಂಗಿ ಎಂದು ಕೂಡ ಕರೆಯುತ್ತಾರೆ ಉದ್ವೇಗ ಹಾಗೂ ಅಧಿಕ ಒತ್ತಡವನ್ನು ಈ ಯೋಗಾಸನ ಕಡಿಮೆ ಮಾಡುತ್ತದೆ ಈ ಯೋಗಾಸನ ಮಾಡುವುದರಿಂದ ರಕ್ತ ದೇಹದ ತುಂಬೆಲ್ಲ ಸರಾಗವಾಗಿ ಹರಡುತ್ತದೆ. ಈ ಬಾಲಾಸನ ಮಾಡುವವರು ಉಸಿರಾಟದ ಕ್ರಮವನ್ನು ಸರಿಯಾಗಿ ತಿಳಿದು ಕೊಂಡಿರಬೇಕು ದೇಹಕ್ಕೆ ವಿಶ್ರಾಂತಿ ನೀಡಲು ಮತ್ತು ಮೆದುಳಿಗೆ ಶಾಂತಿ ನೀಡಲು ಶವಾಸನವು ತುಂಬಾ ಪ್ರಯೋಜನಕಾರಿಯಾಗಿದೆ ಅಧಿಕ ರ ಕ್ತದೊತ್ತಡ ಮತ್ತು ನಿದ್ರಾ ಹೀನತೆಯನ್ನು ಈ ಶವಾಸನ ದೂರ ಮಾಡುತ್ತದೆ ಈ ಯೋಗವನ್ನು ಮಾಡುವುದು ತುಂಬಾ ಸುಲಭ.

ಅನುಲೋಮ ವಿಲೋಮ ಕೂಡ ಥೈರಾಯ್ಡ್ ನಿಯಂತ್ರಣಕ್ಕೆ ಸಹಾಯಕಾರಿ ಯಾಗಿವೆ ಇದನ್ನು ಮಾಡುವುದು ಕೂಡ ಸುಲಭ ಉಸಿರಾಟದ ವಿಧಾನವನ್ನು ಕೂಡ ಇದರಲ್ಲಿ ಸರಿಯಾಗಿ ತಿಳಿದುಕೊಂಡಿರಬೇಕು ಥೈರಾಯ್ಡ್ ನಿಂದ ಬಳಲುವವರು ಯೋಗ ತಜ್ಞರಿಂದ ತರಬೇತಿ ಪಡೆದು ಪ್ರತಿದಿನ ಯೋಗ ಮಾಡುವುದು ತುಂಬಾನೇ ಒಳ್ಳೆಯದು ಕೇವಲ ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ಸೇವಿಸುವ ಬದಲು ನಮ್ಮ ದೇಹವನ್ನು ಕೂಡ ನಾವು ದಂಡಿಸಬೇಕು ಅಂದರೆ ಯೋಗ ಮಾಡಬೇಕು ಇದರಿಂದ ದೇಹದ ಅಂಗಾಂಗಗಳು ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತವೆ ಎಂತಹ ತೊಂದರೆ ಇದ್ದರು ಕೂಡ ಅದನ್ನು ಯೋಗ ಮಾಡುವುದರಿಂದ ಸ್ವಲ್ಪ ಮಟ್ಟಿಗೆಯಾದರು ನಿಯಂತ್ರಣಕ್ಕೆ ತರಬಹುದು.

Comments are closed.