ಈ ಸಮಸ್ಯೆ ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಅನ್ವಯವಾಗುತ್ತದೆ, ಏಕೆಂದರೆ ಆರ್ಥಿಕವಾಗಿ ಒಂದು ಹಂತದ ವರೆಗೆ ತಲುಪುವವರೆಗೂ ಈಗಿನ ಗಂಡಾಗಲೀ ಅಥವಾ ಹೆಣ್ಣಾಗಲೀ ಮದುವೆಯಾಗಲು ಇಚ್ಚಿಸುವುದಿಲ್ಲ, ಹಾಗೂ ಸ್ವಾಭಿಮಾನಿಗಳಾಗಿ ಬದುಕಲು ಬಯಸುವವರೇ ಹೆಚ್ಚು, ಈ ಕಾರಣಗಳಿಂದಾಗಿಯೇ ಮದುವೆಯಾಗಲು ಬಹಳ ಸಮಯವನ್ನು ತೆಗೆದುಕೊಳ್ಳುತ್ತಾರೆ, ತಡವಾಗಿ ಮದುವೆಯಾಗಿ ತಡವಾಗಿ ಗರ್ಭ ಧರಿಸಿ ಅವಧಿಪೂರ್ವ ಮಗುವಿಗೆ ಜನ್ಮ ನೀಡಿದ ಬಗ್ಗೆ ನಡೆದಿರುವ ಅಧ್ಯಯನಗಳು ವರದಿಗಳ ಪ್ರಕಾರ ತಡವಾಗಿ ಅಂದರೆ ವಯಸ್ಸು ಹೆಚ್ಚಿದ ಮೇಲೆ ಗರ್ಭ ಧರಿಸುವ ಮಹಿಳೆಯರಿಗೆ ಅವರು ಪೂರ್ಣವೇ ಮಗುವಿಗೆ ಜನ್ಮ ನೀಡುತ್ತಾಳೆ.
ಹೀಗೆ ತಡವಾಗಿ ಗರ್ಭ ಧರಿಸಿ ಅವಧಿಪೂರ್ವ ಮಗು ಪಡೆಯುವುದರಿಂದ ಆಗುವ ಸಮಸ್ಯೆಗಳೆಂದರೆ ಜನನ ಸಂಬಂಧ ಸಮಸ್ಯೆಗಳು ಮತ್ತು ಸಂಕೀರ್ಣತೆಗಳು ಅಧಿಕವಾಗುತ್ತವೆ, ತಡವಾಗಿ ಮದುವೆಯಾಗುವುದರಿಂದ ಗರ್ಭ ಧರಿಸುವುದು ತಡವಾಗುತ್ತಿತ್ತು ಇದರಿಂದ ಅಕಾಲಿಕ ಅಂದರೆ ಅವಧಿಗೆ ಮುನ್ನವೇ ಮಕ್ಕಳು ಆಗುತ್ತದೆ ಇದರ ಜೊತೆಗೆ ತಡವಾಗಿ ಮದುವೆಯಾಗುವುದರಿಂದ ಗರ್ಭಧಾರಣೆ ಪ್ರಮಾಣ ಸಹ ಕಡಿಮೆಯಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ ಮೊದಲ ಮಗುವನ್ನು ಪಡೆಯುವ ವಯಸ್ಸು ಅಧಿಕವಾಗಿರುತ್ತದೆ ಎಂತೆ ಇದು ಹಲವು ಅಪಾಯಗಳಿಗೆ ಮತ್ತು ಸಮಸ್ಯೆಗಳಿಗೆ ಕಾರಣವಾಗಬಹುದು ಅಂತೆ, ಇನ್ನೂ ಸರಾಸರಿ 35ನೇ ವಯಸ್ಸಿಗೆ ಮಗುವನ್ನು ಪಡೆಯುವ ಪ್ರತಿ ನಾಲ್ಕು ಮಹಿಳೆಯರಲ್ಲಿ ಒಬ್ಬರಲ್ಲಿ ಪ್ರಸವ ಸಂಬಂಧಿತ ಗಂಭೀರ ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಿದ್ದಾರೆ ವೈದ್ಯರು. ಹಾಗಾಗಿ ಮದುವೆಯಾದ ದಂಪತಿಗಳು ಗರ್ಭಧಾರಣೆಗೆ ವಿಳಂಬ ಮಾಡುವುದು ಮಗುವಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ,
Comments are closed.