ಆರೋಗ್ಯ

ದುಂಡು ಕೆನ್ನೆಯ ಸೌಂದರ್ಯ ನಿಮ್ಮದಾಗಿಸಲು ಪೂರಕ ವ್ಯಾಯಾಮ

Pinterest LinkedIn Tumblr

ದುಂಡು ಕೆನ್ನೆಯ ಮೇಲೆ ಎಲ್ಲರ ಕಣ್ಣಿರುತ್ತದೆ. ಅಂತಹ ಕೆನ್ನೆಯನ್ನು ಹೊಂದಲು ಕನಸುತ್ತಾರೆ ಹಲವರು. ಏಕೆಂದರೆ ನಿಮ್ಮ ಲುಕ್‌ ಮೇಲೆ ನಿಮ್ಮ ಕೆನ್ನೆ ಪ್ರಮುಖ ಪಾತ್ರ ವಹಿಸುತ್ತದೆ. ಅದು ನಿಮ್ಮ ವಯಸ್ಸನ್ನು ಮರೆ ಮಾಡುವ ಕೆಲಸ ಮಾಡುತ್ತದೆ. ತುಂಬಿದ ಕೆನ್ನೆ ಆಕರ್ಷಕವಾಗಿ ಕಾಣುತ್ತದೆ. ಅದೇ ಕಾರಣಕ್ಕೆ ತುಂಬಿದ ಕೆನ್ನೆಯ ಹಿಂದೆ ಹಲವರು ಬೀಳುತ್ತಾರೆ.

ತುಂಬಿದ ಕೆನ್ನೆ ನಿಮ್ಮದಾಗಬೇಕು ಅಂದರೆ ಕೆನ್ನೆ ತುಂಬ ಕೊಬ್ಬನ್ನು ತುಂಬುವುದಲ್ಲ. ಸ್ವಲ್ಪ ಶ್ರಮವಹಿಸಿದರೆ ಅಂತಹ ತುಂಬಿದ ಕೆನ್ನೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ಅದಕ್ಕಾಗಿ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಮನೆಯಲ್ಲೇ ಸಿಗುವ ವಸ್ತುಗಳಿಂದ ಸುಂದರ ವದನ ನಿಮ್ಮದಾಗಿಸಿಕೊಳ್ಳಬಹುದು.

ಮುಖದ ವ್ಯಾಯಾಮದಿಂದ ಉಬ್ಬಿದ ಕೆನ್ನೆ ನಿಮ್ಮದಾಗಿಸಿಕೊಳ್ಳಬಹುದು. ಮುಖದ ಆರೋಗ್ಯಕ್ಕೆ ಪೂರಕವಾದ ವ್ಯಾಯಾಮ ಮಾಡಿ. ಇದು ಮುಖದ ಸೌಂದರ‍್ಯ ಹಾಗೂ ಆರೋಗ್ಯವನ್ನು ಹೆಚ್ಚಿಸುತ್ತದೆ.

ಆಗಾಗ ಬಲೂನ್‌ ಊದುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಕೆನ್ನೆಯ ಭಾಗದ ಮಾಂಸಖಂಡಗಳ ಆರೋಗ್ಯ ವೃದ್ಧಿಸುತ್ತವೆ.

ಆಲಿವ್‌ ಆಯಿಲ್‌ ತ್ವಚೆಯನ್ನು ಆರೋಗ್ಯಪೂರ್ಣವಾಗಿ ಇಡುವುದಲ್ಲದೆ ಹೊಳಪು ನೀಡುತ್ತದೆ. ನಿತ್ಯ ಒಂದು ಚಮಚ ಆಲಿವ್‌ ಆಯಿಲ್‌ ಸೇವಿಸಿ. ನೆರಿಗೆಗಳು ಬೀಳದಂತೆ ನೋಡಿಕೊಳ್ಳುತ್ತದೆ.

ಅಲೋವೆರಾ ನೈಸರ್ಗಿಕವಾಗಿ ತ್ವಚೆಯನ್ನು ಬಿಗಿಗೊಳಿಸುವ ಗುಣ ಹೊಂದಿದೆ. ಆ್ಯಂಟಿ ಆಕ್ಸಿಡೆಂಟ್‌ ಗುಣ ಹೊಂದಿರುವ ಇದು ತ್ವಚೆಯ ಮೇಲೆ ಮೊಡವೆ ಅಥವಾ ಕಪ್ಪು ಕಲೆ ಮೂಡದಂತೆ ನೋಡಿಕೊಳ್ಳುತ್ತದೆ. ಆದ್ದರಿಂದ ನಿತ್ಯವೂ ಮುಖಕ್ಕೆ ಅಲೋವೆರಾ ರಸ ಹಚ್ಚಿ.

1 ಟೇಬಲ್‌ ಚಮಚ ಮೆಂತ್ಯೆ ಪುಡಿಗೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಪೇಸ್ಟ್‌ ಮಾಡಿ. ಮುಖಕ್ಕೆ ಹಚ್ಚಿ 10 ನಿಮಿಷ ಬಿಡಿ. ವಿಟಮಿನ್‌ ಹಾಗೂ ಆ್ಯಂಟಿ ಆಕ್ಸಿಡೆಂಟ್‌ ಗುಣ ಹೊಂದಿರುವ ಇದನ್ನು ಪ್ರತಿನಿತ್ಯ ಹಚ್ಚುವುದರಿಂದ ಸುಂದರ ಕೆನ್ನೆ ನಿಮ್ಮದಾಗುತ್ತದೆ.

ರೋಸ್‌ ವಾಟರ್‌ ಹಾಗೂ ಗ್ಲಿಸರಿನ್‌ ಮಿಕ್ಸ್‌ ಮಾಡಿ ರಾತ್ರಿ ಮಲಗುವಾಗ ಹಚ್ಚಿ. ಮರುದಿನ ಬೆಚ್ಚನೆಯ ನೀರಿನಲ್ಲಿ ಮುಖ ತೊಳೆಯಿರಿ.

ಪಪ್ಪಾಯದ ಜತೆ ಜೇನುತುಪ್ಪವನ್ನು ಸೇರಿಸಿ ಮುಖಕ್ಕೆ ಹಚ್ಚಿ. 10ರಿಂದ 15 ನಿಮಿಷ ಹಾಗೆ ಬಿಡಿ. ಅನಂತರ ಬೆಚ್ಚನೆಯ ನೀರಿನಿಂದ ಮುಖ ತೊಳೆಯಿರಿ.

ಸೇಬುಹಣ್ಣನ್ನು ಬೇಯಿಸಿ ತಿರುಳನ್ನು ತೆಗೆದು ಮುಖಕ್ಕೆ ಹಚ್ಚಿ. ಕೆಲವು ದಿನಗಳ ನಂತರ ಬದಲಾವಣೆ ಕಾಣಿಸುತ್ತದೆ.

ಮುಖಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚಿ 30 ನಿಮಿಷ ಹಾಗೆ ಬಿಡಿ. ನಿಯಮಿತವಾಗಿ ಹಾಗೆ ಬಿಡುವುದರಿಂದ ತ್ವಚೆಯ ಆರೋಗ್ಯ ವೃದ್ಧಿಯಾಗುತ್ತದೆ.

ಆರೋಗ್ಯದಾಯಕ ಆಹಾರ ಸೇವಿಸಿ.

ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ.

Comments are closed.