ಆರೋಗ್ಯ

ಈ ಎರಡರ ಜೋಡಿ ಬಹಳಷ್ಟು ಕಾಯಿಲೆಗಳಿಗೆ ರಾಮಬಾಣ.

Pinterest LinkedIn Tumblr

ಬಹಳ ಹಿಂದಿನಿಂದಲೂ ಜೇನು ಆಹಾರವಾಗಿಯೂ ಔಷಧಿಯಾಗಿಯೂ ಉಪಯೋಗಿಸಲ್ಪಡುತ್ತಿದೆ. ದಾಲ್ಚಿನ್ನಿಯ (ಲವಂಗಪಟ್ಟೆ, ಅಥವಾ ಚಕ್ಕೆ) ಉಪಯೋಗ ಬಹುತೇಕ ಮಸಾಲೆಯಾಗಿ ಮಾತ್ರ ಇತ್ತು. ಆದರೆ ಕೆಲವೆಡೆ ಮಾತ್ರ ದಾಲ್ಚಿನ್ನಿಯನ್ನು ಔಷಧಿಯಾಗಿ ಬಳಸಲ್ಪಡುತ್ತದೆ.

ಈ ಎರಡರ ಜೋಡಿ ಬಹಳಷ್ಟು ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದೆ. ಈ ಸಂಯೋಜನೆಯಿಂದ ಹೈಡ್ರೋಜನ್ ಪೆರಾಕ್ಸೈಡ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿರುವ ಅತಿಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತವೆ. ದಕ್ಷಿಣ ಅಮೇರಿಕಾದಲ್ಲಿ ಕಳೇಬರವನ್ನು ಅತಿಹೆಚ್ಚು ಕಾಲ ಕೆಡದಿರಲು ಉಪಯೋಗಿಸುವ ಮಸಾಲೆಯಲ್ಲಿ ಈ ಜೋಡಿಯ ಪ್ರಸ್ತಾಪವಿದೆ. ಇದೇ ಕಾರಣದಿಂದ ಈ ಜೋಡಿಯನ್ನು ಉಪಯೋಗಿಸಿ ತಯಾರಿಸಲಾದ ಅಡುಗೆಗಳು ಸಹಾ ಬಹುಕಾಲ ಕೆಡದಿರುತ್ತವೆ.

ವಿಶ್ವಕ್ಕೆ ನಮ್ಮ ದೇಶದ ಕೊಡುಗೆಯಾದ ಆಯುರ್ವೇದದಲ್ಲಿಯೂ ಈ ಜೋಡಿಯ ಮಹತ್ವವನ್ನು ಸಾರಲಾಗಿದೆ. “ಯೋಗವಾಹಿ”ಅಥವಾ ಮೂಲಿಕೆಗಳ ಉತ್ತಮಗುಣಗಳನ್ನು ಜೀವಕೋಶಗಳವರೆಗೆ ತಲುಪಿಸುವ ವಾಹಕ ಎಂದು ಬಣ್ಣಿಸಲಾಗಿದೆ. ಕೆಮ್ಮು ನೆಗಡಿ ಇದ್ರೆ ಚೆಕ್ಕೆ ಮಸಾಲಾ ಟೀ ಕುಡೀರಿ. ಈ ಜೋಡಿಯೊಂದಿಗೆ ಬೇರೆ ಗಿಡಮೂಲಿಕೆಗಳನ್ನು ಸೇರಿಸಿದರೆ ಆ ಮೂಲಿಕೆಯ ಗುಣಪಡಿಸುವ ಶಕ್ತಿ ಇನ್ನಷ್ಟು ಹೆಚ್ಚಿ ಪ್ರತಿ ಜೀವಕೋಶವನ್ನೂ ಪುನಃಶ್ಚೇತನಗೊಳಿಸುವುದು ಎಂದು ವಿವರಿಸಲಾಗಿದೆ. ನಮ್ಮ ದೇಹದ ಹಲವು ವ್ಯಾಧಿಗಳಿಗೆ ಈ ಜೋಡಿ ತಕ್ಕ ಪರಿಹಾರ ನೀಡುತ್ತದೆ. ವಿವಿಧ ಕಾಯಿಲೆಗಳಿಗೆ ಈ ಜೋಡಿಯನ್ನು ಹೇಗೆ ಬಳಸಬಹುದು ಎಂದು ಈ ಲೇಖನದಲ್ಲಿ ವಿವರಿಸಲಾಗಿದೆ. ಉತ್ತಮ ಆರೋಗ್ಯದ ಸೂತ್ರ ಚಕ್ಕೆಯಲ್ಲಿದೆ

ಆರ್ಥೈಟಿಸ್ (ಸಂಧಿವಾತ)
ಮೂಳೆಗಳು ಕೂಡುವಲ್ಲಿರುವ ಸಂಧಿಗಳ ನಡುವೆ ಹೆಚ್ಚು ಸವೆಯವಾಗಿ ಉಂಟಾಗುವ ಕೀಲುನೋವು ಅಥವಾ ಸಂಧಿವಾತಕ್ಕೆ ಈ ಕ್ರಮ ಅನುಸರಿಸಿ: ಒಂದು ಲೋಟ ಬಿಸಿನೀರಿಗೆ ಎರಡು ಚಮಚ ಜೇನು ಮತ್ತು ಒಂದು ಚಿಕ್ಕ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸಿ. ನಿತ್ಯದ ಸೇವನೆಯಿಂದ ಅತಿಹೆಚ್ಚು ಬಾಧಿತವಾಗಿದ್ದ ಕೀಲುನೋವು ಸಹಾ ಕಡಿಮೆಯಾಗಿರುವುದು ಕಂಡುಬಂದಿದೆ.

ಮೂತ್ರಕೋಶದ ಸೋಂಕು
ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಜೇನು ಮತ್ತು ಎರಡು ದೊಡ್ಡಚಮಚ ದಾಲ್ಚಿನ್ನಿಪುಡಿಯನ್ನು ಸೇರಿಸಿ ಕುಡಿಯಿರಿ. ಮೂತ್ರಕೋಶದ ಸೋಂಕಿಗೆ ಕಾರಣವಾದ ಕ್ರಿಮಿಗಳು ಒಂದೇ ಬಾರಿ ನಾಶವಾಗುತ್ತವೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸಲು
ಸುಮಾರು ಅರ್ಧ ಲೀಟರ್ ನೀರಿನಲ್ಲಿ ಎರಡು ಚಮಚ ಟೀಪುಡಿ (ಕಪ್ಪು ಟೀ), ಎರಡು ದೊಡ್ಡ ಚಮಚ ಜೇನು ಮತ್ತು ಮೂರು ಚಿಕ್ಕಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಕುದಿಸಿ ಸೋಸಿ ಕುಡಿಯಿರಿ. ಕುಡಿದ ಬಳಿಕ ಕೇವಲ ಎರಡು ಗಂಟೆಗಳಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಶೇಖಡಾ ಹತ್ತರಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.

ಶೀತ, ನೆಗಡಿಗೆ
ಒಂದು ದೊಡ್ಡ ಚಮಚ ಉಗುರುಬೆಚ್ಚನೆಯ ಜೇನಿಗೆ ಕಾಲು ಚಿಕ್ಕಚಮಚ ದಾಲ್ಚಿನ್ನಿಪುಡಿ ಹಾಕಿ ಪ್ರತಿದಿನ ಮೂರು ಬಾರಿ ಕುಡಿಯುವುದರಿಂದ ಭಾರೀ ಶೀತವೂ ಕಡಿಮೆಯಾಗುತ್ತದೆ. ಮುಚ್ಚಿದ್ದ ಮೂಗಿನ ಹೊಳ್ಳೆಗಳು ತೆರೆದುಕೊಳ್ಳುತ್ತವೆ, ಕೆಮ್ಮು, ನೆಗಡಿ ಕಡಿಮೆಯಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಗೆ
ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಪ್ರತಿದಿನ ನೀವು ಸೇವಿಸುವ ಗೋಧಿಹಿಟ್ಟಿನ ಬ್ರೆಡ್ (brown bread)ನ ಬದಿಗಳಿಗೆ ಸವರಿ ಬೆಳಗ್ಗಿನ ಉಪಾಹಾರವಾಗಿ ಸೇವಿಸಿ. ಇದರಿಂದ ಹೃದಯಕ್ಕೆ ರಕ್ತಪೂರೈಸುವ ಧಮನಿಗಳಲ್ಲಿ ಸೇರಿಕೊಂಡಿದ್ದ ಕೆಟ್ಟ ಕೊಲೆಸ್ಟರಾಲ್ ಕರಗಿ ಹೃದಯಾಘಾತವಾಗುವುದರಿಂದ ಕಾಪಾಡುತ್ತದೆ.

ಹೊಟ್ಟೆಯಲ್ಲಿನ ಹುಣ್ಣುಗಳಿಗೆ (ಅಲ್ಸರ್)
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಊಟಕ್ಕೂ ಮೊದಲು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಅಲ್ಸರ್ ಗಳನ್ನು ನಿವಾರಿಸುತ್ತದೆ.

ವಾಯುಬದ್ದತೆ
ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕುಡಿಯುವುದರಿಂದ ವಾಯುಪ್ರಕೋಪ ಕಡಿಮೆಯಾಗುತ್ತದೆ.

ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು
ಪ್ರತಿದಿನ ಒಂದು ಚಮಚದಷ್ಟು ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿಯ ದ್ರಾವಣವನ್ನು ಚ್ಯವನ್ ಪ್ರಾಶ್ ನಂತೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ಧಾಳಿಯಿಂದ ದೇಹ ರಕ್ಷಣೆ ಪಡೆಯಲು ಹೆಚ್ಚು ಸಮರ್ಥವಾಗುತ್ತದೆ.

ಅಜೀರ್ಣವಾದರೆ
ಊಟಕ್ಕೂ ಮೊದಲು ಎರಡು ದೊಡ್ಡ ಚಮಚ ಜೇನಿನ ಮೇಲೆ ಎರಡು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಉದುರಿಸಿ ಸೇವಿಸುವ ಮೂಲಕ ಅಜೀರ್ಣವಾಗುವ ತೊಂದರೆಯನ್ನು ನಿವಾರಿಸುತ್ತದೆ.

ಇನ್ಫ್ಲುಯೆಂಜಾ ಜ್ವರ
ಮುಕ್ಕಾಲು ಭಾಗ ಜೇನು ಮತ್ತು ಕಾಲು ಭಾಗ ದಾಲ್ಚಿನ್ನಿಪುಡಿ ಸೇರಿಸಿದ ದ್ರಾವಣವನ್ನು ಸೇವಿಸುವುದರಿಂದ ದೇಹ ಇನ್ಫ್ಲುಯೆಂಜಾ ಮತ್ತು ಫ್ಲೂ ಜ್ವರಗಳಿಂದ ಶೀಘ್ರ ಹೊರಬರುತ್ತದೆ.

ವೃದ್ಧಾಪ್ಯವನ್ನು ದೂರವಿಡಲು
ಮೂರು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ನಾಲ್ಕು ಚಮಚ ಜೇನು ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಕಲಕಿ ಕುದಿಸಿ ತಣಿಸಿ. ಈ ಪಾನೀಯವನ್ನು ಒಂದು ದಿನದ ಮೂರು ಹೊತ್ತಿನಲ್ಲೂ ಒಂದೊಂದು ಲೋಟ ಕುಡಿಯುವುದರ ಮೂಲಕ ವೃದ್ಧಾಪ್ಯವನ್ನು ದೂರವಿಡಬಹುದು.

ಮೊಡವೆಗಳಿಗೆ
ಮೂರು ಚಮಚ ಜೇನು ಮತ್ತು ಒಂದು ಚಮಚ ದಾಲ್ಚಿನ್ನಿಪುಡಿಯನ್ನು ಸೇರಿಸಿ ದಟ್ಟವಾದ ದ್ರಾವಣವನ್ನು ತಯಾರಿಸಿ. ಮಲಗುವ ಮುನ್ನ ಮೊಡವೆಗಳ ಮೇಲೆ ನಯವಾಗಿ ಸವರಿ ಬೆಳಿಗ್ಗೆ ಎದ್ದ ಕೂಡಲೇ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಎರಡು ವಾರದಲ್ಲಿ ಮೊಡವೆಗಳು ಕಾಣದಂತಾಗುತ್ತವೆ ಹಾಗೂ ಕಲೆಯಿಲ್ಲದ ಹೊಸ ಚರ್ಮ ಬೆಳೆಯುತ್ತದೆ.

ತೂಕ ಇಳಿಸಲು
ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೇನು ಮತ್ತು ಒಂದು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಕುದಿಸಿ ತಣಿಸಿ. ಈ ಪಾನೀಯವನ್ನು ಬೆಳಿಗ್ಗೆದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಸೇವಿಸಿ ಅರ್ಧ ಗಂಟೆಯ ಬಳಿಕ ಉಪಾಹಾರ ಸೇವಿಸಿ. ರಾತ್ರಿ ಸಹಾ ಒಂದು ಲೋಟ ಸೇವಿಸಿ ನಿದ್ರಿಸಿ. ಇದರಿಂದಾಗಿ ದೇಹದಲ್ಲಿ ಶೇಖರವಾಗಿದ್ದ ಕೊಬ್ಬು ನಿಧಾನವಾಗಿ ಕರಗುತ್ತದೆ.

ಚರ್ಮದ ಸೋಂಕು ನಿವಾರಿಸಲು
ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿಪುಡಿಯನ್ನು ತುರಿಕೆಯಿರುವ ಚರ್ಮದ ಮೇಲೆ ನಯವಾಗಿ ಸವರಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ತುರಿಕೆ, ಹುಳಕಡ್ಡಿ ಮೊದಲಾದ ಹಲವು ಚರ್ಮವ್ಯಾಧಿಗಳು ಗುಣವಾಗುತ್ತವೆ.

ಬಳಲಿಕೆಯ ಪರಿಹಾರಕ್ಕೆ
ವಯಸ್ಸಾದಂತೆ ದೇಹದ ಶಕ್ತಿಯೂ ಕುಂದುತ್ತಾ ಬರುತ್ತದೆ. ಸ್ವಲ್ಪ ಓಡಾಡಿದರೂ ಹೆಚ್ಚಿನ ದಣಿವಾಗುತ್ತದೆ. ದೇಹದ ಆಂತರಿಕ ಶಕ್ತಿಯನ್ನು ಹೆಚ್ಚಿಸಲು ಒಂದು ಲೋಟ ನೀರಿನಲ್ಲಿ ಅರ್ಧ ಚಮಚ ಜೇನು ಮತ್ತು ಒಂದೆರಡು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ ಬೆಳಿಗ್ಗೆ ಹಲ್ಲುಜ್ಜಿದ ಬಳಿಕ ಮತ್ತು ಮಧ್ಯಾಹ್ನದ ಊಟದ ಬಳಿಕ ಸೇವಿಸಿ. ಒಂದು ವಾರದಲ್ಲಿಯೇ ದೇಹದ ಶಕ್ತಿ ಹೆಚ್ಚಿರುವುದು ಗಮನಕ್ಕೆ ಬರುತ್ತದೆ.

ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲು
ಹೊಟ್ಟೆ ಮತ್ತು ಮೂಳೆಗಳ ಕ್ಯಾನ್ಸರ್ ಇರುವ ರೋಗಿಗಳು ಸಮಪ್ರಮಾಣದಲ್ಲಿ ಬೆರೆಸಿದ ಜೇನು ಮತ್ತು ದಾಲ್ಚಿನ್ನಿ ಪುಡಿಯ ದ್ರಾವಣವನ್ನು ಪ್ರತಿದಿನ ಒಂದು ದೊಡ್ಡಚಮಚದಂತೆ ಮೂರು ಹೊತ್ತು ಸೇವಿಸುವುದರಿಂದ ಪರಿಣಾಮ ದೊರಕುತ್ತದೆ. ಈ ಚಿಕಿತ್ಸೆಯನ್ನು ಒಂದು ತಿಂಗಳು ನಡೆಸಬೇಕು.

ಶ್ರವಣಶಕ್ತಿಯಲ್ಲಿ ಕುಂಠಿತವಾದರೆ
ಸಾಮಾನ್ಯವಾಗಿ ಅಕ್ಕಪಕ್ಕದ ಹಲವು ಶಬ್ದಗಳಿಂದ ಶ್ರವಣಶಕ್ತಿ ಕುಂಠಿತವಾಗುತ್ತಾ ಬರುತ್ತದೆ. ಉದಾಹರಣೆಗೆ ಬಸ್ ಪ್ರಯಾಣದ ಸಮಯ. ಬಸ್ಸಿನಲ್ಲಿಯೇ ಜೀವನ ಸಾಗಿಸುವ ಡ್ರೈವರ್ ಕಂಡಕ್ಟರುಗಳು, ದೊಡ್ಡಶಬ್ದದ ಕಾರ್ಖಾನೆಯ ಕಾರ್ಮಿಕರು ಈ ತೊಂದರೆಗೆ ಹೆಚ್ಚು ಒಳಗಾಗುತ್ತಾರೆ. ಜೇನು ಮತ್ತು ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ಸೇರಿಸಿದ ದ್ರಾವಣವನ್ನು ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಸೇವಿಸುವುದರಿಂದ ಶೀಘ್ರ ಪರಿಣಾಮ ಕಂಡುಬರುತ್ತದೆ.

ತಯಾರಿಸುವ ವಿಧಾನ
ಈ ಅದ್ಭುತ ಔಷಧಿಯನ್ನು ನೀವು ಮನೆಯಲ್ಲಿಯೇ ತಯಾರಿಸಿಟ್ಟುಕೊಂಡು ಕ್ರಮೇಣ ಉಪಯೋಗಿಸಬಹುದು.ವಿಧಾನ: ಒಂದು ಕಪ್ ಅಳತೆಯ ನೀರಿಗೆ ಎರಡು ದೊಡ್ಡಚಮಚ ಜೇನು ಮತ್ತು ಒಂದು ದೊಡ್ಡಚಮಚ ದಾಲ್ಚಿನ್ನಿಪುಡಿಯನ್ನು ಸೇರಿಸಿ ಕುದಿಸಿ. ಸುಮಾರು ಐದರಿಂದ ಎಂಟು ನಿಮಿಷಗಳವರೆಗೆ ಕುದಿಸಿದ ಬಳಿಕ ಕೆಳಕ್ಕಿಳಿಸಿ ತಣಿಸಿ. ಈ ದ್ರಾವಣವನ್ನು ಪ್ರತಿದಿನ ಎರಡು ಅಥವಾ ಮೂರು ಹೊತ್ತು ಸೇವಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.

Comments are closed.