ಆರೋಗ್ಯ

ದುಬೈನಿಂದ ಬಂದ ಉಡುಪಿಯ 63 ವರ್ಷದ ವೃದ್ದೆಗೆ ಕೊರೋನಾ‌ ಪಾಸಿಟಿವ್: ಮಂಗಳೂರು ಆಸ್ಪತ್ರೆಗೆ ದಾಖಲು

Pinterest LinkedIn Tumblr

ಉಡುಪಿ: ಕಳೆದ ಕೆಲ ದಿನಗಳಿಂದ ಕೋವಿಡ್-19 ಕೊರೋನಾ ಪಾಸಿಟಿವ್ ಪ್ರಕರಣಗಳಿಲ್ಲದೆ ನಿರಾಳವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ.

ಸೋಂಕಿತರನ್ನು P142 ಎಂದು ಹೇಳಲಾಗಿದ್ದು ಅವರು 63 ವರ್ಷ ಪ್ರಾಯದ ವೃದ್ದೆಯಾಗಿದ್ದಾರೆ. ಇವರು ದುಬೈನಿಂದ ಮಾ.22 ರಂದು ಭಾರತಕ್ಕೆ ವಾಪಾಸ್ ಆಗಿದ್ದರು.

ಕಳೆದ ಕೆಲ ದಿನಗಳ‌ ಹಿಂದೆ ಉಡುಪಿಯಲ್ಲಿ 3 ಕರೋನ ಪಾಸಿಟಿವ್ ಪ್ರಕರಣ ಇದ್ದಿದ್ದು ವೃದ್ದೆಯ ವೈದ್ಯಕೀಯ ವರದಿ ಪಾಸಿಟಿವ್ ಬಂದ ಹಿನ್ನೆಲೆ ಕರೋನಾ ಸೋಂಕಿತರ ಸಂಖ್ಯೆ 4 ಆಗಿದೆ. ಸದ್ಯ ವೃದ್ದೆ ಮಂಗಳೂರು ಇಎಸ್ಐ ಆಸ್ಪತ್ರೆಗೆ ಚಿಕಿತ್ಸೆಗೆ‌ ದಾಖಲು ಮಾಡಿದ್ದಾರೆ.

Comments are closed.