ಉಡುಪಿ: ಉಡುಪಿ ಜಿಲ್ಲೆಯ ಮೊದಲ ಕೋವಿಡ್ 19 ಸೋಂಕಿತನ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಮಾ. 26ರಂದು ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡ ವ್ಯಕ್ತಿಯ ಗಂಟಲ ದ್ರವದ ಮಾದರಿಯನ್ನು ಸೋಮವಾರ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಬುಧವಾರ ನೆಗೆಟಿವ್ ವರದಿ ಬಂದಿತ್ತು. ಇದೀಗ ಎರಡನೆಯ ಮಾದರಿಯನ್ನು ಬುಧವಾರ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಆ ವರದಿ ಇಂದು ಬರುವ ಸಾಧ್ಯತೆಯಿದೆ.
ಮಾ. 29ರಂದು ಪಾಸಿಟಿವ್ ವರದಿಯಾದ ಇನ್ನಿಬ್ಬರ ಗಂಟಲ ದ್ರವವನ್ನು ಶುಕ್ರವಾರ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆ ಇದೆ.
ಗುರುವಾರ ಉಡುಪಿ ಜಿಲ್ಲೆಯಲ್ಲಿ 13 ಮಂದಿ ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇವರಲ್ಲಿ ಐವರು ಪುರುಷರು ಮತ್ತು ಓರ್ವ ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯನ್ನು ಹೊಂದಿದ್ದಾರೆ. ನಾಲ್ವರು ಪುರುಷರು ಮತ್ತು ಮೂವರು ಮಹಿಳೆಯರು ಕೋವಿಡ್ 19 ಶಂಕಿತರು. ಪ್ರಸ್ತುತ ಒಟ್ಟು 34 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಗುರುವಾರ ನಾಲ್ವರು ಐಸೊಲೇಶನ್ ವಾರ್ಡ್‌ನಿಂದ ಬಿಡುಗಡೆಗೊಂಡಿದ್ದು ಒಟ್ಟು 155 ಮಂದಿ ಇದುವರೆಗೆ ಬಿಡುಗಡೆಗೊಂಡಿದ್ದಾರೆ.
1,816 ಮಂದಿ ನಿಗಾ ಮುಕ್ತಿ
ಗುರುವಾರ ಒಟ್ಟು 14 ಮಂದಿ ನೋಂದಣಿ ಮಾಡಿ ಕೊಂಡಿದ್ದು ಇದುವರೆಗೆ ನೋಂದಣಿ ಮಾಡಿಕೊಂಡವರು ಒಟ್ಟು 2,072 ಮಂದಿ. ಗುರುವಾರ 28 ದಿನಗಳ ನಿಗಾವನ್ನು ಮುಗಿಸಿದವರು 92 ಮಂದಿ. ಇದುವರೆಗೆ ಒಟ್ಟು 649 ಮಂದಿ ನಿಗಾ ಮುಗಿಸಿದ್ದಾರೆ. ಗುರುವಾರ 14 ದಿನಗಳ ನಿಗಾವನ್ನು ಮುಗಿಸಿದವರು ನಾಲ್ವರು, ಇದುವರೆಗೆ ಒಟ್ಟು 1,816 ಮಂದಿ ನಿಗಾ ಮುಗಿಸಿದ್ದಾರೆ.
Comments are closed.