ನಮ್ಮ ದೇಹದ ಅಂಗಾಂಗಗಳಿಗೆ ಬೇಕಾಗುವ ಪೋಷಕಾಂಶಗಳು, ಶಕ್ತಿ, ಆಕ್ಸಿಜನ್ ಸಾಗಿಸುವುದು ರಕ್ತ. ಆ ಬಳಿಕ ಆಯಾ ಅಂಗಾಗಗಳು, ಕಣಜಾಲಗಳಿಂದ ಬಿಡುಗಡೆಯಾಗುವ ಕಾರ್ಬನ್ ಡಯಾಕ್ಸೈಡ್, ಇತರೆ ವ್ಯರ್ಥಗಳನ್ನು ಸಹ ರಕ್ತ ಸಾಗಿಸುತ್ತದೆ. ಬಳಿಕ ಅದು ಫಿಲ್ಟರ್ ಆಗುತ್ತದೆ. ಆದರೆ ಬಾಯಲ್ಲಿ ಎಂಜಲು (Saliva) ಇದಕ್ಕೆ ಭಿನ್ನವಾದದ್ದು. ಕೆಲವರು ಎಂಜಲನ್ನು ನುಂಗದೆ ಪದೇಪದೇ ಉಗಿಯುತ್ತಿರು ತ್ತಾರೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಗಾಯಗಳಿಂದ ಬರುವ ರಕ್ತವನ್ನು ಬಾಯಲ್ಲಿ ಹೀರಿಕೊಳ್ಳುತ್ತಾರೆ. ಇಷ್ಟಕ್ಕೂ ಎಂಜಲು, ರಕ್ತ ಇವುಗಳಲ್ಲಿ ಯಾವುದನ್ನು ಒಳಗೆ ತೆಗೆದುಕೊಳ್ಳಬೇಕು..? ಯಾವುದರಿಂದ ನಮಗೆ ಹಾನಿಯಾಗುತ್ತದೆ.? ಎಂಬ ಸಂಗತಿಗಳನ್ನು ಈಗ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ಯಾರಿಗೇ ಆಗಲಿ ಬಾಯಲ್ಲಿ ಲಾಲಾರಸ ಅಥವಾ ಎಂಜಲು ಉಕ್ಕುತ್ತದೆ. ಕೆಲವರು ಇದನ್ನು ನುಂಗದೆ ಉಗಿಯುತ್ತಿರು ತ್ತಾರೆ. ಬೆಳಗ್ಗೆ ಹಲ್ಲುಜ್ಜುವ ಮುನ್ನ ಬರುವ ಲಾಲಾರಸ ಉಗಿಯಬೇಕು. ಆದರೆ ಕೆಲವರು ಮಾತ್ರ ಆ ರೀತಿ ಅಲ್ಲದೆ ದಿನವೆಲ್ಲಾ ಉಗಿಯು ತ್ತಲೇ ಇರುತ್ತಾರೆ. ಆ ರೀತಿ ಮಾಡಬಾರದು. ಬೆಳಗ್ಗೆ ಬರುವ ಎಂಜಲು ಬಿಟ್ಟು ಬೇರೆ ಯಾವ ಸಮಯದಲ್ಲೂ ಉಗಿಯಬಾರದು. ಎಂಜಲನ್ನು ನುಂಗಬೇಕು. ಯಾಕೆಂದರೆ ಅದರಲ್ಲಿ ನಮಗೆ ಜೀರ್ಣಕೋಶಕ್ಕೆ ಬೇಕಾದ ಹಲವು ಎಂಜೈಮ್‍ಗಳು ಇರುತ್ತವೆ. ಅವು ನಾವು ತಿಂದ ಆಹಾರ ಜೀರ್ಣವಾಗಲು ಸಹಕಾರಿ. ಹಾಗಾಗಿ ಎಂಜಲನ್ನು ನಾವು ನುಂಗಬೇಕು. ಆದರೆ ಕಫ ಬರುತ್ತಿದ್ದರೆ ಮಾತ್ರ ಎಂಜಲನ್ನು ನುಂಗದಿರುವುದೇ ಒಳಿತು.
ಇನ್ನು ರಕ್ತದ ವಿಷಯಕ್ಕೆ ಬಂದರೆ ಕೆಲವರು ಕೈ ಬೆರಳುಗಳಿಗೆ ಗಾಯವಾದರೆ ರಕ್ತ ಸೋರುತ್ತಿದ್ದರೆ ಅದನ್ನು ಹಾಗೆಯೇ ಬಾಯಲ್ಲಿ ಇಟ್ಟುಕೊಂಡು ರಕ್ತ ಹೀರುತ್ತಾರೆ. ಈ ರಕ್ತ ನಮ್ಮ ಜೀರ್ಣಕೋಶಕ್ಕೆ ಹೋಗುತ್ತದೆ. ಆದರೆ ಅಷ್ಟು ಕಡಿಮೆ ಪ್ರಮಾಣದ ರಕ್ತದಿಂದ ಏನೂ ಆಗಲ್ಲ, ಜಾಸ್ತಿ ರಕ್ತ ಒಳಗೆ ಹೋಗಬಾರದು. ಯಾಕೆಂದರೆ ರಕ್ತದಲ್ಲಿ ಸ್ಟೆರೋಕೋಬಿಲಿನೋಜೆನ್ ಎಂಬ ಡಾರ್ಕ್ ಬ್ರೌನ್ ಪಿಗ್ಮೆಂಟ್ ಹೆಚ್ಚಾಗಿ ಇರುತ್ತದೆ. ಇದು ರಕ್ತದಲ್ಲಿರುವ ವ್ಯರ್ಥ ಪದಾರ್ಥ. ಆದಕಾರಣ ರಕ್ತ ನಮ್ಮ ಜೀರ್ಣಕೋಶದ ಒಳಗೆ ಹೋದರೆ ಈ ಪಿಗ್ಮೆಂಟ್ ಸಹ ರಕ್ತದಲ್ಲಿ ಇರುವ ಕಾರಣ ಜೀರ್ಣಕೋಶ ಸೇರುತ್ತದೆ. ಇದರಿಂದ ಜೀರ್ಣಕೋಶ ಆ ವ್ಯರ್ಥವನ್ನು ಜೀರ್ಣಿಸಿಕೊಳ್ಳಲ್ಲ. ಇದರ ಜತೆಗೆ ಆ ವ್ಯರ್ಥದಿಂದ ಇತರೆ ಅನಾರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಆದಕಾರಣ ಗಾಯಗಳಾದಾಗ ರಕ್ತವನ್ನು ಒಳಗೆ ತೆಗೆದುಕೊಳ್ಳದಿರುವುದೇ ಉತ್ತಮ.
Comments are closed.