ಆರೋಗ್ಯ

ರೆಗ್ಯುಲರ್ ಆಗಿ ಈ ತರಕಾರಿಯನ್ನು ಬಳಸುವುದರಿಂದ ಎನು ಲಾಭ ಬಲ್ಲಿರಾ..?

Pinterest LinkedIn Tumblr

ಎಣ್ಣೆ ಬದನೆಕಾಯಿ ಯಾರಿಗೆ ಇಷ್ಟ ಇಲ್ಲ ಹೇಳಿ ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತೆ ಅಲ್ವಾ…? ಅಂತಹ ಬದನೆಕಾಯಿಯ ಮತ್ತೊಂದು ವಿಶೇಷತೆ ಹೇಳುತ್ತೀವಿ ಕೇಳಿ… ಬದನೆಕಾಯಿ ತಿನ್ನುವುದರಿಂದ ಕೀಲು ನೋವು ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಅಷ್ಟೇ ಅಲ್ಲ ಇದು ದೇಹದ ತೂಕವನ್ನು ಸಹ ಇಳಿಸುತ್ತದೆ..!!!

ಬದನೆಕಾಯಿಯನ್ನು ರೆಗ್ಯುಲರ್ ಆಗಿ ಬಳಸುವುದರಿಂದ ಶರೀರದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕರಗಿಸಿ ರಕ್ತದಲ್ಲಿನ ಕೊಲೆಸ್ಟ್ರಾಲ್ ಲೆವೆಲ್ ಅನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ನೂರು ಗ್ರಾಂ ಬದನೆಕಾಯಿಯಲ್ಲಿ 24 ಕ್ಯಾಲರಿ ಮಾತ್ರ ಇರುವುದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ. ಬದನೆಕಾಯಿಯಲ್ಲಿ ಆಟೋ ಸಯನಿನ್ ಎಂಬ ಪದಾರ್ಥ ನಿಶಕ್ತಿಯನ್ನು ದೂರ ಮಾಡಿ ಉತ್ಸಾಹ ತುಂಬುತ್ತದೆ. ಇದು ಕ್ಯಾನ್ಸರ್ ಅನ್ನು ನಿಯಂತ್ರಿಸುತ್ತದೆ. ಬದನೆಕಾಯಿಯಲ್ಲಿನ ನೀರು, ಪೊಟಾಷಿಯಂ ರಕ್ತದಲ್ಲಿ ಸೇರಿ ಕೊಬ್ಬುನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹಸಿವನ್ನು ನಿಯಂತ್ರಿಸಿ ತೂಕ ಹೆಚ್ಚಾಗದಂತೆ ತಡೆಯುತ್ತದೆ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

ಬದನೆಕಾಯಿಯನ್ನು ಅಡುಗೆಯಲ್ಲಿ ಹೆಚ್ಚು ಬಳಸುವುದರಿಂದ ಹೃದಯ, ರಕ್ತನಾಳಗಳಿಗೆ ಸಂಬಂಧಿಸಿದ ಕಾಯಿಲೆಗಳು ತಡೆಯುತ್ತದೆ. ಬದನೆಕಾಯಿಯಲ್ಲಿನ ನಿಕೋಟಿನ್ ಎಂಬ ಪದಾರ್ಥ ಧೂಮಪಾನದ ಅಭ್ಯಾಸವನ್ನು ನಿಯಂತ್ರಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ

Comments are closed.