ಆರೋಗ್ಯ

ಧೂಮಪಾನಿಗಳಿಗೆ ಕೊರೊನಾ ವೈರಸ್ ಸೋಂಕಿನ ಅಪಾಯ 14 ಪಟ್ಟು ಅಧಿಕ

Pinterest LinkedIn Tumblr


ಕೊರೊನಾ ವೈರಸ್ ನ ಪ್ರಕೋಪ ಹೆಚ್ಚಾಗುತ್ತಿರುವ ಹಿನ್ನೆಲೆ ಸತತವಾಗಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸ್ವಚ್ಚತೆಯ ಜೊತೆಗೆ ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಲೂ ಹಾಗೂ ಧೂಮಪಾನದಿಂದ ದೂರವಿರಲು ಸಲಹೆಗಳನ್ನು ಕೂಡ ನೀಡಲಾಗುತ್ತಿದೆ. ಈ ಕುರಿತು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ Anadolu Agencyಗೆ ಹೇಳಿಕೆ ನೀಡಿರುವ ತುರ್ಕಿಯ ಆಂಟಿ ಅಡಿಕ್ಷನ್ ಗ್ರೂಪ್ ಮುಖ್ಯಸ್ಥ ಧೂಮಪಾನ ಮಾಡದೆ ಇರುವವರ ಹೋಲಿಕೆಯಲ್ಲಿ ಧೂಮಪಾನ ಮಾಡುವವರಲ್ಲಿ ಕೊರೊನಾ ವೈರಸ್ ಸೋಂಕಿನ ಅಪಾಯ 14 ರಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಮತ್ತು ಬರಿಸುವ ಪದಾರ್ಥಗಳ ವಿರುದ್ಧ ಹೋರಾಟ ನಡೆಸುವ ತುರ್ಕಿಯ ಗ್ರೀನ್ ಕ್ರಿಸೆಂಟ್ ಸಂಘಟನೆಯ ಅಧ್ಯಕ್ಷ ಪ್ರೊ.ಮುಸಾಹಿತ್ ಒಜ್ತುರ್ಕ್, ಕೊರೊನಾ ವೈರಸ್ ನಿಂದ ಬಚಾವಾಗಲು ಧೂಮಪಾನದಿಂದ ದೂರವಿರಲು ಸಲಹೆ ನೀಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ” ತಂಬಾಕು ಹಾಗೂ ತಂಬಾಕು ಜನ್ಯ ಪದಾರ್ಥಗಳನ್ನು ಉಪಯೋಗಿಸುವುದರಿಂದ ಕೊರೊನಾ ವೈರಸ್ ಸೋಂಕು ಹರಡುವ ಅಪಾಯ ಹೆಚ್ಚು. ಆದ್ದರಿಂದ ಒಂದು ವೇಳೆ ನಿಮ್ಮನ್ನು ನೀವು ಕಾಪಾಡಲು ಬಯಸುತ್ತಿದ್ದರೆ, ಎಲ್ಲ ರೀತಿಯ ಮತ್ತು ಬರಿಸುವ ಪದಾರ್ಥಗಳಿಂದ ದೂರವಿರುವುದು ಅವಶ್ಯಕವಾಗಿದೆ” ಎಂದು ಹೇಳಿದ್ದಾರೆ.

“ಧೂಮಪಾನ ನಮ್ಮ ಶರೀರದ ರೋಗಪ್ರತಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ ಎಂಬುದರ ಮೇಲೆ ಒತ್ತು ನೀಡಿರುವ ಒಜ್ತುರ್ಕ್, ಕೊರೊನಾ ವೈರಸ್ ಚಿಕಿತ್ಸೆಯ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದಿದ್ದಾರೆ. “‘ ದುರ್ಬಲ ರೋಗ ನಿರೋಧಕ ಶಕ್ತಿ ಆರೋಗ್ಯಕ್ಕೆ ಅಪಾಯಕಾರಿ ಏಕೆಂದರೆ ಇದು ಚಿಕಿತ್ಸೆಯ ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತದೆ. ನೀವು ಸಾಂದರ್ಭಿಕವಾಗಿ ಧೂಮಪಾನ ಮಾಡುತ್ತಿದ್ದರೂ ಕೂಡ ಇದು ಸಾಂಕ್ರಾಮಿಕ ಚಿಕಿತ್ಸೆಗೆ ಅಡ್ಡಿಯಾಗಬಹುದು” ಎಂದು ಅವರು ಹೇಳಿದ್ದಾರೆ.

ಒಜ್ತುರ್ಕ್ ಹೇಳುವ ಪ್ರಕಾರ, “ಧೂಮಪಾನವು ಶ್ವಾಸಕೋಶವನ್ನು ಹಾನಿಗೊಳಿಸುತ್ತದೆ ಮತ್ತು ಕಫ ಪ್ರತಿಫಲಿತ ಪ್ರಕ್ರಿಯೆಯನ್ನು ನಿರ್ಬಂಧಿಸುತ್ತದೆ. ಇದರಿಂದಾಗಿ ವೈರಸ್‌ ಮತ್ತು ಬ್ಯಾಕ್ಟೀರಿಯಾಗಳು ಶ್ವಾಸ ನಳಿಕೆ ಹಾಗೂ ಶ್ವಾಸಕೋಶಗಳಿಗೆ ಅಂಟಿಕೊಳ್ಳುತ್ತವೆ ಮತ್ತು ಸೋಂಕು ತೀವ್ರವಾಗಿರುತ್ತದೆ ” ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ ಕೂಡ ಧೂಮಪಾನ ಮಾಡುವವರು ವೈರಸ್ ದಾಳಿಗೆ ಹೆಚ್ಚಾಗಿ ತುತ್ತಾಗುವ ಸಾಧ್ಯತೆ ಇದೆ. ಧೂಮಪಾನದ ವೇಳೆ ನಿಮ್ಮ ಕೈ ಬೆರಳುಗಳು ನಿಮ್ಮ ತುಟಿಯ ಮೇಲೆ ಇರುತ್ತವೆ. ಇದೆ ಕಾರಣದಿಂದ ಸೋಂಕು ಕೈ ಮೂಲಕ ನಿಮ್ಮ ಬಾಯಿಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಿದೆ.

Comments are closed.