ಆರೋಗ್ಯ

ಈ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದ

Pinterest LinkedIn Tumblr

ನಿತ್ಯಹರಿದ್ವರ್ಣದ ದೊಡ್ಡ ಪ್ರಮಾಣದ ಮರ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ. ಇದು ವರ್ಷಪೂರ್ತಿ ದಟ್ಟನೆಯ ಕಡು ಹಸಿರು ಎಲೆಗಳನ್ನು ಹೊಂದಿದೆ.

ನಮ್ಮ ಆರೋಗ್ಯಕ್ಕೆ ಲಾಭದಾಯಕವಾದ ಹಲವಾರು ಪೋಷಕವಸ್ತುಗಳು ಹಲಸಿನಲ್ಲಿವೆ. ಇದರಲ್ಲಿ ವಿಟಮಿನ್ ಎ. ವಿಟಮಿನ್ ಸಿ. ಪೊಟೊಷಿಯಂ ಕ್ಯಾಲ್ಸಿಯಂ, ಐರ್‍ನ ಅಂಶಗಳಿವೆ. ಅಲ್ಲದೆ, ಇದರಲ್ಲಿ ಪೈಬರ್ ಅಂಶ ಇದೆ

ಹಲಸು ಕೇವಲ ರುಚಿಯ ಹಣ್ಣಷ್ಟೆ ಅಲ್ಲ, ಔಷಧವಾಗಿಯೂ ಪ್ರಸಿದ್ಧಿ. ಹಲವಾರು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ. ಇದರ ಪ್ರತಿ ಭಾಗವೂ ಔಷಧದ ಗುಣ ಹೊಂದಿದೆ. ಹಲಸಿನ ಹಣ್ಣು ಕೇವಲ ಸೀಸನ್‌ಗೆ ಸೀಮಿತವಾಗಿದ್ದರೂ ಅದರ ಎಲೆ, ಮೇಣ, ಬೀಜ ಸರ್ವಕಾಲಕ್ಕೂ ಲಭ್ಯ ಇರುವುದರಿಂದ ನಾನಾ ಸಮಸ್ಯೆಗಳಿಗೆ ಇದರ ಪ್ರಯೋಜನ ಪಡೆಯಬಹುದು.

ಹಳ್ಳಿಕಡೆಗಳಲ್ಲಿ ಯಥೇಚ್ಛವಾಗಿ ದುಡ್ಡಿಲ್ಲದೆ ಸಿಗುವ ಈ ಬಹು ಉಪಯೋಗಿ ಹಲಸು ಹಸಿಯಾಗಿ ಅಥವಾ ಬೇಯಿಸಿ ತಿಂಡಿಯ ರೂಪದಲ್ಲಿ ತಿನ್ನಲೂ ಸಾಧ್ಯವಾಗಿರುವಂತಹ ಹಣ್ಣು. ಹಳದಿ ಬಣ್ಣದ ಯಥೇಚ್ಛವಾಗಿ ಸಿಹಿಯಿಂದ ಕೂಡಿರುವ ಹಲಸು ಪ್ರೋಟೀನ್ ವಿಟಮಿನ್ ಭರಿತವಾಗಿದೆ.

ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ.

ವಿಟಮಿನ್ ಸಿಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ.

ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಕಾರಣವಾಗಿದೆ. ಅಲ್ಲದೆ ಹಥದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನ ಹಣ್ಣು ಪರಿಹರಿಸುತ್ತದೆ.

ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ.

ಹಲಸಿನ ಹಣ್ಣು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ. ಇರುಳುಗುರುಡುತನ ಮತ್ತು ಅಕ್ಷಿಪಟಲದ ಅವನತಿ ಸಮಸ್ಯೆಯನ್ನು ದೂರಮಾಡುತ್ತದೆ.

ಹಲಸಿನ ಹಣ್ಣಿನ ಬೇರುಗಳು ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಮಬಾಣವಾಗಿದೆ. ಇದರ ಬೇರನ್ನು ಮತ್ತು ಉಳಿದ ಭಾಗಗಳನ್ನು ಕುದಿಸಿ ಕಷಾಯದಂತೆ ಸೇವಿಸುವುದು ಅಸ್ತಮಾದಿಂದ ಮುಕ್ತಿ ದೊರಕುವಂತೆ ಮಾಡುತ್ತದೆ.

ಹಲಸಿನಲ್ಲಿರುವ ಮೆಗ್ನೇಷಿಯಂ, ಕ್ಯಾಲ್ಶಿಯಂನೊಂದಿಗೆ ಕಾರ್ಯನಿರ್ವಹಿಸಿ ಮೂಳೆಯನ್ನು ಬಲಪಡಿಸುತ್ತದೆ. ಮೂಳೆ ಸಂಬಂಧಿತ ಹಲವಾರು ಕಾಯಿಲೆಯನ್ನು ದೂರಮಾಡುವಲ್ಲಿ ಹಲಸಿನ ಹಣ್ಣು ಉಪಕಾರಿಯಾಗಿದೆ.

ಹಲಸಿನ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದವಾಗಿದೆ.

ಥೈರೊಯ್ಡ್ ಮೆಟಾಬಾಲಿಸಂಗೆ ಕೋಪರ್‌ ಉಪಕಾರಿಯಾಗಿದೆ, ಹಾರ್ಮೋನ್ ಉತ್ಪಾದನೆಯಲ್ಲಿ ಕೋಪರ್ ಪ್ರಮುಖ ಪಾತ್ರ ವಹಿಸಿದೆ. ಹಲಸಿನ ಹಣ್ಣು ಕೋಪರ್‌ನಿಂದ ಯಥೇಚ್ಛಿತಗೊಂಡಿದ್ದು ಥೈರೊಯ್ಡ್ ಅನ್ನು ಆರೋಗ್ಯಕರವಾಗಿಸುತ್ತದೆ.

ಕಣ್ಣಿನ ಸುತ್ತ ನೆರಿಗೆಗಳ ನಿವಾರಣೆಗೆ. ತುಟಿಯ ಸುತ್ತಲಿನ ಕಪ್ಪು ಕಲೆಗಳಿಗೆ. ಮೊಡವೆಗಳ ನಿವಾರಣೆಗು ಸಹ ಹಲಸು ಅತ್ಯುತ್ತಮ ಔಷಧವಾಗಿದೆ.

ನೋಡಿದರಲ್ಲ ಹಲಸು ಹಣ್ಣು ಎಷ್ಟೆಲ್ಲ ಪ್ರಯೋಜನಗಳ ಆಗರವಾಗಿದೆ ನೀವು ಇದರಿಂದ ಉಪಯೋಗ ಪಡೆದಿಕೊಳ್ಳಿ.

Comments are closed.