ಆರೋಗ್ಯ

8 ಗಂಟೆಗಳ ಕಾಲ ನೆನೆಸಿದ ಬಾದಾಮಿಯನ್ನು ಸಿಪ್ಪೆ ಇಲ್ಲದಂತೆ ತಿನ್ನಬೇಕು…ಯಾಕೆ ..?

Pinterest LinkedIn Tumblr

ಬಹಳಷ್ಟು ಆಹಾರ ಪದಾರ್ಥಗಳನ್ನು ಹಸಿಯಾಗಿ ತಿನ್ನದೆ ಅವುಗಳನ್ನು ಸಿಪ್ಪೆ ಸಮೇತ ತಿನ್ನಿ ಎಂದು ವೈದ್ಯರು ಹೇಳುತ್ತಿರುತ್ತಾರೆ. ಏಕೆಂದರೆ ಸಿಪ್ಪೆಯಲ್ಲಿ ಬೇಕಾದ ಪ್ರಮುಖ ಪೋಷಕಾಂಶಗಳು ಲಭ್ಯವಾಗುತ್ತವೆ. ಆದರೆ… ಬಾದಾಮಿ ಮಾತ್ರ ಸಿಪ್ಪೆ ಇಲ್ಲದಂತೆ ತಿನ್ನಬೇಕಂತೆ..! ಹೌದು ನೀವು ಕೇಳುತ್ತಿರುವುದು ಕರೆಕ್ಟ್..! ಇದರ ಜತೆಗೆ ಅದನ್ನು ನೆನೆಸಿ ತಿಂದರೆ ಇನ್ನೂ ಉತ್ತಮ ಎನ್ನುತ್ತಿದ್ದಾರೆ ವೈದ್ಯರು. ಹೀಗೇಕೆ ತಿನ್ನಬೇಕು, ಇದರ ಹಿಂದೆ ಅಡಗಿರುವ ರಹಸ್ಯ ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ..!

ಬಾದಾಮಿ ಸಿಪ್ಪೆಯಲ್ಲಿ ಕೆಲವು ರೀತಿಯ ಎಂಜೈಮ್‌ಗಳಿರುತ್ತವೆ. ಹಾಗಾಗಿ ಬಾದಾಮಿಯನ್ನು ಹಾಗೇ ತಿಂದರೆ ಅದರೊಂದಿಗೆ ಸಿಪ್ಪೆ ಸಹ ನಮ್ಮ ಜೀರ್ಣಕೋಶ ಸೇರುತ್ತದೆ. ಆಗ ಹೊಟ್ಟು ಬಾದಾಮಿಯನ್ನು ಆಕ್ರಮಿಸುತ್ತದೆ. ಆಗ ಬಾದಾಮಿ ಸರಿಯಾಗಿ ಜೀರ್ಣವಾಗುವುದಿಲ್ಲ. ಬಾದಿಯಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಲ್ಲ. ಜೀರ್ಣ ಸರಿಯಾಗಿ ಆಗದಿದ್ದ ಕಾರಣ ಗ್ಯಾಸ್, ಮಲಬದ್ಧತೆಯಂತಹ ಸಮಸ್ಯೆಗಳು ಎದುರಾಗುತ್ತವೆ.

ಆ ರೀತಿ ಅಲ್ಲದೆ ಬಾದಾಮಿಯನ್ನು ಕನಿಷ್ಠ 8 ಗಂಟೆಗಳ ಕಾಲ ನೆನೆಸಿದರೆ ಆಗ ಅದರ ಸಿಪ್ಪೆ ಸುಲಭವಾಗಿ ಬೇರ್ಪಡುತ್ತದೆ. ಆಗ ಸೇವಿಸಬಹುದು. ನೀರಿನಲ್ಲಿ ಬಾದಾಮಿಯನ್ನು ನೆನೆಸುವುದರಿಂದ ಮೃದುವಾಗುತ್ತದೆ. ಸುಲಭವಾಗಿ ಜೀರ್ಣವಾಗುವುದಷ್ಟೇ ಅಲ್ಲ, ಪೋಷಕಾಂಶಗಳು ದೇಹಕ್ಕೆ ಧಾರಾಳವಾಗಿ ಸಿಗುತ್ತವೆ. ಈ ವಿಷಯವನ್ನು ಕೆಲವು ಸಂಶೋಧಕರು ಖಚಿತಪಡಿಸಿದ್ದಾರೆ. ಇನ್ನು ಮುಂದೆ ನೀವು ಬಾದಮಿ ತಿನ್ನಬೇಕಾದರೆ ಅವುಗಳನ್ನು ಕನಿಷ್ಠ 8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ತಿನ್ನುವುದು ಒಳಿತು. ಈ ರೀತಿ ತಿನ್ನುವುದರಿಂದ ಮಕ್ಕಳು, ವೃದ್ಧರಿಗೆ ಸಹ ಬಾದಾಮಿ ಸುಲಭವಾಗಿ ಜೀರ್ಣವಾಗುತ್ತದೆ

Comments are closed.