ಅನಾನಸ್, ಇದು ಹೆಚ್ಚಿನ ಜನರು ಇಷ್ಟಪಟ್ಟು ತಿನ್ನುವ ಹಲವು ಹಣ್ಣುಗಳಲ್ಲಿ ಒಂದು. ಇದು ನಮ್ಮ ದೇಹದ ಆರೋಗ್ಯಕ್ಕೆ ಬೇಕಾದ ಪೋಷಕಾಂಶಗಳನ್ನ ಒದಗಿಸುವುದರ ಜೊತೆಗೆ, ಹಲವು ಅರೋಗ್ಯ ಸಮಸ್ಯೆಗಳನ್ನ ದೂರಮಾಡುತ್ತದೆ. ಬನ್ನಿ ಹಾಗಾದರೆ ಅನಾನಸ್ ಹಣ್ಣಿನ ಸೇವನೆಯಿಂದ ಯಾವೆಲ್ಲ ಖಾಯಿಲೆಗಳನ್ನ ಗುಣಪಡಿಸಬಹುದು ಎಂದು ತಿಳಿಯೋಣ.
* ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ. ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ. ಹಾಗು ಕೆಮ್ಮು ಕಫ ಕಡಿಮೆಯಾಗುತ್ತದೆ.
* ಗರ್ಭಿಣಿ ಸ್ತ್ರೀಯರು ಅನಾನಸ್ನ್ನು ಎಂದಿಗೂ ತಿನ್ನಬಾರದು. ಇದು ಗರ್ಭವನ್ನು ಬೆಳೆಯಲು ಬಿಡುವುದಿಲ್ಲ ಅದನ್ನು ಸಂಕುಚಿತಗೊಲಿಸುತ್ತದೆ. ಅದರಿಂದಾಗಿ ಗರ್ಭಸ್ರಾವ ಆಗುವ ಸಂಭವವಿರುತ್ತದೆ.
* ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ.
* ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.
* ಚಿಕ್ಕ ಮಕ್ಕಳು ಅನಾನಸ್ ಹಣ್ಣನ್ನು ಸೇವಿಸುವುದರಿಂದ ಗಂಟಲಿನ ರೋಗವು ಬರುವುದಿಲ್ಲ.
* ಆನೆಕಾಲು ರೋಗ, ಕುಸ್ಟ, ಕಜ್ಜಿ, ಎಕ್ಸಿಮ ರೋಗಗಳಿಗೆ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ.
* ಕಾಮಾಲೆ, ಯಕೃತ್ ವಿಕಾರ, ಗನೋರಿಯ,ಮೂತ್ರಕೋಶ ವ್ಯಾಧಿ, ಮೂತ್ರಾಷ್ಮರಿ,ಹೃದಯದ ಅನಿಯಮಿತ ಬಡಿತ, ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ
Comments are closed.