ಆರೋಗ್ಯ

ಜೀರಿಗೆ ಮತ್ತು ಸ್ವಲ್ಪ ಗರಿಕೆಯನ್ನ ಹಾಕಿ ಕುದಿಸ ಕಷಾಯ ಅಸಿಡಿಟಿಯಿಂದಾಗುವ ಬೆನ್ನುನೋವು ಕಡಿಮೆ ಸಾದ್ಯ

Pinterest LinkedIn Tumblr

ನಮ್ಮ ಸುತ್ತ ಮುತ್ತಲಿನಲ್ಲಿರುವ ಹಲವು ಗಿಡಮೂಲಿಕೆಗಳನ್ನ ಬಳಸಿ ನಮ್ಮ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ನಮಗೆ ಸುಲಭವಾಗಿ ಸಿಗುವ ಗರಿಕೆ ಹುಲ್ಲಿನಲ್ಲಿಯೂ ಸಹ ಹಲವು ರೋಗಗಳಿಗೆ ಮದ್ದು ಅಡಗಿದೆ, ಅವುಗಳಬಗ್ಗೆ ಇಲ್ಲಿದೆ ನೋಡಿ.

ಎರಡು ಲೋಟ ನೀರಿಗೆ ಸ್ವಲ್ಪ ಜೀರಿಗೆ ಮತ್ತು ಸ್ವಲ್ಪ ಗರಿಕೆಯನ್ನ ಹಾಕಿ ಕುದಿಸಿ ಕಷಾಯವನ್ನ ತಯಾರಿಸಿ ಕುಡಿದರೆ ಅಸಿಡಿಟಿಯಿಂದಾಗು ವ   ಬೆನ್ನು ನೋವು ಸೊಂಟ ನೋವು ಹಾಗು ಇತರೆ ನೋವುಗಳನ್ನ ಕಡಿಮೆ ಮಾಡಬಹುದು. ಈ ಕಷಾಯವನ್ನ ಬೆಳಗ್ಗೆ ಖಾಲಿ ಹೊಟ್ಟೆಯ ಲ್ಲಿ ಕುಡಿದರೆ ಅಜೀರ್ಣದ ಸಮಸ್ಯೆಯಿಂದ ಪಾರಾಗಬಹುದು, ಅನಗತ್ಯವಾದ ದೇಹದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು, ಹಾಗು ಇದನ್ನು ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ.

ನಾವು ಹಲವು ಬಗೆಯ ಖಾಯಿಲೆಗಳಿಗೆ ಮಾತ್ರೆಗಳನ್ನ ತೆಗೆದುಕೊಳ್ಳುತ್ತೇವೆ ಆದರೆ ಅದರಿಂದ ಕೆಲವೊಮ್ಮೆ ಸೈಡ್ ಎಫೆಕ್ಟ್ ಆಗಿಬಿಡುತ್ತದೆ, ಇಂತಹ ಸೈಡ್ ಎಫೆಕ್ಟ್ ಅನ್ನು ಕಡಿಮೆ ಮಾಡಲು ಗರಿಕೆ ಹುಲ್ಲನ್ನು ಎರಡು ಲೋಟ ನೀರಿಗೆ ಹಾಕಿ ಚನ್ನಾಗಿ ಕುದಿಸಿ ( ನೀರು ಅರ್ಧದಷ್ಟಾಗು ವವರೆಗೆ ) ಕುಡಿದರೆ ಸೈಡ್ ಎಫೆಕ್ಟ್ ತೊಂದರೆ ಆಗುವುದಿಲ್ಲ.

ಗರಿಕೆ ಹುಲ್ಲನ್ನ ತೆಂಗಿನ ಎಣ್ಣೆಯಲ್ಲಿ ಹಾಕಿ ಚನ್ನಾಗಿ ಕುದಿಸಿ ಅದು ಆರಿದ ಬಳಿಕ ತಲೆಯ ಕೂದಲಿಗೆ ಹಚ್ಚುವುದರಿಂದ ತಲೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ, ಹಾಗು ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

Comments are closed.