ಆರೋಗ್ಯ

ಬಿಳಿ ಸೆರಗು ಸಮಸ್ಯೆ ನಿವಾರಣೆಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನ ಸೇವಿಸಿದರೆ ಉತ್ತಮ

Pinterest LinkedIn Tumblr

ಗರ್ಭ ಕೋಶದಲ್ಲಿನ ಸತ್ತ ಜೀವಕೋಶಗಳನ್ನು ಹೆಣ್ಣಿನ ಜನನೇಂದ್ರಿಯದ ಮೂಲಕ ದೇಹದ ಹೊರಹಾಕುವ ಪ್ರಕ್ರಿಯೆಗೆ ಬಿಳಿ ಮುತ್ತು ಅಥವಾ ಬಿಳಿ ಸೆರಗು ಎನ್ನಲಾಗುತ್ತದೆ. ಯೋನಿಯಲ್ಲಿ ತೀರಾ ವಾಸನೆ ಅಥವಾ ತುರಿಕೆ ಇದ್ದಾರೆ ಯಾವುದೊ ಸೋಂಕು ಉಂಟಾಗಿರುವ ಲಕ್ಷಣಗಳು ಎನ್ನಬಹುದು. ಬರ್ಥೋಲಿನ್ ಎಂಬ ಗ್ರತಿಗಳಿಂದ ಬಿಳಿ ಮುತ್ತು ಉತ್ಪತ್ತಿಯಾಗುತ್ತದೆ. ಟ್ರೈಕೊಮೊನಾಸ್ ಮತ್ತು ಕ್ಯಾಂಡಿಡಾ ಎಂಬ ಸೂಕ್ಷ್ಮಾಣು ಜೀವಿಗಳು ಸೋಂಕನ್ನು ಉಂಟುಮಾಡಬಹುದು. ತಿಂಗಳು ಪುರ ಹೆಚ್ಚಿನ ಪ್ರಮಾಣದಲ್ಲಿ ಬಿಳಿ ಹತ್ತಿ ನೀರಿನಂತೆ ಅಥವಾ ಲೋಳೆಯಂತೆ ಕಾಣಿಸಿಕೊಂಡರೆ ಅಲ್ಲಿ ಖಂಡಿತ ಸಮಸ್ಯೆ ಇರಬಹುದು. ಋತು ಸ್ರಾವದ ಮೂರೂ ನಾಲ್ಕು ದಿನಗಳ ಮುಂದೆ ಮತ್ತು ನಂತರ ಕಾಣಿಸಿಕೊಂಡರೆ ಅದ್ದೆನು ಅಷ್ಟು ದೊಡ್ಡ ಸಮಸ್ಯೆಯಲ್ಲ.

ಹತ್ತು ಬಿಳಿ ದಾಸವಾಳದ ಒಂದು ಹಿಡಿ ಹೂವು ಮತ್ತು ಎಲೆಗಳನ್ನು ಚೆನ್ನಾಗಿ ನೀರಿನಲ್ಲಿ ನೆನೆಸಿ ಅರೆದು ಬೆಲ್ಲದ ಜೊತೆ ಅಥವಾ ಕಲ್ಲು ಸಕ್ಕರೆಯ ಜೊತೆ ಸೇರಿಸಿ ದಿನಕ್ಕೆ ಮೂರೂ ಬರಿ ಏಳು ದಿನಗಳು ಕುಡಿಯಬೇಕು. ಬೆಳಗ್ಗೆ ಸೇವಿಸುವಾಗ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಬಹಳ ಮುಖ್ಯ.

ಅಶೋಕ ಮರದ ತೊಗಟೆಯನ್ನು ಸಂಗ್ರಹಿಸಿ ಪುಡಿ ಮಾಡಿ ಶೋದಿಸಿಕೊಳ್ಳಿ, ಇದರ ಎರಡು ಚಮಚ ಚೂರ್ಣವನ್ನು ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರುಬಾರಿ 21 ದಿನಗಳು ಕುಡಿಯ ಬೇಕು.

ಅಕ್ಕಿ ತೊಳೆದ ನೀರನ್ನ ನಿಯಮಿತವಾಗಿ ಕುಡಿಯುತ್ತ ಬಂದರೆ ಬಿಳಿ ಸೆರಗು ಕಡಿಮೆಯಾಗುತ್ತದೆ. ಅಕ್ಕಿ ತೊಳೆದ ನೀರಿಗೆ ಉಪ್ಪನ್ನ ಹಾಕಬಾರದು.

Comments are closed.