ನಿಮ್ಮ ಕಡಕ್ ಚಹಾವನ್ನು ಸ್ವಲ್ಪ ತಣಿಯಲು ಬಿಡಿ. ಏಕೆಂದರೆ ಅತಿ ಬಿಸಿ ಪಾನೀಯ ಕುಡಿಯುವುದರಿಂದ ಅನ್ನನಾಳ ಕ್ಯಾನ್ಸರ್ ಬರುತ್ತ ದಂತೆ. ಇದೀಗ ಯುಎಇ ವೈದ್ಯರು ಜನಸಾಮಾನ್ಯರಿಗೆ ಅತಿ ಬಿಸಿ ಚಹ ಕುಡಿಯದಂತೆ ಸಲಹೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಘಟನೆಯ ಕ್ಯಾನ್ಸರ್ ಏಜೆನ್ಸಿಯ ಸಂಶೋಧನೆಯಿಂದ ಈ ಅಂಶ ಬೆಳಕಿಗೆ ಬಂದಿದ್ದು, ಕಳೆದ ವಾರ ಈ ವರದಿಯನ್ನು ಬಿಡುಗಡೆ ಮಾಡಿದೆ. ಕಾಫಿ ಪ್ರಿಯರಿಗೆ ಸಮಾಧಾನದ ನಿಟ್ಟುಸಿರು. ಏಕೆಂದರೆ ಕಾಫಿ ಕುಡಿಯುವುದರಿಂದ ಕ್ಯಾನ್ಸರ್ ಬರುವ ಯಾವುದೇ ಪುರಾವೆಗಳು ದೊರೆತಿಲ್ಲ ಎಂದು ವರದಿ ತಿಳಿಸಿದೆ.
ಅರೇಬಿಕ್ ದೇಶದಲ್ಲಿ ಅತಿಥಿ ಸತ್ಕಾರಕ್ಕೆ ಕಾಫಿ ಮತ್ತು ಕಡಕ್ ಚಾಯಿ ಜನಪ್ರಿಯ ಪಾನೀಯ. ಎರಡೂ ಪಾನೀಯವನ್ನು ಬಿಸಿಯಾಗಿ ಹೀರಿದರೆ ಮಾತ್ರ ಆಹ್ಲಾದಕರವಾಗಿರುತ್ತದೆ. ಆದರೆ ಇದೀಗ ಐಎಆರ್ಸಿ ಬೆಳಕಿಗೆ ತಂದ ಅಂಶ ಚಹ ಪ್ರಿಯರಿಗೆ ಆಘಾತ ನೀಡಿದೆ.
Comments are closed.