ತುಪ್ಪ ತಿಂದರೆ ದಪ್ಪ ಆಗುತ್ತದೆ, ಕೊಬ್ಬಿನಂಶ ದೇಹ ಸೇರುತ್ತದೆ ಎಂದು ಕೆಲವು ವರ್ಷಗಳಿಂದ ಅದನ್ನು ಅಡುಗೆ ಮನೆಯಿಂದ ದೂರ ಇಟ್ಟವರೇ ಹೆಚ್ಚು. ಆದರೆ ಈಗ ತುಪ್ಪದಿಂದ ಸಿಗುವುದು ಆರೋಗ್ಯಕರ ಕೊಬ್ಬು ಇದು ನಮ್ಮ ದೇಹಕ್ಕೆ ಅತ್ಯಗತ್ಯ ಎಂದು ವಿಜ್ಞಾನ ಹೇಳುತ್ತದೆ. ಸರಿಯಾದ ಪ್ರಮಾಣದಲ್ಲಿ ಒಳ್ಳೆಯ ಗುಣಮಟ್ಟದ ತುಪ್ಪ ಆಹಾರದಲ್ಲಿದ್ದರೆ ಅದು ನಮ್ಮ ದೇಹವನ್ನು ಆರೋಗ್ಯವಾಗಿರುವುದಲ್ಲದೆ, ಚರ್ಮಕ್ಕೂ ಉತ್ತಮ. ಹಾಗಾಗಿ ಈಗ ಮತ್ತೆ ತುಪ್ಪ ಒಂದು ಸೂಪರ್ ಫುಡ್ ಎಂದು ಹೆಸರಾಗಿದೆ.
‘ಸಣ್ಣ ಪ್ರಮಾಣದಲ್ಲಿ ತುಪ್ಪ ದಿನಾ ತಿನ್ನುವುದು ಒಳ್ಳೆಯದು. ಮಕ್ಕಳು ದೊಡ್ಡ ಪ್ರಮಾಣದಲ್ಲೂ ತಿನ್ನಬಹುದು. ಸಂಶೋಧನೆಗಳ ಪ್ರಕಾರ ತುಪ್ಪ ಸೇವನೆಯಿಂದ ದೇಹದಲ್ಲಿ ಕೆಟ್ಟ ಕೊಬ್ಬಿನಂಶ ನಿಯಂತ್ರಣಕ್ಕೆ ಬಂದು ಒಳ್ಳೆ ಕೊಬ್ಬು ಹೆಚ್ಚಾಗುತ್ತದೆ’ ಎನ್ನುತ್ತಾರೆ
ಬೆಣ್ಣೆ:
ಪುಟ್ಟ ಕೃಷ್ಣ ಕದ್ದು ತಿನ್ನುತ್ತಿದ್ದ ಬೆಣ್ಣೆ ಹಾಲಿನಿಂದ ಕಡೆದು ಅದರಿಂದ ಬರುವ ಕೆನೆಯಿಂದ ತಯಾರಾಗುತ್ತದೆ ಎಂದು ನಮಗೆಲ್ಲರಿಗೂ ಗೊತ್ತಿರುವ ವಿಷಯ. ಈ ಕಡೆಯುವಿಕೆಯ ಸಮಯದಲ್ಲಿ ಹಾಲಿನಿಂದ ನೀರಿನಂಶವೆಲ್ಲಾ ಬೇರ್ಪಟ್ಟು ಬಿಳಿ ಬಣ್ಣದ ಬೆಣ್ಣೆ ಹೊರಬರುತ್ತದೆ. ಅದರಿಂದ ಬೇರೆಯಾದ ನೀರನ್ನು ನಾವು ‘ಮಜ್ಜಿಗೆ’ ಎನ್ನುತ್ತೇವೆ.
ಯಾವುದು ಆರೋಗ್ಯಕರ?
ತುಪ್ಪ ಸಂಸ್ಕರಣೆ ಮಾಡದ ಕೊಬ್ಬು. ಇದರಲ್ಲಿ ವಿಟಮಿನ್ ‘ಎ’ ಮತ್ತು ಒಮೆಗಾ 3 ಕೊಬ್ಬಿನ ಆಮ್ಲೀಯ ಅಂಶಗಳಿವೆ, ಇನ್ನು ಬೆಣ್ಣೆಯಲ್ಲಿ ವಿಟಮಿನ್ ‘ಎ’ ಮಾತ್ರ ಇದೆ.
100 ಗ್ರಾಮ್ ಬೆಣ್ಣೆಯಲ್ಲಿ 717 ಕಿ. ಕ್ಯಾಲೋರಿ ಇದ್ದು ಅದರಲ್ಲಿ 51% ಒಳ್ಳೆ ಕೊಬ್ಬು ಮತ್ತು 3 ಗ್ರಾಂ ಕೆಟ್ಟ ಕೊಬ್ಬಿನಂಶ ಇರುತ್ತದೆ.
100 ಗ್ರಾಮ್ ತುಪ್ಪದಲ್ಲಿ 900ಕಿ. ಕ್ಯಾಲೋರಿ ಇದ್ದು, ಅದರಲ್ಲಿ 60% ಒಳ್ಳೆ ಕೊಬ್ಬು ಮತ್ತು ಯಾವುದೇ ರೀತಿಯ ಕೆಟ್ಟ ಕೊಬ್ಬಿನಂಶ ಇರುವುದಿಲ್ಲ.
ಆದರೆ ನೀವು ಅಂಗಡಿಯಿಂದ ತುಪ್ಪ ಖರೀದಿಸುವಾಗ ಅದರ ಮೇಲಿರುವ ಲೇಬಲ್ ಸರಿಯಾಗಿ ನೋಡಬೇಕು. ಅದರಲ್ಲಿ ‘ವೆಜಿಟೇಬಲ್ ತುಪ್ಪ’ ಎಂದು ಬರೆದಿದ್ದರೆ, ಅದು ಒಳ್ಳೆ ಗುಣಮಟ್ಟದ ತುಪ್ಪವಾಗಿರುವುದಿಲ್ಲ ಮತ್ತು ಇದರಲ್ಲಿ ಕೆಟ್ಟ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುತ್ತದೆ.
ತುಪ್ಪ ಮತ್ತು ಬೆಣ್ಣೆ ಎರಡರ ರುಚಿಯೂ ಬೇರೆ ಬೇರೆಯಾಗಿರುತ್ತದೆ. ಅದಕ್ಕೆ ಅದನ್ನು ಬೇರೆ ಬೇರೆ ಆಹಾರಗಳಲ್ಲಿ ವಿವಿಧ ರೀತಿಯಲ್ಲಿ ಉಪಯೋಗಿಸುತ್ತೇವೆ. ಭಾರತದಲ್ಲಿ ತುಪ್ಪ ಹೆಚ್ಚಾಗಿ ಆಹಾರಗಳನ್ನು ತಯಾರಿಸುವಾಗ ಬಳಸುತ್ತೇವೆ. ತುಪ್ಪ ಆಹಾರದಲ್ಲಿರುವ ಉಷ್ಣತೆಯನ್ನು ಕಡಿಮೆ ಮಾಡಿ ದೇಹವನ್ನು ತಂಪಾಗಿಡುತ್ತದೆ.
ಬೆಣ್ಣೆಯನ್ನು ಸಾಮಾನ್ಯವಾಗಿ ಸಾಸ್ ರೂಪದಲ್ಲಿ ಬಳಸುತ್ತೇವೆ. ಮತ್ತು ತರಕಾರಿ, ಮೀನು,ಏಡಿ, ಸಿಗಡಿ ಮುಂತಾದವುಗಳನ್ನು ಕರಿಯಲು ಉಪಯೋಗಿಸುತ್ತೇವೆ. ಇದು ಆಹಾರಕ್ಕೆ ಮಧುರವಾದ ಪರಿಮಳ ನೀಡುವುದರೊಂದಿಗೆ, ರುಚಿಯನ್ನೂ ಹೆಚ್ಚಿಸುತ್ತದೆ.
ತುಪ್ಪ ಮತ್ತು ಬೆಣ್ಣೆಯನ್ನು ಶೇಖರಿಸುವ ವಿಧಾನ:
ತುಪ್ಪ : ಮನೆಯಲ್ಲಿಯೇ ತಯಾರಿಸಿದ ತುಪ್ಪವನ್ನು ಹಾಗೆಯೇ ಸಾಮಾನ್ಯ ತಾಪಮಾನದಲ್ಲಿ 3 ತಿಂಗಳುಗಳ ಕೆಡದಂತೆ ಇಡಬಹುದು. ಆದರೆ ಸೂರ್ಯ ಕಿರಣಗಳಿಂದ ದೂರವಿರಬೇಕು ಮತ್ತು ಗಾಳಿ ಒಳಹೋಗದ ಡಬ್ಬದೊಳಗೆ ಶೇಖರಿಸಿಡಬೇಕು.
ಬೆಣ್ಣೆ: ಬೆಣ್ಣೆಯನ್ನು ನಾವು ಫ್ರಿಡ್ಜ್ ನಲ್ಲೇ ಇಡಬೇಕು. ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ, ಬಟರ್ ಪೇಪರ್ ಅಥವಾ ಝಿಪ್ ಇರುವ ಪ್ಲಾಸ್ಟಿಕ್ ಗಳಲ್ಲಿ ಶೇಖರಿಸಿಡುವುದು ಒಳಿತು. ಇದರಿಂದ ಬೆಣ್ಣೆಯನ್ನು ಬಿಸಿ ಮಾಡುವುದು ಸುಲಭವಾಗುತ್ತದೆ.
Comments are closed.