ಚಿಕನ್ ಪಾಕ್ಸ್ ಬೇಸಿಗೆ ಸಮಯದಲ್ಲಿ ಕಂಡು ಬರುವುದು ಹೆಚ್ಚು. ಈ ಕಾಯಿಲೆ ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲಿ ಕೂಡ ಕಾಣಿಸಿಕೊಳ್ಳುವುದು.
ಇದು ಬಂದರೆ ಮೈಯಲ್ಲಿ ಚಿಕ್ಕ ಗುಳ್ಳೆಗಳು ಬಂದು ತುರಿಕೆ, ನೋವು ಕಾಣಿಸಿಕೊಳ್ಳುವುದು. ಇದರ ನೋವಿಗೆ ಜ್ವರ, ತಲೆನೋವು ಕಾಣಿಸಿಕೊಳ್ಳುವುದು.
ಚಿಕನ್ ಪಾಕ್ಸ್ ಬಂದಾಗ ಈ ಕೆಳಗಿನಂತೆ ಉಪಚರಿಸಿದರೆ ಬೇಗನೆ ಗುಣ ಮುಖವಾಗುವುದು.
1. ಜ್ವರ ಕಮ್ಮಿಯಾಗಲು ಮೆಡಿಕಲ್‌ನಲ್ಲಿ ದೊರೆಯುವ ಮಾತ್ರೆಗಳನ್ನು ನುಂಗುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ಸ್ವ ಚಿಕಿತ್ಸೆ ಮಾಡಿಕೊಂಡರೆ ಅಡ್ಡ ಪರಿಣಾಮ ಉಂಟಾಗಬಹುದು.
2. ಈ ಕಾಯಿಲೆ ಬಂದರೆ ಸಹಿಸಲಾಸಾಧ್ಯವಾದ ತುರಿಕೆ ಉಂಟಾಗುವುದು. ಆದರೂ ಮೈಯನ್ನು ಕೆರೆಯಬಾರದು. ತುಂಬಾ ತುರಿಕೆ ಕಂಡು ಬಂದರೆ ವೈದ್ಯರನ್ನು ಕಂಡು ಔಷಧಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
3. ಸಾಕಷ್ಟು ನೀರು ಮತ್ತು ಎಳನೀರು ಕುಡಿಯುವುದು ಒಳ್ಳೆಯದು.
4. ತುಂಬಾ ಮೃದುವಾದ ಆಹಾರವನ್ನು ತಿನ್ನಬೇಕು. ಬಾಯಲ್ಲಿ ಕೂಡ ಚಿಕನ್ ಪಾಕ್ಸ್ ಬಂದಿದ್ದರೆ ಖಾರ, ಹುಳಿ, ಉಪ್ಪು ಮತ್ತು ತಣ್ಣನೆಯ ಆಹಾರ ತಿನ್ನಬೇಕು.
5. ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.
6. ತುರಿಕೆಯನ್ನು ತಡೆಯಲು ಕಲಾಮೈನ್ ಲೋಷನ್ ಹಚ್ಚಬಹುದು.
7. ಕೈ ಬೆರಳಿನಲ್ಲಿರುವ ಉಗುರುಗಳನ್ನು ಕತ್ತರಿಸಬೇಕು. ಇಲ್ಲದಿದ್ದರೆ ತುರಿಸಿ ಗಾಯವಾಗುವುದು. ಕೈ ಉಗುರು ತಾಗಿದಂತೆ ತಡೆಯಲು ಕೈಗಳಿಗೆ ಗ್ಲೌಸ್ ಹಾಕಬಹುದು.
8. ತಣ್ಣೀರಿನಿಂದ ಸ್ನಾನ ಮಾಡಿಸಬೇಕು. ತುರಿಕೆಯನ್ನು ತಡೆಯಲು ನೀರಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಸ್ನಾನ ಮಾಡಬಹುದು.
9. ಕೆಲವರಿಗೆ ಮೈಯಲ್ಲಿ ಎದ್ದ ಗುಳ್ಳೆಗಳು ಒಣಗದೆ ನೋವು ಮತ್ತು ತುರಿಕೆ ಮತ್ತಷ್ಟು ಜಾಸ್ತಿಯಾಗುವುದು. ಈ ರೀತಿಯಾದರೆ ಕೂಡಲೇ ವೈದ್ಯರನ್ನು ಕಾಣಬೇಕು. 10. ಚಿಕನ್ ಪಾಕ್ಸ್ ಗುಣಪಡಿಸಲು ಚುಚ್ಚು ಮದ್ದಿದೆ,
ಅದನ್ನು ಹಾಕಿಸಿಕಂಡರೂ ಗುಣ ಮುಖವಾಗುವುದು. ಆದರೆ ಹೆಚ್ಚಿನವರು ಚಿಕನ್ ಪಾಕ್ಸ್ ಬಂದರೆ ಮನೆ ಮದ್ದು ಮಾಡುತ್ತಾರೆ. ಬೇವನ್ನು ಮನೆ ಮದ್ದಾಗಿ ಉಪಯೋಗಿಸುತ್ತಾರೆ.
Comments are closed.