ಉಡುಪಿ: ಉಡುಪಿ ಜಿಲ್ಲೆಯಲ್ಲಿ ಬುಧವಾರ ಹೊಸ ಆರು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಗೆ ಮಹಾರಾಷ್ಟ್ರವೇ ಮರ್ಮಾಘಾತ ನೀಡಿದಂತಾಗಿದ್ದು ಸೋಂಕಿತರ ಸಂಖ್ಯೆ 21ಕ್ಕೇರಿದೆ.
ಇತ್ತೀಚೆಗೆ ಹೃದಯಾಘಾತದಿಂದ ಮೃತಪಟ್ಟು ಬಳಿಕ ವರದಿಯಲ್ಲಿ ಕೊರೋನಾ ಸೋಂಕು ಪಾಸಿಟಿವ್ ಇದ್ದ ಬಗ್ಗೆ ದೃಢವಾದ ಕುಂದಾಪುರ ಮೂಲದ 54 ವರ್ಷ ಪ್ರಾಯದ ವ್ಯಕ್ತಿಯ ಪತ್ನಿ 44 ವರ್ಷದ ಮಹಿಳೆ ಮತ್ತು 15 ವರ್ಷದ ಮಗನಿಗೂ ಈಗ ಕೊರೋನಾ ಪಾಸಿಟಿವ್ ಬಂದಿದೆ. ಈ ಇಬ್ಬರು ಮುಂಬೈನಿಂದ (ಪತಿಯ ಜೊತೆ) ಬಂದಿದ್ದರು. ಅಲ್ಲದೆ ಮುಂಬೈನಿಂದ ಬಂದು ಕ್ವಾರೆಂಟೈನ್ ಕೇಂದ್ರದಲ್ಲಿದ್ದ 31 ವರ್ಷದ ಮಹಿಳೆ, 41 ವರ್ಷದ ಮಹಿಳೆ. ಇನ್ನೊಂದು ಕ್ವಾರೆಂಟೈನ್ ನಲ್ಲಿದ್ದ 55 ವರ್ಷದ ಪುರುಷ ಮತ್ತು 74 ವರ್ಷದ ವ್ಯಕ್ತಿಗೆ ಕೊರೋನಾ ಪಾಸಿಟಿವ್ ಬಂದಿದೆ.
Comments are closed.