ಆರೋಗ್ಯ

ಬಾಂಬೆಯಲ್ಲಿ ಕುಳಿತು ಡಾನ್ ರೀತಿ‌ ಕರೆ ಮಾಡಿ ಮಾತನಾಡಿದ್ರೇ ಹೆದರಲ್ಲ: ಉಡುಪಿ ಡಿಸಿ ಜಿ. ಜಗದೀಶ್ (Video)

Pinterest LinkedIn Tumblr

ಕುಂದಾಪುರ: ಬಾಂಬೆಯಲ್ಲಿ ಕುಳಿತು ಡಾನ್ ರೀತಿ ಕರೆ ಮಾಡಿ ಮಾತನಾಡುವುದು ಮಾತ್ರವಲ್ಲದೇ ಊರಿನಿಂದಲೂ ಕ್ಷುಲ್ಲಕ‌ ಕಾರಣಕ್ಕೆ ಕೆಲ ಕಿಡಿಗೇಡಿಗಳು ಕರೆ ಮಾಡಿ ರೆಕಾರ್ಡ್ ಮಾಡಿ ಅದನ್ನು ವೈರಲ್ ಮಾಡ್ತಿದ್ದಾರೆ. ಫೋನ್ ರೆಕಾರ್ಡ್ ಮಾಡಿ ವೈರಲ್‌ ಮಾಡುವ ಕೆಲಸ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಮಾಡಿದರೆ ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆಡಿಯೋ ವೈರಲ್ ಮಾಡುವವರ ವಿರುದ್ದ ಉಡುಪಿ ಡಿಸಿ ಗರಂ ಆಗಿದ್ದು ಕಿಡಿಗೇಡಿಗಳ ವಿರುದ್ದ ಉಡುಪಿ ಜಿಲ್ಲಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದುಅಂಥಹ ಹಲವು ಕರೆಗಳನ್ನು ನಾನು ನೋಡಿದ್ದು ಅದಕ್ಕೆ ಡೋಂಟ್ ಕೇರ್ ಎಂದಿದ್ದಾರೆ. ಫೋನ್ ಮಾಡಿ ಎಂಎಲ್ಎ, ಎಂಪಿ, ಡಿಸಿ, ಎಸ್ಪಿ ಅವರಿಗೆ ಹೆದರಿಸುವ ಆಟ ನಮ್ಮ ಬಳಿ ನಡೆಯೋದಿಲ್ಲ. ಆತ ಎಷ್ಟೇ ದೊಡ್ಡ ಮನುಷ್ಯ ಆದರೂ ಆತನನ್ನು ಜೈಲಲ್ಲಿಡುತ್ತೇವೆ ಎಂದರು.

ನಾವು ಮೂರು ತಿಂಗಳಿಂದ ರಾತ್ರಿ ಹಗಲು ಕೆಲಸ ಮಾಡುತ್ತಿದ್ದು ಊಟ, ತಿಂಡಿ ಬಿಟ್ಟು ನಿಮ್ಮ ಕಾಳಜಿಗಾಗಿ ದುಡಿಯುತ್ತಿದ್ದೇವೆ. ಆದರೆ ಮೊಸರಲ್ಲಿ ಕಲ್ಲು ಹುಡುಕುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಕುಂದಾಪುರ ತಾ.ಪಂ ಸಭಾಂಗಣದಲ್ಲಿ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಈ‌ ಪ್ರಸಂಗ ನಡೆದಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.