ಆರೋಗ್ಯ

ಕ್ಯಾನ್ಸರ್, ಸಕ್ಕರೆ, ಹೃದಯದ ಕಾಯಿಲೆಗೆ ಬ್ರೇಕ್​ ನೀಡಿ, ದೇಹಕ್ಕೆ ಇಮ್ಯುನಿಟಿ ಬೂಸ್ಟ್ ಮಾಡಬಲ್ಲ ಹಣ್ಣು ಯಾವುದು ಬಲ್ಲಿರಾ.?

Pinterest LinkedIn Tumblr

ಸೀಬೆ ಹಣ್ಣು ಇಷ್ಟಪಡದವರೇ ಇಲ್ಲ. ಉಪ್ಪು, ಖಾರದಪುಡಿ ಅಥವಾ ಚಾಟ್​ ಮಸಲಾ ಮತ್ತು ಸೀಬೆ ಹಣ್ಣಿನ ಕಾಂಬಿನೇಷನ್​ ನೋಡಿದ್ರೆ ಸಾಕು…ಬಾಯಲ್ಲಿ ನೀರು ಬರುತ್ತೆ. ಕೆಲವರಿಗೆ ಕಾಯಿಸೀಬೆ ಇಷ್ಟವಾದ್ರೆ ಇನ್ನು ಕೆಲವರಿಗೆ ಹಣ್ಣು ಅಂದ್ರೆ ಪಂಚಪ್ರಾಣ. ಆದ್ರೆ ಸೀಬೆ ಹಣ್ಣು ಅಥವಾ ಪೇರಳೆ ಹಣ್ಣು ಯಾವ ರೂಪದಲ್ಲಿ ಬಂದ್ರೂ ಅದ್ರ ಪೌಷ್ಠಿಕಾಂಶ ಮಾತ್ರ ಎಲ್ಲಾ ಹಣ್ಣುಗಳನ್ನು ಮೀರಿಸುವಂತದ್ದು.

1. ಇಮ್ಯುನಿಟಿ ಬೂಸ್ಟರ್​ :
ಸೀಬೆ ಹಣ್ಣು, ಬಾಯಿಗೂ ರುಚಿ ಕೊಡುತ್ತೆ, ಇಮ್ಯುನಿಟಿಯನ್ನು ಕೂಡ ಬೂಸ್ಟ್​ ಮಾಡುತ್ತೆ. ಸೀಬೆ ಹಣ್ಣಲ್ಲಿ ವಿಟಮಿನ್ ‘ಸಿ’​ ಹೇರಳವಾಗಿದೆ. ವಿಟಮಿನ್ ​‘ಸಿ’ ಸೇವನೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತೆ. ಬಿಳಿ ರಕ್ತ ಕಣಗಳು ರೋಗ ನಿರೋಧಕಗಳಾಗಿ ಕಾರ್ಯ ನಿರ್ವಹಿಸುತ್ತೆ.

2. ಕ್ಯಾನ್ಸರ್ ದೂರವಿಡುತ್ತೆ
ಸೀಬೆ ಹಣ್ಣಿನಲ್ಲಿರುವ ಲೈಕೋಪೀನ್, ಬ್ರೆಸ್ಟ್​ ಕ್ಯಾನ್ಸರ್​ ವೃದ್ಧಿಯಾಗದಂತೆ ನೋಡಿಕೊಳ್ಳುತ್ತೆ ಎಂದು ಡಾ. ಮನೋಜ್​ ಕೆ. ಅಹುಜಾ ತಿಳಿಸಿದ್ದಾರೆ.

3. ಸಕ್ಕರೆ ಕಾಯಿಲೆಗೆ ಬ್ರೇಕ್​
ಸೀಬೆ ಹಣ್ಣಿನಲ್ಲಿ ಫೈಬರ್​ ಹೆಚ್ಚಿದ್ದು, ಸಕ್ಕರೆ ಪ್ರಮಾಣ ಬಹಳ ಕಡಿಮೆ ಪ್ರಮಾಣದಲ್ಲಿದೆ. ಹಾಗಾಗಿ ಇದರ ಸೇವನೆ ದೇಹಕ್ಕೆ ಉತ್ತಮವಷ್ಟೇ ಅಲ್ಲ, ಸಕ್ಕರೆ ಖಾಯಿಲೆಯನ್ನು ಹೆಚ್ಚಾಗದಂತೆ ಕಾಪಾಡುತ್ತೆ.

4. ಹೃದಯದ ಆರೋಗ್ಯ ಕಾಪಾಡುತ್ತದೆ
ಸೀಬೆ ಹಣ್ಣು ದೇಹದಲ್ಲಿ ಸೋಡಿಯಂ ಮತ್ತು ಪೊಟಾಶಿಯಂ ನಡುವಿನ ಬ್ಯಾಲೆನ್ಸ್​ ಕಾಪಾಡುತ್ತದೆ. ರಕ್ತದ ಒತ್ತಡ ಮತ್ತು ಹೈಪರ್​ ಟೆನ್ಷನ್​ನಿಯಂತ್ರಿಸುತ್ತದೆ. ಅದಲ್ಲದೆ ಬ್ಯಾಡ್​ ಕೊಲೆಸ್ಟ್ರಾಲ್​​​ ಶಮನ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತೆ. ಇನ್ನು ದೇಹದಲ್ಲಿ ಉತ್ತಮ ಕೊಬ್ಬನ್ನು ಹೆಚ್ಚಿಸುವ ಕೆಲಸವನ್ನು ಮಾಡುತ್ತೆ.

5. ಕಾನ್ಸ್​​​ಟಿಪೇಷನ್​​​ನಿಂದ ದೂರವಿಡುತ್ತೆ
ಬೇರೆ ಹಣ್ಣುಗಳಿಗೆ ಹೋಲಿಸಿದ್ರೆ ಸೀಬೆಹಣ್ಣು ಜೀರ್ಣಕ್ರಿಯೆಗೆ ಬಹಳ ಸಹಕಾರಿಯಾಗಿದೆ. ಪ್ರತಿನಿತ್ಯ ಒಂದು ಸೀಬೆಹಣ್ಣು ಸೇವಿಸೋದ್ರಿಂದ ದೇಹಕ್ಕೆ ಕಡಿಮೆ ಅಂದ್ರೂ 12% ಪೌಷ್ಠಿಕಾಂಶ ಸಿಗುತ್ತೆ. ಇದರ ಬೀಜಗಳನ್ನು ಸರಿಯಾಗಿ ಜಗಿಯುವುದರಿಂದ ಜೀರ್ಣಕ್ರಿಯೆ ಸುಲಭಗೊಳ್ಳುತ್ತೆ.

6. ಕಣ್ಣಿನ ಆರೋಗ್ಯ ಕಾಪಾಡುತ್ತದೆ
ಸೀಬೆ ಹಣ್ಣಿನಲ್ಲಿರುವ ವಿಟಮಿನ್​ ‘ಎ’ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಇದು ಕೇವಲ ಕಣ್ಣಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ದೂರುವಿಡುವುದಲ್ಲದೆ, ದೃಷ್ಠಿಯನ್ನು ಕೂಡ ವೃದ್ಧಿಗೊಳಿಸುತ್ತೆ.

7. ಗಂರ್ಭಿಣಿಯರಿಗೆ ಉತ್ತಮ
ಗರ್ಭಿಣಿಯರಿಗೆ ವಿಟಮಿನ್​ ‘ಬಿ-9’ ಅವಶ್ಯಕತೆ ಹೆಚ್ಚಿನ ಮಟ್ಟದಲ್ಲಿರುತ್ತೆ. ಯಾಕಂದ್ರೆ ಇಂತಹ ಸಂದರ್ಭದಲ್ಲಿ ಕೇವಲ ತಾಯಿ ಮಾತ್ರವಲ್ಲದೆ ಆಕೆ ಹೊಟ್ಟೆಯಲ್ಲಿ ಇನ್ನೊಂದು ಪುಟ್ಟ ಜೀವ ಉಸಿರಾಡುತ್ತಿರುತ್ತೆ. ಸೀಬೆ ಹಣ್ಣು ನರಗಳ ವ್ಯವಸ್ಥೆಯನ್ನು, ಕ್ರಿಯೆಯನ್ನ ಸುಲಭವಾಗಿಸುತ್ತೆ. ಹೀಗಾಗಿ ಸೀಬೆ ಹಣ್ಣು ಮಗುವನ್ನು ನರಗಳ ತೊಂದರೆಯಿಂದ ದೂರವಿಡುತ್ತೆ.

8. ಹಲ್ಲು ನೋವಿಗೆ ರಾಮಬಾಣ
ಪುರಾತನ ಕಾಲದಲ್ಲಿ ಸೀಬೆ ಹಣ್ಣಿನ ಎಲೆಗಳಿಂದ ಹಲ್ಲುಗಳನ್ನು ಶುಚಿಗೊಳಿಸುವ ವಾಡಿಕೆಯಿತ್ತು. ಯಾಕೆಂದ್ರೆ ಸೀಬೆ ಹಣ್ಣಿನ ಎಲೆಗಳಲ್ಲಿರುವ ಌಂಟಿ-ಬ್ಯಾಕ್ಟೀರಿಯಲ್​ ಗುಣ ಹಲ್ಲಿನಲ್ಲಿ ಅಡಗಿರುವ ಕೀಟಾಣುಗಳನ್ನ ನಾಶ ಮಾಡುತ್ತೆ. ಅಲ್ಸರ್​, ವಸಡು​ಗಳ ಸಮಸ್ಯೆಗಳಿಂದ ಮುಕ್ತಿ ನೀಡುತ್ತೆ.

Comments are closed.