ಆರೋಗ್ಯ

ಕಣ್ಣಿನ ಸಂಬಂಧಿತ ದೋಷಗಳನ್ನು ನಿವಾರಿಸಲು ಬೆಣ್ಣೆ ಹಣ್ಣು ಬಹಳ ಸಹಕಾರಿ.

Pinterest LinkedIn Tumblr

ಬಟರ್ ಫ್ರೂಟ್ ಅಚ್ಚ ಕನ್ನಡದಲ್ಲಿ ಬೆಣ್ಣೆ ಹಣ್ಣು ಎಂದು ಕರಿಯುವ ರುಚಿಯಾದ ಹಣ್ಣು, ಇನ್ನು ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಅವೊಕಾಡೋ ಎಂದು ಕರೆಯುತ್ತಾರೆ, ಇನ್ ನಮ್ಮ ಕರ್ನಾಟಕದಲ್ಲಿ ಈ ಹಣ್ಣನ್ನು ಹೆಚ್ಚಾಗಿ ಬೆಳೆಯುವುದು ಕೊಡಗು ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ, ಈ ಹಣ್ಣಿನ ಮರಗಳು ಬಹಳ ಎತ್ತರವಾಗಿ ಬೆಳೆಯುತ್ತವೆ ಹಾಗೂ ಹಣ್ಣುಗಳು ಹಸಿರು ಮಿಶ್ರಿತ ಕಂದು ಬಣ್ಣದಿಂದ ಕೂಡಿರುತ್ತವೆ.

ಒಂದು ಬೆಣ್ಣೆ ಹಣ್ಣಿನಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಫೈಬರ್, ಮಿಯಾಸಿನ್, ಕ್ಯಾಲ್ಸಿಯಂ, ವಿಟಮಿನ್ ಸಿ, ಮೆಗ್ನೀಷಿಯಂ, ಫೋಸ್ಪರಸ್, ಪೊಟ್ಯಾಶಿಯಂ ಹೀಗೆ ಇಷ್ಟೊಂದು ಆರೋಗ್ಯವರ್ಧಕ ಶಕ್ತಿಗಳನ್ನು ತನ್ನಲ್ಲಿಗೆ ಅಡಗಿಸಿಟ್ಟುಕೊಂಡಿದೆ ಅಷ್ಟೇ ಅಲ್ಲದೆ ಇದರಲ್ಲಿ ಆರೋಗ್ಯವರ್ಧಕ ಕೊಬ್ಬು ಇರುವುದರಿಂದ ಆಸಕ್ತಿ ಇರುವವರಿಗೆ ಶಕ್ತಿಯನ್ನು ನೀಡುತ್ತದೆ.

ಬೆಣ್ಣೆ ಹಣ್ಣಿನಲ್ಲಿ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿರುವುದರಿಂದ ಇದು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಇದರಲ್ಲಿ ಪೋಲೆಟ್ ಅಂಶ ಹೆಚ್ಚಾಗಿರುವುದರಿಂದ ಹೃದಯ ಸಂಬಂಧಿ ಯಾವುದೇ ಕಾಯಿಲೆಯಿದ್ದರೂ ಈ ಹಣ್ಣನ್ನು ತಿಂದರೆ ಒಳ್ಳೆಯದು.

ಕ್ಯಾಟ್ ಯಕ್ಟ್ ತರಹದ ಹಾಗೂ ಇನ್ನಿತರ ಕಣ್ಣಿನ ಸಂಬಂಧಿತ ದೋಷಗಳನ್ನು ನಿವಾರಿಸಲು ಬೆಣ್ಣೆ ಹಣ್ಣು ಬಹಳ ಸಹಕಾರಿ, ಜೊತೆಯಲ್ಲಿ ಕಣ್ಣಿನ ರಕ್ಷಣೆ ಮಾಡುವುದರಲ್ಲಿ ಸಹ ಇದು ಮುಂದೆ, ಮೂಳೆಗಳಿಗೆ ಶಕ್ತಿದಾಯಕ ವಾಗುತ್ತದೆ ಹಾಗೂ ಇದರಿಂದ ದೇಹವು ಗಟ್ಟಿಯಾಗುತ್ತದೆ ನೆನಪಿನ ಶಕ್ತಿ ಹೆಚ್ಚಿಸುವುದರಲ್ಲಿ ಈ ಹಣ್ಣು ಪ್ರಬಲ.

ದೇಹದ ಆರೋಗ್ಯವನ್ನು ಅಷ್ಟೇ ಅಲ್ಲದೆ ತ್ವಚೆಯ ಕಾಂತಿಯನ್ನು ಹೆಚ್ಚಿಸುವಲ್ಲಿ ಬೆಣ್ಣೆ ಹಣ್ಣು ಮಹತ್ವದ ಪಾತ್ರವನ್ನು ವಹಿಸುತ್ತದೆ, ಬೆಣ್ಣೆ ಹೆಣ್ಣಿಗೆ ಸ್ವಲ್ಪ ಹಾಲು ಅರಿಶಿನ ಮಿಶ್ರ ಮಾಡಿ ನಿಮ್ಮ ಮುಖಕ್ಕೆ ಮಸಾಜ್ ಮಾಡಿ ನಂತರ ಬೆಣ್ಣೆ ಹಣ್ಣಿನ ಜೇನು ಬೆರೆಸಿ ಫೇಸ್ ಪ್ಯಾಕ್ ಮಾಡಿದರೆ ತ್ವಚೆ ಬೆಣ್ಣೆಯಂತೆ ನುಣುಪಾಗಿ ಆಗುತ್ತದೆ.

Comments are closed.