ಆರೋಗ್ಯ

ಶಂಕರನಾರಾಯಣ ಠಾಣೆ ಸಿಬ್ಬಂದಿಗೆ ಕೊರೋನಾ ‘ನೆಗೆಟಿವ್’ ವರದಿ: ಆಸ್ಪತ್ರೆಯಿಂದ ಡಿಶ್ಚಾರ್ಜ್

Pinterest LinkedIn Tumblr

ಕುಂದಾಪುರ: ಶಂಕರನಾರಾಯಣ ಪೊಲೀಸ್ ಠಾಣೆಯ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮೊದಲಿನ ಕೋವಿಡ್ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ವರದಿ ಬಂದಿದ್ದು ನಂತರದ ಪರೀಕ್ಷೆಯಲ್ಲಿ ಅವರಿಗೆ ಕೊರೋನಾ ನೆಗೆಟಿವ್ ಎಂದು ದೃಢವಾಗಿದೆ.

(File photo)

(ಎಎಸ್ಪಿ ಹರಿರಾಂ ಶಂಕರ್)

ಸದ್ಯ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಲಾಗಿದೆ. ಈಗಿನ ವರದಿ ಹಿನ್ನೆಲೆ ಅವರಿಗೆ ಪಾಸಿಟಿವ್ ವರದಿ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಶಂಕರನಾರಾಯಣ ಪೊಲೀಸ್ ಠಾಣೆ ಇತರೆ ಸಿಬ್ಬಂದಿಗಳ ಆರೋಗ್ಯ ಕಾಳಜಿಯಿಂದಾಗಿ ಅವರನ್ನು ಸದ್ಯ ಹೋಂ ಕ್ವಾರೆಂಟೈನ್ ಮಾಡಲಾಗಿದ್ದು ಕುಂದಾಪುರ ಉಪವಿಭಾಗದ ಪೊಲೀಸರ ನಿಯೋಜನೆಯಲ್ಲಿ ಮುಂದಿನ 7 ದಿನ ಠಾಣೆ ಕಾರ್ಯನಿರ್ವಹಿಸಲಿದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Comments are closed.