ಆರೋಗ್ಯ

ದಂಪತಿಗಳ ರಕ್ತದ ಗುಂಪು ಒಂದೇ ಆಗಿದ್ದರೆ ಹುಟ್ಟಲಿರುವ ಮಗುವಿಗೆ ಸಮಸ್ಯೆ ಇದೇಯಾ..?

Pinterest LinkedIn Tumblr

ಇದು ಹಲವರ ಪ್ರಶ್ನೆ, ನಮ್ಮಿಬ್ಬರ ರಕ್ತದ ಗುಂಪು ಒಂದೇ ಆಗಿದೆ, ಹಲವರು ಇದರ ಬಗ್ಗೆ ಹಲವು ತರಹ ಹೇಳುವರು, ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ, ಚಿಂತಿಸ ಬೇಡಿ ಟಿನಿಸ್ಟೆಪ್ ನಿಮಗೆ ಸಹಾಯ ಮಾಡುತ್ತದೆ. ಈ ಲೇಖನ ನಿಮಗೆ ಸಂಪೂರ್ಣ ವಿವರವನ್ನು ನೀಡುತ್ತದೆ.

೧.ಮುಖ್ಯವಾಗಿ ಎರಡು(೨) ಬಗೆಯ ಪ್ರಮುಖ ರಕ್ತ ಗುಂಪುಗಳು ಮತ್ತು ೪೦೦ ಬಗೆಯ ಉಪ ಅಥವಾ ಸಣ್ಣ ಬಗೆಯ ರಕ್ತ ಗುಂಪುಗಳಿವೆ.
೨.ಪ್ರಮುಖವಾದ ಎರಡು ಬಗೆಯ ರಕ್ತದ ಗುಂಪುಗಳೆಂದರೆ, ABO ಸಿಸ್ಟಮ್ ಮತ್ತು (Rhesus)Rh ಸಿಸ್ಟಮ್.
೩.ABO ಸಿಸ್ಟಮ್ ಅಲ್ಲಿ A, B, AB, ಮತ್ತು O ಎಂಬ ರಕ್ತದ ಗುಂಪುಗಳಿವೆ, ಹಾಗೆಯೆ Rh ಸಿಸ್ಟಮ್ ಇದ್ದರೆ ಅದು ಪಾಸಿಟಿವ್ ಇಲ್ಲದಿದ್ದರೆ ಅದು ನೆಗೆಟಿವ್.
೪.ರಕ್ತದ ಗುಂಪನ್ನು ಈ ರೀತಿಯಲ್ಲಿ ಉಲ್ಲೇಖಿಸುವೆವು, X+ ಅಥವಾ X-, ಇದರಲ್ಲಿ X ಎಂದರೆ A, B ಅಥವಾ O ಆಗಿರಬಹುದು, ಹಾಗೆಯೆ + ಮತ್ತು – Rh ಅನ್ನು ಸೂಚಿಸುತ್ತದೆ[+ ಎಂದರೆ Rh ಇದೆ ಎಂದರ್ಥ(Rh ಪಾಸಿಟಿವ್) – ಎಂದರೆ Rh ಇಲ್ಲ ಎಂದರ್ಥ(Rh ನೆಗೆಟಿವ್)].

ಗಂಡ ಹೆಂಡತಿಯ ರಕ್ತದ ಗುಂಪು ಒಂದೇ ಆಗಿದ್ದರೆ ಮುಂದೆ ಹುಟ್ಟಲಿರುವ ಮಗುವಿಗೆ ಅಥವಾ ಗರ್ಭಾವಸ್ಥೆಯಲ್ಲಿ ಏನಾದರು ಸಮಸ್ಯೆ ಆಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು ಮೇಲಿನ ನಾಲ್ಕು ಅಂಶಗಳನ್ನು ನೀವು ತಿಳಿದಿರಬೇಕು. ಇಲ್ಲವಾದರೆ ಇದು ನಿಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವಾಗಬಹುದು.

ಒಂದೇ ರಕ್ತ ಗುಂಪಿನ ಸಂಗಾತಿಯನ್ನು ಮದುವೆಯಾಗುವುದರಿಂದ ಯಾವುದೇ ತೊಂದರೆ ಇಲ್ಲ, ಯಾವುದೇ ರಕ್ತ ಗುಂಪಿನ ಗಂಡು/ಹೆಣ್ಣು ಯಾವುದೇ ರಕ್ತ ಗುಂಪಿನ ಗಂಡು/ಹೆಣ್ಣನ್ನು ಮದುವೆಯಾಗಬಹುದು. ಅದು ಒಂದೇ ಗುಂಪಿನ ರಕ್ತವಾಗಿದ್ದರು ಏನು ತೊಂದರೆ ಇಲ್ಲ.

ABO ಸಿಸ್ಟಮ್ ವಿರುದ್ದದ ಪ್ರತಿಕಾಯಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಅವು ಜರಾಯುವನ್ನು(ಪ್ಲಾಸೆಂಟಾ) ದಾಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಭ್ರೂಣವು ಸುರಕ್ಷಿತವಾಗಿರುತ್ತದೆ, ಅದು ತಾಯಿ ಮತ್ತು ಮಗುವಿನ ರಕ್ತದ ಗುಂಪು ಬೇರೆ ಬೇರೆ ಆಗಿದ್ದರು ಸಹ.

Rh ಸಿಸ್ಟಮ್ ವಿರುದ್ದದ ಪ್ರತಿಕಾಯಗಳು ಸಣ್ಣದಾಗಿದ್ದು, ಅವು ಜರಾಯುವನ್ನು ದಾಟಿ ಭ್ರೂಣವನ್ನು ತಲುಪಬಹುದು, ಮತ್ತು “ಹಿಮೋಲಿಸಿಸ್”ಗೆ ಕಾರಣವಾಗಬಹುದು.

ಹಿಮೋಲಿಸಿಸ್ ಯಾವಾಗ ಸಂಭವಿಸುತ್ತದೆ?
ಇದು ತಂದೆಯು Rh ಪಾಸಿಟಿವ್ ಹೊಂದಿದ್ದು, ತಾಯಿಯು Rh ನೆಗೆಟಿವ್ ಅನ್ನು ಹೊಂದಿದ್ದರೆ ಇದು ಆಗುವ ಅವಕಾಶ ಇರುತ್ತದೆ.
ತಾಯಿಯ ಮೊದಲ ಗರ್ಭಾವಸ್ಥೆಯಲ್ಲಿ, ತಾಯಿಯ ಬಳಿ ಯಾವುದೇ ಪ್ರತಿಕಾಯಗಳು ಇಲ್ಲದಿರುವುದರಿಂದ ಮೊದಲ ಗರ್ಭಾವಸ್ಥೆಯಲ್ಲಿ ತಾಯಿಗೆ ಆಗಲಿ ಅಥವಾ ಮಗುವಿಗೆ ಆಗಲಿ ಯಾವುದೇ ಸಮಸ್ಯೆ ಅಥವಾ ತೊಂದರೆ ಆಗುವುದಿಲ್ಲ.
ಹೆರಿಗೆಯ ಸಮಯದಲ್ಲಿ, ರಕ್ತ ಮಿಶ್ರಣ ಆಗುವ ಸಾಧ್ಯತೆಗಳಿವೆ, ಮತ್ತು ಈ ಸಮಯದಲ್ಲಿ ತಾಯಿಯು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವುದರಿಂದ ಇದು ನಿಮ್ಮ ಎರಡನೇ ಮಗುವಿಗೆ ತೊಂದರೆಯನ್ನು ಉಂಟು ಮಾಡಬಹುದು.

ಈ ಪರಿಸ್ಥಿತಿಯನ್ನು ತಿಳಿದುಕೊಂಡು, ಇಂತಹ ಸನ್ನಿವೇಶಗಳಲ್ಲಿ ನೀವು ಎಚ್ಚರಿಕೆಯ ಗಮನವಹಿಸುವುದು ತುಂಬಾ ಮುಖ್ಯ, ಅದು ತಂದೆ Rh ಪಾಸಿಟಿವ್ ಆಗಿದ್ದು, ತಾಯಿಯು Rh ನೆಗೆಟಿವ್ ಆಗಿರುವಾಗ. ಇಂತಹ ಸಂದರ್ಭದಲ್ಲಿ ಹೆರಿಗೆಯಾದ ತಕ್ಷಣ ಮಗುವಿನ ರಕ್ತದ ಗುಂಪನ್ನು ಪರೀಕ್ಷಿಸಿ, ಅದು ನೆಗೆಟಿವ್ ಆಗಿದ್ದರೆ ಏನು ತೊಂದರೆ ಇಲ್ಲ, ಆದರೆ ಪಾಸಿಟಿವ್ ಆಗಿದ್ದರೆ, ಸೂಕ್ಷ್ಮತೆಯನ್ನು ತಡೆಗಟ್ಟಲು ತಾಯಿ ಇಮ್ಯುನೊಗ್ಲಾಬ್ಯುಲಿನ್ ಅನ್ನು ನೀಡಬೇಕು.

ನೆನಪಿರಲಿ, ರಕ್ತದ ಗುಂಪು ಒಂದೇ ಆಗಿ Rh ತಂದೆಯಲ್ಲಿ ಪಾಸಿಟಿವ್(ಉದಾಹರಣೆಗೆ O+ve) ಇದ್ದು, ತಾಯಿಯಲ್ಲಿ ನೆಗಟಿವ್(O-ve) ಇದ್ದರು ಸಹ ಮೊದಲ ಗರ್ಭಾವಸ್ಥೆಯಲ್ಲಿ ತಾಯಿ ಮತ್ತು ಮಗು ಇಬ್ಬರಿಗೂ ಯಾವುದೇ ತೊಂದರೆ ಇಲ್ಲ.

ಎರಡನೇ ಮಗುವಿಗೆ ಇದು ತೊಂದರೆಯನ್ನು ಉಂಟುಮಾಡಬಹುದು ಆದರೆ, ಇದಕ್ಕೆ ಚಿಕಿತ್ಸೆ ಇದ್ದು, ವೈದ್ಯರು ಇದನ್ನು ಸೂಚಿಸುತ್ತಾರೆ. ಅದು ಒಂದು ಇಂಜೆಕ್ಷನ್ ಅನ್ನು ಹೆರಿಗೆಯಾದ ೭೨ ಗಂಟೆಯೊಳಗೆ ನೀಡಿದರೆ ಸಾಕು, ಯಾವುದೇ ತೊಂದರೆಯು ಇರುವುದಿಲ್ಲ.

Comments are closed.