ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರವೂ ಕೊರೋನಾ ಆರ್ಭಟ ಮುಂದುವರೆದಿದ್ದು ,ಜಿಲ್ಲೆಯಲ್ಲಿ 92 ಹೊಸ ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು ಸೋಂಕಿತರ ಸಂಖ್ಯೆ 564 ಕ್ಕೆ ಏರಿಕೆಯಾಗಿದೆ.
ಗುರುವಾರ ದೃಢಟಪಟ್ಟ ಸೋಂಕಿತರು ಎಲ್ಲರೂ ಕೂಡ ಮಹಾರಾಷ್ಟ್ರದಿಂದ ಬಂದವರಾಗಿದ್ದು ಈ ಪೈಕಿ ಒಬ್ಬರು ದಕ್ಷಿಣ ಕನ್ನಡಕ್ಕೆ ಸಂಬಂದಿಸಿದವರಾದ್ದರಿಂದ ಅಲ್ಲಿಗೆ ಮಾಹಿತಿ ನೀಡಲಾಗುತ್ತೆ ಎಂದು ಡಿಸಿ ಜಿ. ಜಗದೀಶ್ ತಿಳಿಸಿದ್ದಾರೆ. 78 ಜನ ಪುರುಷರು, 13 ಮಂದಿ ಮಹಿಳೆಯರು ಓರ್ವ ಮಗುವಿನಲ್ಲಿ ಸೋಂಕುಕಾಣಿಣಿಕೊಂಡಿದೆ. ಜಿಲ್ಲೆಯಲ್ಲಿ ಈಗಾಗಾಲೇ ಐವರಿಗೆ ಮಾತ್ರ ಕೊರೋನಾ ಸೋಂಕಿನ ಲಕ್ಷಣಗಳಿದ್ದು ಅವರನ್ನು ಟಿಎಂಎ ಪೈ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಉಳಿದೆಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಾಲೇ ಜಿಲ್ಲೆಯಲ್ಲಿ 82 ಮಂದಿ ಗುಣಮುಖರಾಗಿ ಡಿಶ್ಚಾರ್ಜ್ ಆಗಿದ್ದಾರೆಂದು ಡಿಸಿ ಮಾಹಿತಿ ನೀಡಿದ್ದಾರೆ.
Comments are closed.