ಆರೋಗ್ಯ

ಮುಖದ ಮೇಲಿನ ಕಲೆ ನಿರ್ಮೂಲನೆಗೆ ಸಕ್ಕರೆಯ ಮಸಾಜ್‌.

Pinterest LinkedIn Tumblr

ಬಹಳಷ್ಟು ಅಂಶಗಳು ಮೊಣಕೈ ಕಪ್ಪು ಬಣ್ಣ ಹೊಂದಲು ಕಾರಣವಾಗುತ್ತವೆ. ಅತಿಯಾಗಿ ಸೂರ್ಯನ ಬಿಸಿಲಿಗೆ ತೆರೆದುಕೊಳ್ಳುವುದು, ಅನುವಂಶಿಕ ಸಂಗತಿಗಳು, ಪದೇ ಪದೇ ಉಜ್ಜಿಕೊಳ್ಳುವುದು, ಹಾರ್ಮೋನ್ ಏರುಪೇರು, ಸತ್ತ ಚರ್ಮವು ಗಂಟಿಕ್ಕುವುದು, ಸ್ಥೂಲಕಾಯತೆ ಮತ್ತು ಅಧಿಕ ಮೆಲಾನಿನ್ ವರ್ಣದ್ರವ್ಯ – ಹೀಗೆ ಅನೇಕ ಕಾರಣಗಳು ಇರಬಹುದು. ಯಾವ ಮನೆಮದ್ದು ಈ ಮೊಣಕೈ ಕಪ್ಪನ್ನು ಹೋಗಲಾಡಿಸಲಿಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳುವ ಬಯಕೆಯೇ ನಿಮಗೆ? ಅದನ್ನ ತಿಳಿಸಲೆಂದೇ ಈ ಲೇಖನವನ್ನ ನಾವು ಬರೆದಿದ್ದೇವೆ ಓದಿ.

1. ಕೊಬ್ಬರಿ ಎಣ್ಣೆ
ಕೊಬ್ಬರಿ ಎಣ್ಣೆಯಲ್ಲಿ ವಿಟಮಿನ್ E ಇದ್ದು, ಇದು ಶುಷ್ಕತೆಯನ್ನ ನಿವಾರಿಸಿ, ತ್ವಚೆಯು ಸದಾಕಾಲ ತೇವಾಂಶದಿಂದ ಮತ್ತು ಜಲೀಕರಣ ಹೊಂದಿರುವಂತೆ ಕಾಪಾಡಿ ಬೆಳ್ಳಗಿರುವಂತೆಯೂ ಮಾಡುತ್ತದೆ.
ಪ್ರತಿದಿನ ನೀವು ಸ್ನಾನ ಮಾಡಿದ ನಂತರ ಕೊಬ್ಬರಿ ಎಣ್ಣೆ ಬಳಸಿ ನಿಮ್ಮ ಮೊಣಕೈಗೆ 1-2 ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ
ಪರ್ಯಾಯವಾಗಿ, ನೀವು ಒಂದು ಚಮಚ ಕೊಬ್ಬರಿ ಎಣ್ಣೆ ಜೊತೆಗೆ ಅರ್ಧ ಚಮಚ ನಿಂಬೆರಸ ಬೆರೆಸಿ, ಆ ಮಿಶ್ರಣವನ್ನ ನಿಮ್ಮ ಮೊಣಕೈಗೆ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಬಿಡಿ. ನಂತರ ಟಿಶ್ಯೂ ಪೇಪರ್ ಇಂದ ಅದನ್ನ ಒರೆಸಿಕೊಳ್ಳಿ.
ಇದನ್ನ ದಿನಕ್ಕೆ ಒಂದು ಬಾರಿ ಆದರೂ ಮಾಡಿ.

2. ನಿಂಬೆಹಣ್ಣು
ನಿಂಬೆಹಣ್ಣಿಗೆ ನೈಸರ್ಗಿಕವಾಗಿ ಬ್ಲೀಚಿಂಗ್ ಮತ್ತು ಸತ್ತ ಕೋಶಗಳನ್ನ ಹೊರಹಾಕುವ ಶಕ್ತಿ ಇರುತ್ತದೆ. ಇದಕ್ಕೆ ಮುಖ್ಯ ಕಾರಣ ವಿಟಮಿನ್ C. ಇದು ಸತ್ತ ಕೋಶಗಳನ್ನ ಹೊರಹಾಕಿ ತ್ವಚೆಯನ್ನ ಬೆಳ್ಳಗಾಗಿಸುತ್ತದೆ.
ಸರಳವಾಗಿ ಎಂದರೆ ನೀವು ನಿಂಬೆ ಹಣ್ಣಿನ ರಸವನ್ನ ಹಚ್ಚಿಕೊಂಡು 15-20 ನಿಮಿಷಗಳ ಕಾಲ ಮೊಣಕೈ ಅನ್ನು ಮಸಾಜ್ ಮಾಡಿಕೊಳ್ಳಿ. ಮಸಾಜ್ ನಂತರ ಆ ನಿಂಬೆರಸವು ಮೊಣಕೈ ಮೇಲೆ ಕನಿಷ್ಠ 20 ನಿಮಿಷಗಳ ಕಾಲ ಹಾಗೆ ಇರಲು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡು ಮೊಯಿಶ್ಚರೈಸಿಂಗ್ ಕ್ರೀಮ್ ಅನ್ನು ಹಚ್ಚಿಕೊಳ್ಳಿ.
ಪರ್ಯಾಯವಾಗಿ, ನೀವು ಒಂದು ನಿಂಬೆಹಣ್ಣಿನ ರಸವನ್ನ ಹಿಂಡಿಕೊಳ್ಳಿ. ಅದಕ್ಕೆ ಒಂದು ಚಮಚ ಜೇನುತುಪ್ಪವನ್ನ ಬೆರೆಸಿ. ಇದನ್ನ ಕಪ್ಪು ಕಲೆಗಳಿರುವ ಜಾಗಗಳ ಮೇಲೆ ಹಚ್ಚಿಕೊಂಡು 20 ನಿಮಿಷಗಳು ಬಿಡಿ. ನಂತರ ನೀರಿನಿಂದ ತೊಳೆಯಿರಿ.
ನೀವು ಈ ವಿಧಾನಗಳನ್ನ ಪ್ರತಿದಿನ ಮಾಡಿ ಅಥವಾ ಕೆಲವು ದಿನಗಳಿಗೊಮ್ಮೆ ಮಾಡಿ. ನಿಂಬೆರಸವನ್ನು ಕೈಗೆ ಹಚ್ಚಿಕೊಂಡ ನಂತರ, 3 ಗಂಟೆಗಳ ಕಾಲವಾದರು ಸೂರ್ಯನ ಬಿಸಿಲಿಗೆ ತೆರೆದುಕೊಳ್ಳದೆ ಇರಬೇಕು.

3. ಸಕ್ಕರೆ
ಸಕ್ಕರೆಯನ್ನ ಬಳಸುವುದು ಕಪ್ಪು ಮೊಣಕೈ ನಿರ್ಮೂಲನೆಗೆ ಒಂದು ಪರಿಣಾಮಕಾರಿ ವಿಧಾನ. ಏಕೆಂದರೆ ಸಕ್ಕರೆ ತ್ವಚೆಯನ್ನ ಮೃದುವಾಗಿಸಲು ಮತ್ತು ಸತ್ತ ಕೋಶಗಳನ್ನ ಹೊರಹಾಕಲು ಸಹಾಯ ಮಾಡುತ್ತದೆ.
ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಸಮನಾದ ಪ್ರಮಾಣದಲ್ಲಿ ಬೆರೆಸಿ, ಗಟ್ಟಿಯಾದ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಅದನ್ನ ನಿಮ್ಮ ಮೊಣಕೈಗೆ ಹಚ್ಚಿಕೊಂಡು ವೃತ್ತಾಕಾರದಲ್ಲಿ 5 ನಿಮಿಷಗಳು ಚೆನ್ನಾಗಿ ಉಜ್ಜಿಕೊಳ್ಳಿ. ನಂತರ ಅದನ್ನ ಬೆಚ್ಚಗಿನ ನೀರು ಮತ್ತು ಮೃದು ಸೋಪ್ ಬಳಸಿ ತೊಳೆದುಕೊಳ್ಳಿ .ಇದನ್ನು ಕೂಡ ನೀವು ಕಪ್ಪು ಬಣ್ಣ ಹೋಗುವವರೆಗೂ ಪ್ರತಿದಿನ ಬಳಸಿ.

4.ಲೋಳೆಸರ (ಆಲೋ ವೆರಾ)
ಲೋಳೆಸರದ ಒಳಗಿನ ಜೆಲ್ ಅನ್ನು ಚೆನ್ನಾಗಿ ಹಿಂಡಿಕೊಳ್ಳಿ.ಇದನ್ನ ಕಪ್ಪಾದ ತ್ವಚೆಯ ಮೇಲೆ ಹಚ್ಚಿ.ಹಚ್ಚಿಕೊಂಡ ನಂತರ 20 ನಿಮಿಷಗಳ ಕಾಲ ಹಾಗೆಯೇ ಬಿಡಿ ಹಾಗು ಅದರ ನಂತರ ಬಿಸಿ ನೀರಿನಿಂದ ತೊಳೆದುಕೊಳ್ಳಿ.ಇದನ್ನ ನೀವು ದಿನಕ್ಕೆ ಎರಡು ಬಾರಿಯಂತೆ ಹಲವು ವಾರಗಳ ಕಾಲ ಮುಂದುವರೆಸಿ.

5. ಪುದಿನ
ಅರ್ಧ ಕಪ್ ಅಷ್ಟು ನೀರಿನಲ್ಲಿ ಬೊಗಸೆಯಷ್ಟು ಪುದಿನ ಎಲೆಗಳನ್ನ 2-3 ನಿಮಿಷಗಳ ಕುದಿಸಿ.ಇದಕ್ಕೆ ಅರ್ಧ ಚಮಚ ನಿಂಬೆರಸವನ್ನ ಬೆರೆಸಿ, ಚೆನ್ನಾಗಿ ಕಲಿಸಿ, ಸ್ವಲ್ಪ ಹೊತ್ತು ಹಾಗೆಯೇ ಬಿಡಿ.
ಹತ್ತಿಯ ಉಂಡೆಯನ್ನ ತೆಗೆದುಕೊಂಡು ಈ ಮಿಶ್ರಣದಲ್ಲಿ ಅದ್ದು, ಅದನ್ನ ನಿಮ್ಮ ಮೊಣಕೈಗೆ ಹಚ್ಚಿಕೊಳ್ಳಿ.ಹಚ್ಚಿಕೊಂಡ ನಂತರ 15-20 ನಿಮಿಷಗಳ ಕಾಲ ಹಾಗೆ ಬಿಟ್ಟು ನೀರಿನಲ್ಲಿ ತೊಳೆಯಿರಿ.
ನಿಮಗೆ ಒಳ್ಳೆಯ ಫಲಿತಾಂಶ ಸಿಗುವವರೆಗೂ ಇದನ್ನ ದಿನಕ್ಕೆ 1-2 ಬಾರಿ ಮಾಡಲು ಶಿಫಾರಸು ಮಾಡುತ್ತೇವೆ.

6. ಅರಿಶಿನ
ಒಂದು ಚಮಚದಷ್ಟು ಹಾಲಿನ ಕೆನೆಯನ್ನು ತೆಗೆದುಕೊಂಡು ಸ್ವಲ್ಪ ಅರಿಶಿನ ಪುಡಿಗೆ ಬೆರೆಸಿ. ಈ ಮಿಶ್ರಣವನ್ನ ನಿಮ್ಮ ಮೊಣಕೈಗೆ ಹಚ್ಚಿಕೊಂಡು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಿ. ನಂತರ ಸ್ವಲ್ಪ ಹೊತ್ತು ಅದು ಕೈ ಮೇಲೆಯೇ ಒಣಗಲು ಬಿಡಿ. ಆನಂತರ, ಅದನ್ನ ನೀರಿನಿಂದ ತೊಳೆಯಿರಿ. ಪರ್ಯಾಯವಾಗಿ ನೀವು ಕಡ್ಲೆಪುಡಿ ಮತ್ತು ಅರಿಶಿಣವನ್ನ ಸಮಾನ ಪ್ರಮಾಣದಲ್ಲಿ ಬೆರೆಸಿಕೊಳ್ಳಬಹುದು. ನಂತರ ಇದಕ್ಕೆ ಸ್ವಲ್ಪ ರೋಸ್ ವಾಟರ್ ಅನ್ನು ಸಿಂಪಡಿಸಿ ಗಟ್ಟಿಯಾದ ಪೇಸ್ಟ್ ಅನ್ನು ತಯಾರು ಮಾಡಿಕೊಳ್ಳಿ. ಈ ಮಿಶ್ರಣವನ್ನ ಹಚ್ಚಿಕೊಂಡು ನಿಮ್ಮ ಮೊಣಕೈ ಮಸಾಜ್ ಮಾಡಿಕೊಳ್ಳಿ. ಆನಂತರ, ಅದನ್ನ ಸ್ವಲ್ಪ ಹೊತ್ತು ಒಣಗಲು ಬಿಟ್ಟು, ನೀರಿನಿಂದ ತೊಳೆದುಕೊಳ್ಳಿ.

Comments are closed.