ಆರೋಗ್ಯ

ಹುಟ್ಟಿನಿಂದ ಸಾವಿನವರೆಗೂ ಈ ಸಂಖ್ಯೆ ಬಗ್ಗೆ ತಿಳಿಯುವುದು ಬೆಟ್ಟದಷ್ಟಿದೆ..ಯಾವುದು ಈ ಸಂಖ್ಯೆ ಬಲ್ಲಿರಾ.?

Pinterest LinkedIn Tumblr

ಹಿಂದೂ ಧರ್ಮದ ಪ್ರಕಾರ ಕಷ್ಟಗಳ ಸಾಗರದಲ್ಲಿ ಒದ್ದಾಡುತ್ತಿರುವ ವ್ಯಕ್ತಿ, ದೀಕ್ಷೆಯಿಂದ, ನಂಬಿಕೆಯಿಂದ, ಅಷ್ಠೋತ್ತರ ಶತನಾಮಾವಳಿ ಯನ್ನು ಪಠಿಸಿದರೆ ದೇವರು ಕೃಪೆ ತೋರುವನು ಎಂಬ ನಂಬಿಕೆ ಇದೆ. ಅಮೃತ ಉಗಮಕ್ಕೆ ಕಾರಣ ಈ ಸಂಖ್ಯೆ! ಅದುವೇ 108 ಸಂಖ್ಯೆ

108 ಈ ಸಂಖ್ಯೆಯನ್ನು ಹೇಳುತ್ತಿದ್ದಂತೆ ತಕ್ಷಣ ನೆನಪಿಗೆ ಬರೋದು ಸರ್ಕಾರಿ ಅಂಬುಲೆನ್ಸ್, ತುರ್ತು ಪರಿಸ್ಥಿತಿಯಲ್ಲಿ ಪ್ರಾಣವನ್ನು ಕಾಪಾಡಲು ಉಪಯೋಗಿಸುವ ಅಂಬುಲೆನ್ಸ್ ವಾಹನಕ್ಕೆ ಆ ನಂಬರ್ ಅನ್ನೇ ಏಕೆ ಇಟ್ಟಿದ್ದಾರೆ..? ಪ್ರಾಣವನ್ನು ಕಾಪಾಡುವ ಶಕ್ತಿ ಈ ಸಂಖ್ಯೆಗೆ ಇದೆಯಾ…? ದೇವಸ್ಥಾನದಲ್ಲಿ 108 ಪ್ರದಕ್ಷಿಣೆಗಳನ್ನು ಹಾಕಿದರೆ ಕೋರಿದ ಕೋರಿಕೆಗಳು ಈಡೇರುತ್ತವೆ ಎಂದು ನಂಬಿ ರುವುದಕ್ಕೆ ಇದರ ಹಿಂದಿರುವ ರಹಸ್ಯವೇನು…? ದೇವರ ನಾಮಸ್ಮರಣೆಗಾಗಿ ಹಿಡಿದ ಮಾಲೆಯಲ್ಲಿನ ಮಣಿಗಳ ಸಂಖ್ಯೆಯು 108 ಏಕೆ ಇರುತ್ತದೆ…? ಇಷ್ಟಕ್ಕೂ ಈ ಸಂಖ್ಯೆಯ ಹಿಂದೆ ಇರುವ ರಹಸ್ಯವೇನು….? ಹಿಂದೂ ಧರ್ಮವು ಹೇಳುತ್ತಿರುವ ರಹಸ್ಯವೇನು…?

ಕ್ಷೀರ ಸಾಗರ ಮಥನ ಮಾಡುವ ಸಂಧರ್ಭದಲ್ಲಿ 54 ಜನ ರಾಕ್ಷಸರು, 54 ದೇವತೆಗಳು ಎರಡೂ ಕಡೆ ಇದ್ದು ಸಾಗರವನ್ನು ಕಡಿದಾಗ ಅಮೃತ ಹೊರಗೆ ಬಂದಿದೆ. ಆದರೆ ಇದರಲ್ಲಿ ಮುಂಚಿತವಾಗಿ ವಿಷವೂ ಹೊರಗೆ ಬಂದಿರುವುದು ಸತ್ಯ. ಆದರೂ ವಿಶ್ರಾಂತಿ ಇಲ್ಲದೆ ಸಾಗರವನ್ನು ಕಡಿಯುವುದನ್ನು ಮುಂದುವರಿಸಿದರು. ಕೊನೆಗೆ ಜನಿಸಿದ್ದು ಅಮೃತ. ಈ 108 ಸಂಖ್ಯೆ ಮನುಷ್ಯನಲ್ಲಿನ ಒಳ್ಳೆಯ ಲಕ್ಷಣಗಳನ್ನು ಎರಡಾಗಿ ಬೇರೆ ಮಾಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಈ ಸಂಖ್ಯೆಯ ಬಲದಿಂದ ಒಳ್ಳೆಯದು ಮೆಲುಗೈ ಸಾಧಿಸಿ, ಮನುಷ್ಯ ಅಮೃತಮಯವಾದ ಮೋಕ್ಷವನ್ನು ಸಾಧಿಸುವನು ಎಂದು ಹೇಳುತ್ತಾರೆ.

108 ಸಂಖ್ಯೆಯಲ್ಲೆ ಈ ಪ್ರಪಂಚ :
ಕೇವಲ ಹಿಂದೂ ಧರ್ಮ, ಹಿಂದೂ ದೇಶದಲ್ಲಿ ಮಾತ್ರವೇ ಅಲ್ಲ ಈ ಸಂಖ್ಯೆಯನ್ನು ವಿದೇಶಗಳಲ್ಲೂ ಸಹಾ ಆಚರಿಸುತ್ತಾರೆ. ಶಾಸ್ತ್ರ ಸಂಕೇತ ಇನ್ನೂ ಜನಿಸದಿದ್ದಾಗಲೂ ನೂರಾರು ವರ್ಷಗಳ ಕೆಳಗೆ ಭಾರತ ಖಗೋಳ ಶಾಸ್ತ್ರದ ಮೇಲೆ ಹಿಡಿತ ಸಾಧಿಸಿದೆ. ಇದಕ್ಕೆ ಸಾಕ್ಷಿ ಈಗ ನಾವು ಅನುಚರಿಸುತ್ತಿರುವ ಸೈನ್ಸ್, (ವಿಜ್ಞಾನ) ಭಾರತೀಯ ಖಗೋಳ ಶಾಸ್ತ್ರಜ್ಞರು, 1500 ಸಾವಿರಗಳ ವರ್ಷಗಳ ಹಿಂದೆಯೇ ಸೂರ್ಯನ ಸಿದ್ದಾಂತದ ಮೂಲಕ ವಿಶ್ಚದ ಕಟ್ಟಕಡೆಯಲ್ಲಿರುವ ಶನಿಗ್ರಹದ ಸುತ್ತಳತೆಯನ್ನು ಕಂಡುಹಿಡಿದಿದ್ದಾರೆ. ಸೂರ್ಯನಿಗೆ- ಭೂಮಿಗೆ ನಡುವಿನ ಅಳತೆಯನ್ನು ಖಚಿತವಾಗಿ ಲೆಕ್ಕ ಹಾಕಿದ್ದಾರೆ.ಆ ಲೆಕ್ಕಗಳಲ್ಲಿನ ಸಂಖ್ಯೆ 108, ಸೂರ್ಯನ ಸುತ್ತಳತೆಯನ್ನು 108 ರಿಂದ ಗುಣಿಸಿದರೆ ಭೂಮಿಗೆ-ಚಂದ್ರನಿಗೆ ನಡುವೆ ಇರುವ ದೂರ ತಿಳಿಯುತ್ತದೆ. ಅಷ್ಟೆಅಲ್ಲ ಸೂರ್ಯನು ಸುಮಾರು ಭೂಮಿಗಿಂತಲೂ 108 ರಷ್ಟು ದೊಡ್ಡದಾಗಿರುತ್ತಾನೆಂಬುದನ್ನು 1,500 ವರ್ಷಗಳ ಹಿಂದೆಯೇ ನಮ್ಮ ಭಾರತೀಯರು ಹೇಳಿದ್ದಾರೆ. ಇದರಿಂದ 108 ಸಂಖ್ಯೆಯ ಮೇಲೆ ಶಾಸ್ತ್ರಜ್ಞರಿಗೂ ನಂಬಿಕೆ ಇತ್ತು ಎಂಬ ವಿಚಾರ ತಿಳಿಯಬಹುದು.

ಹುಟ್ಟಿದಾಗಿನಿಂದ ಸಾವಿನವರೆಗೂ 108 ಸಂಖ್ಯೆ:
ಹಿಂದೂ ಸಾಂಪ್ರದಾಯದ ಪ್ರಕಾರ ವ್ಯಕ್ತಿಯ ಹುಟ್ಟನ್ನು 108 ಸಂಖ್ಯೆಯೇ ತಿಳಿಸುತ್ತದೆ. 27 ನಕ್ಷತ್ರಗಳನ್ನು 4 ರಿಂದ ಗುಣಿಸಿದರೆ 108 ಬರುತ್ತದೆ. ಇದರಿಂದ ಹುಟ್ಟಿದ ಪ್ರತೀ ವ್ಯಕ್ತಿಯೂ ಪ್ರಾಣಿಯು 108 ವರ್ಗಗಳಲ್ಲಿ ಯಾವುದೋ ಒಂದು ವರ್ಗಕ್ಕೆ ಪ್ರತಿಬಿಂಬವೆಂದು ಶಾಸ್ತ್ರಗಳು ಹೇಳುತ್ತವೆ. ಸಾವನ್ನೂ ಸಹ ಈ ಸಂಖ್ಯೆಯನ್ನು ಆಧಾರಿಸಿರುತ್ತದೆ. ಆದರೂ ನಮ್ಮಶಾಸ್ತ್ರದಲ್ಲಿ ಇನ್ನೂ ಈ ವಿಷಯವನ್ನು ಯಾರೂ ಬಯಲಿಗೆ ತರುವ ಸಾಹಸ ಮಾಡಲಿಲ್ಲ. ಈ ಸಂಖ್ಯೆಗೆ ಮನುಷ್ಯನ ಜೀವನದಲ್ಲಿ ಎಲ್ಲೋ ಒಂದು ಸಂಬಂಧವಿದೆ ಎಂದು ಅರ್ಥವಾಗುತ್ತದೆ. ಈ ಸಂಖ್ಯೆಯನ್ನು ನಂಬಿದವರಿಗೆ, ನಂಬಿಕೆ ಇಲ್ಲದವರಿಗೂ ಸಹ ಸಹಾಯ ಮಾಡುವ ಪ್ರಾಣದಾತವೂ 108 ಸಂಖ್ಯೆಯಾಗಿದೆ. ಕೊನೆಗೆ ಹೇಳುವುದೇನೆಂದೆರೆ 108 ರ ಬಗ್ಗೆ ತಿಳಿದಿರುವುದು ಉಗುರಿನಷ್ಟು ತಿಳಿಯಬೇಕಾದದ್ದು ಇನ್ನೂ ಬೆಟ್ಟದಷ್ಟಿದೆ.

Comments are closed.