ಆರೋಗ್ಯ

ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ತೂಕ ಹೆಚ್ಚಿಸಲು ಕೆಲವು ಸಲಹೆ

Pinterest LinkedIn Tumblr

ಗರ್ಭಾವಸ್ಥೆಯಲ್ಲಿ ನೀವು ತಪಾಸಣೆಗೆ ಎಂದು ವೈದ್ಯರ ಬಳಿ ಹೋಗುವುದು ಸಹಜ, ತಪಾಸಣೆಯ ವೇಳೆ ಅವರು ಮಗುವಿನ ಬೆಳವಣಿಗೆಯನ್ನು ತಿಳಿಯಲು ಸ್ಕ್ಯಾನ್ ಮಾಡಿಸಲು ಸೂಚಿಸುವರು, ಸ್ಕ್ಯಾನ್ ರಿಪೋರ್ಟ್ ನಲ್ಲಿ ನಿಮ್ಮ ಮಗುವಿನ ತೂಕ ಕಡಿಮೆ ಎಂದು ನಿಮಗೆ ತಿಳಿಯುವುದು, ಇದನ್ನು ನೀವು ತಿಳಿದ ಕೂಡಲೇ ಗಾಬರಿ ಮತ್ತು ಒತ್ತಡವನ್ನು ಪಡೆಯುವರಿ, ಅದರ ಬಗ್ಗೆ ಚಿಂತಿಸಬೇಡಿ, ನಿಮ್ಮ ಮಗು ತೂಕ ಕಡಿಮೆ ಇದ್ದರು ಆರೋಗ್ಯವಾಗಿರುವುದು ಮುಖ್ಯ. ನಿಮ್ಮ ಮಗುವಿನ ತೂಕವನ್ನು ಹೆಚ್ಚಿಸಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದರ ಉಪಯೋಗಗಳನ್ನು ಪಡೆದುಕೊಳ್ಳಿ.

ಕೆಳಗಿನ ಸಲಹೆಗಳು ನಿಮ್ಮ ಮಗುವು ಮತ್ತು ನೀವು ಆರೋಗ್ಯಕರ ತೂಕವನ್ನು ಪಡೆಯಲು ಸಹಾಯ ಮಾಡುತ್ತದೆ.

೧.ಸಮತೋಲನ ಮತ್ತು ಹೆಚ್ಚು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ. ನೀವು ಸೇವಿಸುವ ಆಹಾರ ನೈಸರ್ಗಿಕವಾಗಿರಲಿ, ಅದು ಹೆಚ್ಚು ಹಣ್ಣುಗಳು, ತರಕಾರಿ ಮತ್ತು ಹಸಿರು ಪದಾರ್ಥಗಳಾಗಿರುವುದು ಉತ್ತಮ. ಜೊತೆಗೆ ಧಾನ್ಯಗಳನ್ನು, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್ ಇರುವ ಆಹಾರಗಳನ್ನು ಸೇವಿಸಿ.
೨.ನಿಮಗೆ ಅವಶ್ಯವಿರುವ ವಿಟಮಿನ್ ಗಳನ್ನು ನಿಯಮಿತವಾಗಿ ಸೇವಿಸಿ.
೩.ನಿಮ್ಮ ಆಹಾರ ಕ್ರಮದಲ್ಲಿ ಒಣಹಣ್ಣುಗಳು ಮತ್ತು ಧಾನ್ಯಗಳನ್ನು ಸೇರಿಸಿ. ಇವು ಆರೋಗ್ಯಕರ ಕೊಬ್ಬನ್ನು ಒಳಗೊಂಡಿವೆ, ಈ ಸಮಯದಲ್ಲಿ ನಿಮಗೆ ಇವು ಅವಶ್ಯಕವಾಗಿವೆ.
೪.ನಿಮಗೆ ಅವಶ್ಯವಿರುವ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ದಿನದಲ್ಲಿ ಕನಿಷ್ಠ ೮ ಗಂಟೆಗಳ ಕಾಲ ನಿದ್ರೆಯನ್ನು ಮಾಡಿ.
೫.ಎಲ್ಲಾ ಸಮಯದಲ್ಲು ಶಾಂತವಾಗಿ ಮತ್ತು ಧನಾತ್ಮಕವಾಗಿ ಚಿಂತಿಸಿ. ಒತ್ತಡಕ್ಕೆ ಅಥವಾ ಉದ್ವೇಗಕ್ಕೆ ಒಳಗಾಗಬೇಡಿ.
೬.ಹೆಚ್ಚು ಮಸಾಲೆ ಪದಾರ್ಥಗಳನ್ನು ಮತ್ತು ಹೆಚ್ಚು ಬಿಸಿ ಇರುವ ಆಹಾರವನ್ನು ಸೇವಿಸಬೇಡಿ.
೭.ಹೆಚ್ಚು ನೀರನ್ನು ಸೇವಿಸಿ. ಕಡಿಮೆ ನೀರು ಕುಡಿಯುದರಿಂದ ತಲೆ ನೋವು, ವಾಕರಿಕೆ, ಎದೆಯುರಿ ಕಾಣಿಸಿಕೊಳ್ಳಬಹುದು. ನಿಮ್ಮ ದೇಹದಲ್ಲಿ ನೀರಿನಾಂಶ ಕಡಿಮೆಯಾಗಲು ಬಿಡಬೇಡಿ.
೮.ಗರ್ಭಾವಸ್ಥೆಯಲ್ಲಿ ತಾಯಿ ಸರಿಯಾದ ತೂಕ ಪಡೆಯುತ್ತಿಲ್ಲ ಎಂದರೆ ಗರ್ಭದಲ್ಲಿ ಮಗುವು ಸರಿಯಾದ ತೂಕವನ್ನು ಪಡೆಯುತ್ತಿಲ್ಲ ಎಂದು ತಿಳಿಯಬಹುದು.

Comments are closed.