ಆರೋಗ್ಯ

ಮಕ್ಕಳು ಸದಾ ಚುರುಕು ಹಾಗೂ ಚಟುವಟಿಕೆಯಿಂದ ಇರಲು ನೀಡಿ ಈ ಎಲೆಯ ರಸ

Pinterest LinkedIn Tumblr

ಸಾಮಾನ್ಯವಾಗಿ ಎಲ್ಲಾ ಪೋಷಕರಲ್ಲೂ ಸಿಗುವ ಒಂದು ಕನಸು ಅಥವಾ ಆಸೆ, ಅದು ನಮ್ಮ ಮಗು ಬುದ್ದಿಶಾಲಿಯಾಗಬೇಕು, ಚುರುಕಾಗಿರಬೇಕು, ಎಲ್ಲದರಲ್ಲೂ ಮುಂದೆ ಬರಬೇಕು ಮತ್ತು ಏನಾದರು ಸಾಧಿಸಬೇಕು ಎಂಬುದು. ಇದಕ್ಕೆಲ್ಲಾ ಮಗುವಿನ ಜ್ಞಾಪಕ ಶಕ್ತಿ, ಚಟುವಟಿಕೆ ಮತ್ತು ಅವನ/ಳ ಚುರುಕುತನ ತುಂಬಾ ಮುಖ್ಯ. ಬೇರೆ ಮಕ್ಕಳು ತುಂಬಾ ಚುರುಕಾಗಿವೆ ನಮ್ಮ ಮಗು ಮಾತ್ರ ಚುರುಕಾಗಿರದೆ, ಸೋಮಾರಿ ಆಗುತ್ತಿದ್ದಾನೆ, ಎನ್ನುವರು ಇದನ್ನು ಉಪಯೋಗಿಸುವುದರಿಂದ ನಿಮ್ಮ ಮಕ್ಕಳನ್ನು ಚುರುಕಾಗುವಂತೆ ಮತ್ತು ಯಾವಾಗಲು ಚಟುವಟಿಕೆಯಿಂದ ಕೂಡಿರುವಂತೆ ಮಾಡಬಹುದು.

ಒಂದೆಲಗ
ಹೆಸರೇ ಹೇಳುವಂತೆ ಇದು ಒಂದು ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವ ಜಾಗದಲ್ಲಿ ಬೆಳೆಯುತ್ತದೆ. ಉದಾಹರಣೆಗೆ, ಕರಾವಳಿ ಪ್ರದೇಶಗಳಲ್ಲಿ, ಭತ್ತದ ಗದ್ದೆಗಳಲ್ಲಿ, ಹೆಚ್ಚು ತೇವಾಂಶವಿರುವ ಸ್ಥಳಗಳಲ್ಲಿ ಇದು ಬೆಳೆಯುತ್ತದೆ.

ಈ ಸಸ್ಯ ಪ್ರಾಚೀನ ಕಾಲದಿಂದಲೂ ತನ್ನ ಔಷಧೀಯ ಗುಣಗಳಿಗೆ ಹೆಸರುವಾಸಿ. ಈ ಸಸ್ಯದ ಎಲ್ಲಾ ಭಾಗದಲ್ಲೂ ಔಷಧೀಯ ಗುಣ ಇದೆ ಎಂದು ವೈಜ್ಞಾನಿಕವಾಗಿಯೂ ಸಾಭೀತಾಗಿದೆ.

ಉಪಯೋಗಗಳು
೧.ಬೆಕೊಸೈಡ್ ಎ ಮತ್ತು ಬಿ ಈ ರಾಸಾಯನಿಕಗಳು ಮೆದುಳಿನ ನೆನಪಿನ ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಆಧಾರವಾಗಿವೆ ಎಂದು ವೈಜ್ಞಾನಿಕವಾಗಿ ರುಜುವಾತಾಗಿದೆ.
೨.ನರರೋಗಗಳಿಗೆ ಇದು ದಿವ್ಯೌಷಧಿಯೆಂದು ಆಯುರ್ವೇದದಲ್ಲಿ ಹೇಳಿದ್ದಾರೆ.
೩.ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಸ್ವಲ್ಪ ಜೇನುತುಪ್ಪದೊಂದಿಗೆ ಸೇರಿಸಿ ಕುಡಿಸುವುದು ಬೇಗನೆ ಅದರಿಂದ ಮುಕ್ತಿ ನೀಡುತ್ತದೆ.
೪.ಇದು ದೇಹಕ್ಕೆ ತಂಪು ಮತ್ತು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ, ಜೊತೆಗೆ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ.
೫.ದಿನಕ್ಕೆ ಎರಡು ಎಲೆ ಸೇವಿಸುವುದರಿಂದ ಅಸ್ಪಷ್ಟವಾಗಿ ಮಾತನಾಡುವ ಮಕ್ಕಳು ಕೂಡ ಮೂರ್ನಾಲ್ಕು ದಿನಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳುವರು ಮತ್ತು ಸರಾಗವಾಗಿ ಮಾತನಾಡುವರು.
೬.ಇದು ಮಲಬದ್ಧತೆಯ ತೊಂದರೆಯನ್ನು ನಿವಾರಿಸುತ್ತದೆ.
೭.ಇದು ದೇಹದಲ್ಲಿ ರೋಗಪ್ರತಿರೋಧಕಗಳನ್ನು ಹೆಚ್ಚಿಸುವ ಜೊತೆಗೆ ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸುತ್ತದೆ.
೮.ಇದು ತ್ವಚೆಯ ಸಮಸ್ಯೆಗೆ ಕೂಡ ಸಹಾಯಮಾಡುತ್ತದೆ.

ಇದನ್ನು ಯಾವ ವಯಸ್ಸಿನವರು ಬೇಕಾದರೂ ಸೇವಿಸಬಹುದು. ಇದನ್ನು ಸುಮಾರು ೨೦೦೦ವರ್ಷಗಳ ಹಿಂದೆಯಿಂದಲೂ ಔಷಧೀಯ ಸಸ್ಯವಾಗಿ ಬಳಸುತ್ತಿದ್ದರು ಎಂಬ ಉಲ್ಲೇಖವಿದೆ. ಸಾಮಾನ್ಯವಾಗಿ ೬೦ವರ್ಷ ಕಳೆಯುತ್ತಿದ್ದಂತೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ, ಈ ಎಲೆಗಳನ್ನು ಸೇವಿಸುವುದರಿಂದ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ಹಿಂದಿನ ಋಷಿಮುನಿಗಳು ಬ್ರಾಹ್ಮಿಯ ಚಿಕಿತ್ಸಾ ಉಪಯುಕ್ತತೆಯನ್ನು ಹಲವು ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದಾರೆ.

ಅವರ ಪ್ರಕಾರ ಬ್ರಾಹ್ಮಿ ಮೇಧ್ಯ (ಬುದ್ಧಿಮತ್ತೆ ಹೆಚ್ಚಿಸುವ ಗುಣ), ಸ್ಮೃತಿಪ್ರದ (ನೆನಪಿನ ಶಕ್ತಿವರ್ಧಕ), ಆಯುಷ್ಯ (ಆಯುಸ್ಸು ವರ್ಧಿಸುವ), ರಸಾಯನ (ಪುನರುಜ್ಜೀವನ ಸಾಮರ್ಥ್ಯವಿರುವ), ಪ್ರಜ್ಞಾ ವರ್ಧನ (ಬೌದ್ಧಿಕ ಸಾಮರ್ಥ್ಯ), ಬಲ್ಯ (ಬಲಪ್ರದ, ವಿಶೇಷವಾಗಿ ಮೆದುಳಿನ ಶಕ್ತಿಯನ್ನು ವರ್ಧಿಸುವ), ಜೀವನಿಯ(ಜೀವಸಾಮರ್ಥ್ಯ ತುಂಬುವ), ಸ್ವರ ವರ್ಣಪ್ರದ (ಸ್ವರ ಮತ್ತು ದೇಹಕಾಂತಿ ವೃದ್ಧಿಸುವ) ಗುಣಗಳನ್ನು ಹೊಂದಿರುವ ದಿವ್ಯೌಷಧ ಒಂದೆಲಗ ಸಸ್ಯ.

ಇದು ಸೇವಿಸಲು ಸ್ವಲ್ಪ ಕಹಿಯಾಗಿರುವುದರಿಂದ ಇದರ ರಸವನ್ನು ಹಣ್ಣಿನೊಂದಿಗೆ ಅಥವಾ ಗೊಜ್ಜಿನಿಂದಿಗೆ ಸೇರಿಸಿ ನೀಡಿ.

Comments are closed.