ಯಾವುದೇ ಅಡುಗೆಗೆ ರುಚಿ ನೀಡುವ ಉಪ್ಪಿನಂತೆಯೇ ಇಂಗು ಸಹಾ ಇನ್ನೊಂದು ರುಚಿಕಾರಕವಾಗಿದೆ. ವಿಶೇಷವಾಗಿ ಸಾಂಬಾರ್, ರಸಂ ಹಾಗೂ ಒಗ್ಗರಣೆ ನೀಡುವ ಇತರ ಅಡುಗೆಗಳಲ್ಲಿ ಚಿಟಿಕೆಯಷ್ಟು ಇಂಗು ಹಾಕಿದರೆ ರುಚಿ ಹೆಚ್ಚುತ್ತದೆ. ಇಂಗಿಲ್ಲದ ಉಪ್ಪಿನಕಾಯಿ ವಿರಳ. ಇಂಗನ್ನು ಹಾಗೇ ತಿನ್ನುವಂತಿಲ್ಲ ಆಷ್ಟೊಂದು ಕಹಿಯಾಗಿರುತ್ತದೆ.
ಇದೇ ಕಾರಣಕ್ಕೆ ‘ಇಂಗು ತಿಂದ ಮಂಗ’ ಎಂಬ ವಿಶೇಷಣವನ್ನು ಕನ್ನಡದಲ್ಲಿ ಧಾರಾಳವಾಗಿ ಬಳಸಲಾಗುತ್ತದೆ. ಒಂದು ಬಗೆಯ ಮರದ ತೊಗಟೆಯಿಂದ ಒಸರುವ ಗೋಂದನ್ನು ಒಣಗಿಸಿ ಪುಡಿಯಾಗಿಸಿದ ಇಂಗಿನ ಬಳಕೆ ಸಾವಿರಾರು ವರ್ಷಗಳ ಹಿಂದಿನಿಂದಲೇ ಆಯುರ್ವೇದದಲ್ಲಿದೆ. ಬನ್ನಿ, ಇದರ ಆರೋಗ್ಯಕರ ಪ್ರಯೋಜನಗಳು ಹಾಗೂ ನೈಸರ್ಗಿಕ ಗುಣಗಳ ಬಗ್ಗೆ ಅರಿಯೋಣ
ಜೀರ್ಣಶಕ್ತಿ ಹೆಚ್ಚಿಸಲು
ಯಾವುದೇ ಆಹಾರ ಚೆನ್ನಾಗಿ ಜೀರ್ಣಿಸಲೆಂದು ಒಗ್ಗರಣೆಯಲ್ಲಿ ಚಿಟಿಕೆಯಷ್ಟು ಇಂಗನ್ನು ಸೇರಿಸಲಾಗುತ್ತದೆ. ವಾಯು ಪ್ರಕೋಪವುಂಟು ಮಾಡುವ ಆಹಾರಗಳ ಪ್ರಭಾವದಿಂದ ಹೊಟ್ಟೆಯಲ್ಲಿ ಗಾಳಿ ತುಂಬಿಕೊಳ್ಳದಿರಲೂ ಇದು ನೆರವಾಗುತ್ತದೆ. ಹೊಟ್ಟೆಯುಬ್ಬರಿಕೆ ಎದುರಾದರೆ ತಕ್ಷಣ ಇಂಗು ಬೆರೆಸಿದ್ ಉಗುರುಬೆಚ್ಚನೆಯ ನೀರನ್ನು ಕುಡಿದರೆ ತಕ್ಷಣ ಪರಿಹಾರ ದೊರಕುತ್ತದೆ. ಕೆಲವಾರು ಸಂಶೋಧನೆಗಳಲಿ ಕಂಡುಕೊಂಡಿರುವ ಪ್ರಕಾರ ಇಂಗಿನ ಪುಡಿಯಲ್ಲಿ ಉರಿಯೂತ ಗುಣವಿರುವ ಜೊತೆಗೇ ಉತ್ತಮ ಆಂಟಿ ಆಕ್ಸಿಡೆಂಟು ಗುಣಗಳೂ ಇವೆ. ಅಷ್ಟೇ ಅಲ್ಲ, ಇದರಲ್ಲಿ ವಂಶವಾಹಿ ಧಾತುವನ್ನು ರೂಪಾಂತರಗೊಳಿಸುವ ಗುಣವೂ ಇದೆ.
ಕ್ಯಾನ್ಸರ್ ತಡೆಗಟ್ಟುತ್ತದೆ
ಇಂಗಿನಲ್ಲಿ ರುಚಿ ನೀಡುವ ಗುಣದ ಹೊರತಾಗಿ ಕ್ಯಾನ್ಸರ್ ತಡೆಗಟ್ಟುವ ಗುಣವೂ ಇದೆ. ಅಂದರೆ ಒಂದು ವೇಳೆ ದೇಹದ ಯಾವುದಾದರೊಂದು ಅಂಗಾಂಶದ ಜೀವಕೋಶಗಳು ಅಗತ್ಯಕ್ಕೂ ಹೆಚ್ಚು ಬೆಳವಣಿಗೆಯಾದರೆ ಇದು ವಂಶವಾಹಿನಿಯ ಸೂಚನೆಗೆ ವಿರುದ್ದವಾಗಿದ್ದು ಇಂಗಿನಲ್ಲಿರುವ ವಿಶೇಷ ಗುಣ ಈ ಜೀವಕೋಶಗಳನ್ನು ಇನ್ನಷ್ಟು ವೃದ್ದಿಗೊಳ್ಳದಂತೆ ತಡೆಯುತ್ತದೆ.
ಲೈಂಗಿಕ ರೋಗಗಳನ್ನು ತಡೆಗಟ್ಟುತ್ತದೆ
ಈಜಿಪ್ಟ್ ನಲ್ಲಿ ನಡೆಸಿದ ಒಂದು ಸಂಶೋಧನೆಯ ಪ್ರಕಾರ ರುಚಿಕಾರಕವಾಗಿ ಬಳಸಲಾಗುವ ಇಂಗಿನಲ್ಲಿ ಪರಾವಲಂಬಿ ಕ್ರಿಮಿ ವಿರೋಧ ಗುಣ ಕೆಲವಾರು ಲೈಂಗಿಕ ರೋಗಗಳನ್ನು ಹರಡುವುದನ್ನು ತಡೆಯುತ್ತದೆ ಹಾಗೂ ಗುಣಪಡಿಸಲು ನೆರವಾಗುತ್ತದೆ.
ಉಸಿರಾಟದ ತೊಂದರೆ
ಉಸಿರಾಟದ ತೊಂದರೆ ಮೂಡಿಸುವ ಬ್ರಾಂಕೈಟಿಸ್, ಅಸ್ತಮಾ ಹಾಗೂ ನಾಯಿಕೆಮ್ಮು ಮೊದಲಾದ ರೋಗಗಳಿಗೆ ಬಿಸಿನೀರಿಗೆ ಕೊಂಚ ಇಂಗು, ಜೇನು ಮತ್ತು ಹಸಿಶುಂಠಿ ಬೆರೆಸಿ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ವಿಶೇಷವಾಗಿ ಮಕ್ಕಳಿಗೆ ಗಂಟಲು ಕಟ್ಟಿಕೊಂಡಿರುವ ಸ್ಥಿತಿಯನ್ನು ನಿವಾರಿಸಲು ಬಳಸಬಹುದು..
Comments are closed.