ಸ್ತನ ಕ್ಯಾನ್ಸರ್ ಎಂದರೆ ಸ್ತನದ ಕೋಶಗಳಿಂದ ಹುಟ್ಟಿಕೊಳ್ಳುವ ಮಾರಣಾಂತಿಕ ಗಡ್ಡೆ. ಸ್ತನ ಕ್ಯಾನ್ಸರ್ ಬಹುತೇಕ ಕಾಣಿಸಿಕೊಳ್ಳುವುದು ಹೆಂಗಸರಲ್ಲೇ, ಆದರೆ ಗಂಡಸರೂ ಇದಕ್ಕೆ ತುತ್ತಾಗಬಹುದು. ಗಂಡಸರಿಗೆ ಸ್ತನಗಳು ಇಲ್ಲದಿದ್ದರೂ ಅವರಿಗೆ ಸಣ್ಣ ಪ್ರಮಾಣದ ಸ್ತನ ಅಂಗಾಂಶಗಳು ಇರುತ್ತವೆ. ಈ ಸ್ತನ ಅಂಗಾಂಶಗಳು ಇರುವ ಕಾರಣವೇ ಗಂಡಸರು ಕೂಡ ಸ್ತನ ಕ್ಯಾನ್ಸರಿಗೆ ತುತ್ತಾಗುವ ಸಾಧ್ಯತೆ ಇರುವುದು. ದುರದೃಷ್ಟವಶಾತ್, ಬಹಳಷ್ಟು ಗಂಡಸರಿಗೆ ಈ ವಿಷಯವೇ ತಿಳಿದಿರುವುದಿಲ್ಲ. ಅಲ್ಲದೆ ಈ ಕ್ಯಾನ್ಸರ್ ತಪಾಸಣೆ ಗಂಡಸರಲ್ಲಿ ಬಹಳ ತಡವಾಗಿ ನಡೆಸಲಾಗುತ್ತದೆ. ಈಗ ನಾವು ಸ್ತನ ಕ್ಯಾನ್ಸರ್ ಉಂಟಾಗಲು ಕಾರಣಗಳು, ಇದರ ಲಕ್ಷಣಗಳು ಮತ್ತು ನಿವಾರಣೆ ಹೇಗೆ ಎಂಬುದನ್ನು ನೋಡೋಣ.
ಸ್ತನ ಕ್ಯಾನ್ಸರ್ ಉಂಟಾಗಲು ಕಾರಣಗಳು ಏನು?
ಈ ಕೆಳಗಿನ ಸಂಗತಿಗಳು ಸ್ತನ ಕ್ಯಾನ್ಸರ್ ಉಂಟು ಮಾಡಬಹುದು :
೧. ವಯಸ್ಸು
ಗಂಡಸರಲ್ಲಿ ಸ್ತನ ಕ್ಯಾನ್ಸರ್ ಉಂಟಾಗಲು ಕಾರಣವಾಗುವ ಒಂದು ಮುಖ್ಯ ಅಂಶ ಎಂದರೆ ಅದು ವಯಸ್ಸು. ವಯಸ್ಸಾದಂತೆಲ್ಲಾ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಮುಖ್ಯವಾಗಿ, 60 ರಿಂದ 70 ವರ್ಷಗಳ ವಯಸ್ಸಿನ ಗಂಡಸರಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚುತ್ತವೆ.
೨. ಕೌಟುಂಬಿಕ ಇತಿಹಾಸ
ಯಾವ ಗಂಡಸರ ಹತ್ತಿರದ ಸಂಬಂಧಿ (ಗಂಡಸು, ಹೆಂಗಸು ಇಬ್ಬರೂ) ಸ್ತನ ಕ್ಯಾನ್ಸರ್ ಹೊಂದಿದ್ದರೆ, ಅವರಿಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚು.
೩. ವಿಕಿರಣಗಳಿಗೆ (ರೇಡಿಯೇಷನ್ಸ್) ತೆರೆದುಕೊಳ್ಳುವುದು
ಯಾವೆಲ್ಲಾ ಗಂಡಸರು ತಮ್ಮ ಎದೆಯನ್ನು ವಿಕಿರಣಗಳಿಗೆ ತೆರೆದಿರುತ್ತಾರೋ (ಅದು ವೈದ್ಯಕೀಯ ಕಾರಣಗಳಿಗೆ ಅಥವಾ ಇನ್ನ್ಯಾವುದೇ ಕಾರಣಕ್ಕೆ ಆಗಿರಲಿ), ಅವರಲ್ಲಿ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಹೆಚ್ಚು.
೪. ಕ್ಲೇನ್ಫೆಲ್ಟರ್ ಸಿಂಡ್ರೋಮ್
ಕ್ಲೇನ್ಫೆಲ್ಟರ್ ಸಿಂಡ್ರೋಮ್ ಎಂದರೆ ಅದು ಗಂಡಸಿನ ದೇಹದಲ್ಲಿ ಇರಬೇಕಿರುವುದಕ್ಕಿಂತ ಒಂದು ಜೋಡಿ ಹೆಚ್ಚುವರಿ ಕ್ರೋಮೋಸೋಮ್ ಇರುವುದು. ಇವರಿಗೆ ಚಿಕ್ಕ ವೃಷಣಗಳು ಇರುತ್ತವೆ ಮತ್ತು ಬಹುತೇಕ ಬಾರಿ ಸಂತಾನೋತ್ಪತ್ತಿ ಶಕ್ತಿ ಹೊಂದಿರುವುದಿಲ್ಲ. ಇವರಲ್ಲಿ ಹೆಂಗಸರ ಹಾರ್ಮೋನ್ ಆದ ಈಸ್ಟ್ರೋಜೆನ್ ಹಾರ್ಮೋನ್ ಹೆಚ್ಚಿರುತ್ತದೆ. ಈ ಕಾರಣಕ್ಕೆ ಇವರಿಗೆ ದೊಡ್ಡ ಸ್ತನಗಳು ಇರುತ್ತವೆ. ಇದು ಪುನಃ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳನ್ನ ಹೆಚ್ಚಿಸುತ್ತದೆ.
೫. ಅತಿಯಾದ ಮದ್ಯಪಾನ
ಹೌದು ಅತಿಯಾದ ಮದ್ಯಪಾನವು ಸ್ತನ ಕ್ಯಾನ್ಸರ್ ಉಂಟಾಗಲು ಸಹಾಯ ಮಾಡಬಹುದು. ಅತಿಯಾಗಿ ಕುಡಿಯುವುದು ಲಿವರ್ ಅನ್ನು ಹಾಳು ಮಾಡುತ್ತದೆ. ಹಾರ್ಮೋನುಗಳ ಪಚನಕಾರ್ಯದಲ್ಲಿ ಬಹುಮುಖ್ಯ ಕಾರ್ಯನಿರ್ವಹಿಸುವುದು ಈ ಲಿವರ್. ಇದರಿಂದ ಹಾರ್ಮೋನ್ ಗತಿಗಳಲ್ಲಿ ಏರುಪೇರು ಆಗಿ ಸ್ತನ ಕ್ಯಾನ್ಸರ್ ಉಂಟಾಗಬಹುದು.
೬. ವೃಷಣಗಳ ಅಸ್ವಸ್ಥತೆ
ವೃಷಣಗಳ ಅಸ್ವಸ್ಥತೆಯಾದ ಮುಮ್ಪ್ಸ್ ಅರ್ಕಐಟಿಸ್, ವೃಷಣಗಳ ಗಾಯ ಮತ್ತು ನೇತಾಡದ ವೃಷಣಗಳು, ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳನ್ನ ಹೆಚ್ಚಿಸುತ್ತವೆ.
ಸ್ತನ ಕ್ಯಾನ್ಸರಿನ ಲಕ್ಷಣಗಳೇನು?
ಸ್ತನ ಕ್ಯಾನ್ಸರಿನ ಲಕ್ಷಣಗಳು ಹೆಂಗಸರಲ್ಲಿ ಹೇಗಿರುತ್ತವೆಯೋ, ಗಂಡಸರಲ್ಲೂ ಹಾಗೆಯೇ ಇರುತ್ತವೆ.
೧. ಎದೆಯ ಮೇಲೆ ಗಂಟು ಅಥವಾ ಊತ ಕಾಣಿಸಿಕೊಳ್ಳುವುದು. ಇದು ಸಾಮಾನ್ಯವಾಗಿ ನೋವು ಉಂಟು ಮಾಡುವಂತದ್ದು ಆಗಿರುವುದಿಲ್ಲ.
೨. ಮೊಲೆತೊಟ್ಟನ್ನು ದ್ರವ್ಯ ಹೊರಬರುವುದು.
೩. ಮೊಲೆತೊಟ್ಟು ಒಳಗೆ ಹೋಗುವುದು.
೪. ಎದೆಯ ಚರ್ಮ ಅಥವಾ ಮೊಲೆತೊಟ್ಟು ಕೆಂಪಾಗುವುದು.
೫. ಚರ್ಮದಲ್ಲಿ ತೂತುಗಳು ಕಾಣಿಸಿಕೊಳ್ಳುವುದು.
ಸ್ತನ ಕ್ಯಾನ್ಸರ್ ನಿವಾರಣೆ ಹೇಗೆ?
ಸ್ತನ ಕ್ಯಾನ್ಸರ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಗದೆ ಇದ್ದರೂ, ಸ್ತನ ಕ್ಯಾನ್ಸರ್ ಅಪಾಯಗಳನ್ನ ಕಡಿಮೆ ಮಾಡಲು ಕೆಲವೊಂದು ಮಾರ್ಗಗಳಿವೆ.
೧. ಸರಿಯಾದ ದೇಹದ ತೂಕವನ್ನ ಕಾಯ್ದುಕೊಳ್ಳಿ.
೨. ಮದ್ಯಪಾನ ನಿಲ್ಲಿಸಿ.
ನೀವು ನಿಮ್ಮ ಎದೆಯ ಭಾಗದಲ್ಲಿ ಯಾವುದೇ ಬದಲಾವಣೆಗಳನ್ನ ಕಂಡರೆ, ಉದಾಹರಣೆಗೆ ಗಂಟುಗಳು ಆಗುವುದು ಅಥವಾ ತೊಟ್ಟಿನಿಂದ ದ್ರವ್ಯ ಹೊರಸೂಸುವಿಕೆ, ಕೂಡಲೇ ವೈದ್ಯರನ್ನ ಭೇಟಿ ಆಗಿ
Comments are closed.