ಉಡುಪಿ: ಕೋವಿಡ್-19 ಸೋಂಕಿತರ ಪಟ್ಟಿಯಲ್ಲಿ ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಇಂದು 7 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 1035ಕ್ಕೆ ಏರಿಕೆಯಾಗಿದೆ.
ಇಂದು ಜಿಲ್ಲೆಯಲ್ಲಿ 81 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 885 ಮಂದಿ ಗುಣಮುಖರಾಗಿ ಬಿಡುಗಡೆಯಾದಂತಾಗಿದೆ. ಜಿಲ್ಲೆಯಲ್ಲಿ ಈವರೆಗೆ 147 ಕೊರೋನಾ ಸಕ್ರೀಯ ಪ್ರಕರಣಗಳಿದೆ. ಅವರೆಲ್ಲಾ ಜಿಲ್ಲೆಯ ಮೂರು ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬರಿಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
ಇಂದು ಸೋಂಕು ದೃಢಗೊಂಡವರಲ್ಲಿ ಎಲ್ಲರೂ ಮಹಾರಾಷ್ಟ್ರದಿಂದ ಬಂದವರಾಗಿದ್ದು ನಾಲ್ವರು ಪುರುಷರು, ಓರ್ವ ಮಹಿಳೆ, ಇಬ್ಬರು ಮಕ್ಕಳಲ್ಲಿ ಸೋಂಕು ಕಾಣಿಸಿದೆ. ಸದ್ಯ ಎಲ್ಲರನ್ನೂ ನಿಗದಿತ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೊರ ರಾಜ್ಯದಿಂದ ಹಾಗೂ ಹೊರ ಪ್ರದೇಶದಿಂದ ಬಂದವರೊಂದಿಗೆ ಸಾಮಾಜಿಕ ಅಂತರ ಅಗತ್ಯ ಹಾಗೂ ಹೋಂ ಕ್ವಾರೆಂಟೈನ್ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಿ ಮತ್ತು ಅಂತಹ ಮಾಹಿತಿಯಿದ್ದರೆ ಸಂಬಂದಪಟ್ಟ ಇಲಾಖೆಗೆ ಮಾಹಿತಿ ಕೊಡುವ ಮೂಲಕ ಕೋವಿಡ್-19 ಹರಡದಂತೆ ತಡೆಯೋಣ ಎಂದು ಡಿಸಿ ತಿಳಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.