ಆರೋಗ್ಯ

ನೀರನ್ನು ಯಾವ ಸಮಯದಲ್ಲಿ ಎಷ್ಟೆಷ್ಟು ಕುಡಿಯಬೇಕು ಬಲ್ಲಿರಾ?

Pinterest LinkedIn Tumblr

ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ನೀರು ಬದುಕಲು ಬಹುಮುಖ್ಯವಾಗಿರುವ ಅಗತ್ಯತೆಯಾಗಿದೆ. ನೀರು ಇಲ್ಲದೇ ಬದುಕಲು ಸಾಧ್ಯವೇ ಇಲ್ಲ. ಪ್ರತಿಯೊಂದು ಜೀವಿಯೂ ಬದುಕ ಬೇಕಾದರೆ ಆತನಿಗೆ ಅವಶ್ಯಕ ಇರುವಷ್ಟು ನೀರು ಕುಡಿಯಲೇಬೇಕು. ಸರಿಯಾದ ಪ್ರಮಾಣದ ನೀರಿನ ಸೇವನೆ ಮಾಡುವುದರಿಂದ ದೇಹ ಸದೃಢವಾಗಿರುವುದರ ಜೊತೆಗೆ ಆರೋಗ್ಯವಂತರಾಗಿ ಇರಬಹುದಾಗಿದೆ. ಆದರೆ ಪ್ರತಿಯೊಂದು ಆಹಾರ ಸೇವನೆಯಲ್ಲಿಯೂ ಅದರದ್ದೇ ಆದ ಕ್ರಮಗಳಿರುತ್ತವೆ. ಅಂತೆಯೇ ನೀರನ್ನು ಅಷ್ಟೇ ಯಾವ ಸಮಯದಲ್ಲಿ ಎಷ್ಟೆಷ್ಟು ನೀರನ್ನು ಕುಡಿಯಬೇಕು ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.

ನೀವು ಇಡೀ ದಿನ ಎಷ್ಟು ಪ್ರಮಾಣದ ನಿರು ಕುಡಿದಿರುತ್ತೀರಿ ಎನ್ನುವುದಕ್ಕಿಂತ ರಾತ್ರಿ ಮಲಗುವ ಮುನ್ನ ನೀರು ಕುಡಿದಿದ್ದೀರೋ ಇಲ್ಲವೋ ಎನ್ನುವುದ ಬಹಳ ಮುಖ್ಯ. ಪ್ರತಿಯೊಬ್ಬರೂ ಕೂಡ ರಾತ್ರಿ ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿ ಸದೃಢರಾಗಿರಬಹುದಾಗಿದೆ.

ಪ್ರತಿದಿನ ರಾತ್ರಿ ನೀರು ಕುಡಿಯುವುದರಿಂದ ಇಡೀ ದಿನದ ಒತ್ತಡ ಕಡಿಮೆಯಾಗಿ ಸರಿಯಾಗಿ ನಿದ್ರೆ ಬರುತ್ತದೆ. ಸ್ನಾಯುಗಳಿಗೆ ಆರಾಮ ಸಿಗುತ್ತದೆ. ರಾತ್ರಿ ಒಂದು ಲೋಟ ಬಿಸಿ ನೀರು ಕುಡಿದರೆ ತೂಕ ಇಳಿಕೆಯಾಗುತ್ತದೆ. ಜೀರ್ಣಶಕ್ತಿ ಉತ್ತಮವಾಗುತ್ತದೆ. ಅಷ್ಟೇ ಅಲ್ಲದೆ ರಕ್ತ ಸಂಚಲನ ಸರಿಯಾಗಿ ಹೃದಯ ಸಮಸ್ಯೆಯಂತಹ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಅಂತೆಯೇ ನೀರು ದೇಹದ ಖನಿಜ ಹಾಗೂ ಜೀವಸತ್ವವನ್ನು ಸಮತೋಲನದಲ್ಲಿಟ್ಟು ದೇಹದ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ.

Comments are closed.