ಆರೋಗ್ಯ

ಮೂಲಂಗಿಯನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆ ಸಾಧ್ಯ

Pinterest LinkedIn Tumblr

ಸಾಮಾನ್ಯವಾಗಿ ಪೆಡಂಭೂತವಾಗಿ ಮೂಲವ್ಯಾಧಿ ಅಥವಾ ಪೈಲ್ಸ್ ಸಮಸ್ಯೆ ಇಂದ ನರಕದ ಯಾತನೆ ಅನುಭವಿಸುತ್ತಾ ಇರುವವರು ಈ ಹತ್ತು ಮನೆ ಮದ್ದನ್ನು ಮಾಡಿಕೊಂಡು ನೀವು ಸುಖವಾಗಿ ಇರಿ ಮತ್ತು ಹಾಯಾಗಿ ಇರಿ. ಮೂಲ ವ್ಯಾಧಿ ಸಮಸ್ಯೆ ಇಂದ ಬಳಲುತ್ತಾ ಇರುವವರು ಖಂಡಿತವಾಗಿ ಈ ಹತ್ತು ಮನೆ ಮದ್ದನ್ನು ಪಾಲಿಸುತ್ತಾ ಬಂದರೆ ನಿಮ್ಮ ಸಮಸ್ಯೆ ನಿವಾರಣೆ ಆಗುತ್ತೆ.

1. ಒಂದು ಸಣ್ಣ ಮೂಲಂಗಿ ಚೆನ್ನಾಗಿ ರುಬ್ಬಿಕೊಂಡು ಅದನ್ನು ಮಜ್ಜಿಗೆಯಲ್ಲಿ ಬೆರೆಸಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ಇಂದ ಪರಿಹಾರವನ್ನು ಕಂಡು ಕೊಳ್ಳಬಹುದು.

2. ಒಂದು ಚಮಚ ಕೊತ್ತುಂಬರಿ ಬೀಜವನ್ನು ಮೂರರಿಂದ ನಾಲ್ಕು ಲೋಟ ನೀರಿನಲ್ಲಿ ಹಾಕಿ ಕುದಿಸಿ ದಿನಾ ಬೆಳಗ್ಗೆ ಎರಡು ಚಮಚ ಕುಡಿಯುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆಯೂ ಪರಿಹಾರ ವಾಗುತ್ತದೆ.

3.ಪ್ರತಿ ದಿನ ರಾತ್ರಿ ಬಾಳೆ ಹಣ್ಣಿನ ಜೊತೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಸಮಸ್ಯೆ ನಿಮ್ಮನ್ನು ಬಿಟ್ಟು ದೂರ ಹೋಗುತ್ತೆ.

4. ತಾಜಾ ಹಾಲಿಗೆ ಎರಡರಿಂದ ಮೂರು ಚಮಚ ನಿಂಬೆ ರಸವನ್ನು ಹಿಂಡಿ ಕುಡಿಯುವುದರಿಂದ ಮೂಲ ವ್ಯಾಧಿ ಸಮಸ್ಯೆ ಇಂದ ನೀವು ಪರಿಹಾರವನ್ನು ಕಂಡು ಕೊಳ್ಳಬಹುದು.

5. ಮಾವಿನ ಗೊರಟವನ್ನು ಚೆನ್ನಾಗಿ ಪುಡಿ ಮಾಡಿ ಈ ಪುಡಿಗೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ದಿನಾ ಬೆಳಗ್ಗೆ ಸೇವಿಸಿದರೆ ಇದು ಮೂಲ ವ್ಯಾಧಿಗೆ ಉತ್ತಮ ಪರಿಹಾರವನ್ನು ನೀಡಬಲ್ಲದು.

6. ಬಿಲ್ವ ಪತ್ರೆ ಇಂದ ರಸವನ್ನು ಎರಡು ಚಮಚ ದಿನಾ ಬೆಳಗ್ಗೆ ಹಾಗೂ ಸಂಜೆ ಸೇವಿಸುತ್ತಾ ಇದ್ದರೆ ಈ ಸಮಸ್ಯೆಗೆ ಉತ್ತಮ ಶಮನವನ್ನು ನೀಡುತ್ತದೆ.

7. ಅರ್ಧ ಚಮಚ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ ಹಾಗೂ ರುಚಿಗೆ ಬೇಕಾದಷ್ಟು ಬೆಲ್ಲದ ಪುಡಿಯನ್ನು ಸೇರಿಸಿ ದಿನಕ್ಕೆ ಎರಡು ಬಾರಿ ಸೇವಿಸಬೇಕು.

8. ಒಣ ಖರ್ಜೂರವನ್ನು ರಾತ್ರಿ ಹಾಲಿನಲ್ಲಿ ನೆನಸಿತ್ತು ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಮೂಲ ವ್ಯಾಧಿ ಸಮಸ್ಯೆ ಇಂದ ದೂರವಾಗುವುದು.

9.ಲೋಳೆ ರಸವನ್ನು ಒಂದರಿಂದ ಎರಡು ಚಮಚ ಮೂರರಿಂದ ನಾಲ್ಕು ಭಾರಿ ಸೇವನೆ ಮಾಡುವುದು.

10.ಮುಟ್ಟಿದರೆ ಮುನಿ ಗಿಡವನ್ನು ಒಂದು ಲೋಟ ನೀರಿನಲ್ಲಿ ನೆನೆಹಾಕಿ ದಿನಕ್ಕೆರಡು ಬಾರಿ ಊಟಕ್ಕೆ ಮುಂಚೆ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ಹೇಳ ಹೆಸರಿಲ್ಲದಂತೆ ಹೋಗುತ್ತದೆ.

ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಈ ಲೇಖನ ಉಪಯುಕ್ತ ಅನಿಸಿದರೆ ನೀವು ನಿಮ್ಮ ಸ್ನೇಹಿತರಿಗೂ ಸಹಾ ಈ ಸಲಹೆಗಳನ್ನು ನೀಡ ಬಹುದು ಹಾಗೆಯೇ ನಮ್ಮೆಲ್ಲರ ಆರೋಗ್ಯವೇ ಭಾಗ್ಯ ಎಂಬುದನ್ನು ಮರೆಯಬಾರದು.

Comments are closed.