ಆರೋಗ್ಯ

ನಾನ್ ವೆಜ್ ತಿನ್ನದಿರುವವರಿಗೆ ಕಡಲೆ ಒಂದು ವರವೆಂದು ಕರೆಯಬಹುದು, ಯಾಕೆ ಗೋತ್ತಾ?

Pinterest LinkedIn Tumblr

 

1) ಕಡಲೆಯಲ್ಲಿ ಫೈಬರ್ ಪದಾರ್ಥಗಳು ಹೆಚ್ಚಾಗಿ ಇರುತ್ತದೆ, ಇದು ಶರೀರದಲ್ಲಿರುವ ಕೊಲೆಸ್ಟ್ರಾಲ್’ನ್ನು ಕಡಿಮೆಗೊಳಿಸುತ್ತದೆ. ಇದರೊಂದಿಗೆ ಹೃದಯ ಸಂಬಂಧಿ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬಹುದು.

2)ನಾನ್ ವೆಜ್ ತಿನ್ನದಿರುವವರು ಕಡಲೆಯನ್ನು ವರವೆಂದು ಕರೆಯಬಹುದು , ಯಾಕೆಂದರೆ ಮಾಂಸದಲ್ಲಿರುವ ಪ್ರೋಟೀನ್’ಗಳೆಲ್ಲವೂ ಕಡಲೆಯಲ್ಲೇ ಲಭ್ಯವಿದೆ.

3) ಪೊಟಾಶಿಯಂ, ಮೆಗ್ನೀಶಿಯಂ, ಕ್ಯಾಲ್ಸಿಯಂ ರೀತಿ ಎಷ್ಟೋ ತರಹದ ಮಿನರಲ್ಸ್ ಕಡಲೆಯಲ್ಲಿ ಇರುತ್ತದೆ. ಇದು ಬೀಪಿಯನ್ನು ಕಂಟ್ರೋಲ್ ಮಾಡುತ್ತದೆ. ಹೆಚ್ಚು ಹೊತ್ತಿದ್ದರೂ ಹಸಿವು ಆಗದೆ ಮಾಡುತ್ತದೆ. ಇದರಿಂದ ಭಾರ ತಗ್ಗಿಸ ಬೇಕೆಂದಿರುವವರಿಗೆ ಕಡಲೆಗಳು ತುಂಬಾ ಉಪಯೋಗ ವಾಗುತ್ತದೆ ಎಂದು ಹೇಳಬಹುದು.

4) ಕಡಲೆಗಳನ್ನು ಸಾಮಾನ್ಯವಾಗಿ ತಿನ್ನುತ್ತಿದ್ದರೆ ರಕ್ತದಲ್ಲಿ ಬಿಳಿ ರಕ್ತ ಕಣಗಳ ಸಂಖ್ಯೆ ಹೆಚ್ಚಾಗುತ್ತದೆ. ಇದರೊಂದಿಗೆ ರಕ್ತಹೀನತೆ ಇರುವವರಿಗೆ ಎಷ್ಟೋ ಒಳ್ಳೆಯದು.

5) ಕಡಲೆಯಲ್ಲಿ ಅಮೈನೋ ಯ್ಯಾಸಿಡ್ಸ್, ಟ್ರಿಪ್ಟೋಫಾನ್, ಸೆರೊಟೋನಿಕ್ ರೀತಿಯ ಉಪಯೋಗಕರವಾದ ಪೋಷಕಾಂಶಗಳು ಸಮೃದ್ದಿಯಾಗಿರುತ್ತದೆ. ಇವು ಒಳ್ಳೆಯ ನಿದ್ರೆ ಬರುವಂತೆ ಮಾಡುತ್ತದೆ.

6) ಕಡಲೆಯಲ್ಲಿ ಆಲ್ಫಾ ಲಿನೋಲಿನಿಕ್ ಯ್ಯಾಸಿಡ್ , ಒಮೇಗಾ 3 ಫ್ಯಾಟಿ ಯ್ಯಾಸಿಡ್ ಹೆಚ್ಚಾಗಿ ಇರುತ್ತದೆ, ಇವು ಕೊಲೆಸ್ಟ್ರಾಲ್’ನ್ನು ತಗ್ಗಿಸುವಲ್ಲಿ ಜೊತೆಗೆ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

7) ಐರನ್, ಪ್ರೋಟೀನುಗಳು,ಮಿನರಲ್ಸ್ ಸಮೃದ್ದಿಯಾಗಿ ಇರುವುದರಿಂದ ಕಡಲೆಗಳು ಶರೀರಕ್ಕೆ ಒಳ್ಳೆಯ ಶಕ್ತಿಯನ್ನು ಕೊಡುತ್ತದೆ. ಯ್ಯಾಂಟಿ ಆಕ್ಸಿಡೆಂಟುಗಳು ಹೆಚ್ಚಾಗಿ ಇರುವುದರಿಂದ ರೋಗ ನಿರೋಧಕ ಶಕ್ತಿಯು ಹಿಮ್ಮಡಿಗೊಳ್ಳುತ್ತದೆ.

8) ಹಾಲಿನಲ್ಲಿ ಇರುವ ಕ್ಯಾಲ್ಸಿಯಂಗೆ ಬಹುತೇಕ ಸಮಾನವಾದ ಕ್ಯಾಲ್ಸಿಯಂ ಕಡಲೆಯಲ್ಲಿ ನಮಗೆ ಸಿಗುತ್ತದೆ. ಇದರೊಂದಿಗೆ ಮೂಳೆಗಳು ಧೃಡವಾದ ಶಕ್ತಿ ಸಿಗುತ್ತದೆ.

9) ಪಾಸ್ಪರಸ್ ಹೆಚ್ಚಾಗಿ ಇರುವುದರಿಂದ ಶರೀರದಲ್ಲಿ ಹೆಚ್ಚಾಗಿರುವ ಉಪ್ಪನ್ನು ಹೊರಕ್ಕೆ ಕಳುಹಿಸುತ್ತದೆ.

10) ಹಳದಿ ಕಾಮಾಲೆ ಇರುವವರು ಕಡಲೆಗಳನ್ನು ತಿಂದರೆ ಬೇಗನೆ ವಾಸಿಯಾಗುತ್ತಾರೆ.

11) ಮ್ಯಾಂಗನೀಸ್, ಪಾಸ್ಪರಸ್ ಸಮೃದ್ದಿಯಾಗಿ ಇರುವುದರಿಂದ ಚರ್ಮ ಸಂಬಂಧಿ ಸಮಸ್ಯೆಗಳು ತೊಲಗುತ್ತವೆ. ತುರಿಕೆ, ಗಜ್ಜಿ ರೀತಿಯ ಕಾಯಿಲೆಗಳಿಂದ ಉಪಶಮನ ಸಿಗುತ್ತದೆ..

Comments are closed.