ನೀವು ದೀರ್ಘಾಯುಷಿ ಆಗಬೇಕಾ ಹಾಗಾದರೆ ಈ ಮಸಾಲೆ ಪದಾರ್ಥಗಳನ್ನು ಸೇವಿಸಿ. ಪ್ರತಿ ಒಬ್ಬರಿಗೂ ಜೀವನದ ಮೇಲೆ ಆಸೆ ಇದ್ದೇ ಇರುತ್ತೆ ತಾನು ಹೆಚ್ಚು ಕಾಲ ಬದುಕಬೇಕು ಎಂಬುದಾಗಿ ಮನುಷ್ಯನೂ ಪ್ರತಿ ನಿತ್ಯ ಹೋರಾಟಗಳನ್ನು ಮಾಡುತ್ತಾನೆ ಈ ರೀತಿ ದೀರ್ಘಾಯುಷಿ ಆಗಬೇಕಾದರೆ ಕೆಲವು ಆಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಅವು ಯಾವುದು ಎಂದು ನೋಡೋಣ ಬನ್ನಿ.
ನೆಲ್ಲಿಕಾಯಿ : ಬೆಟ್ಟದ ನೆಲ್ಲಿಕಾಯಿ ಸುಧೀರ್ಘ ಜೀವನಕ್ಕೆ ರಹದಾರಿ ಎಂದು ಹಲವರು ಆಯುರ್ವೇದ ತಜ್ಞರು ಹೇಳುತ್ತಾರೆ ದೇಹದ ಮೂರು ಸ್ಥಿತಿ ಗಳಾದ ವಾತ ಕಫ ಮತ್ತು ಪಿತ್ತ ಇವು ಮೂರನ್ನು ಸಮತೋಲನದಲ್ಲಿ ಇಡಲು ನೆಲ್ಲಿಕಾಯಿ ಸಹಕಾರಿ ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಅಧಿಕವಾಗಿ ಇದ್ದು ವಯಸಾಗುವಿಕೆ ಅನ್ನು ತಡೆಗಟ್ಟುವ ಗುಣವಿದೆ.
ಶುಂಠಿ : ಶೀತ ಕೆಮ್ಮು ಬಂದರೆ ಶುಂಠಿ ಸೇವಿಸುತ್ತೇವೆ ಈ ಶುಂಠಿ ಯಲ್ಲಿ ಹಲವಾರು ರೀತಿಯಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದೆ ಎನ್ನಲಾಗುತ್ತದೆ ಇದು ಹೃದಯ ಖಾಯಿಲೆ ಕ್ಯಾನ್ಸರ್ ಎಲುಬಿನ ಸಮಸ್ಯೆ ಗಳಂತಹ ಗಂಭೀರ ಸಮಸ್ಯೆಗಳು ಬರದಂತೆ ನಮ್ಮ ದೇಹವನ್ನು ರಕ್ಷಿಲಾಗುತ್ತದೆ.
ಹರಿಷಿನ : ಹರಿಷಿಣದಲ್ಲೂ ಶೇಕಡಾ 56 ರಷ್ಟು ಹೃದಯಾಘಾತವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ.
ಬೆಳುಳ್ಳಿ : ಇದರಲ್ಲಿಯೂ ಸಹಾ ಹೃದಯ ಹಾಗೂ ಸ್ಟ್ರೋಕ್ ಸಂಬಂಧಿ ಖಾಯಿಲೆಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ. ಏಲಕ್ಕಿ. ಸಿಹಿ ತಿನಿಸು ಪಾಯಸ ಮಾಡುವುದಿದ್ದರೆ ಏಲಕ್ಕಿ ಬೇಕೆ ಬೇಕು ಏಲಕ್ಕಿಯಲ್ಲಿ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರಹಾಕುವ ಗುಣವಿದೆ ಇದು ನಮ್ಮ ಜೀರ್ಣ ಪ್ರಕ್ರಿಯೆಯನ್ನು ಸುಲಭ ಗೊಳಿಸುವುದು ಅಲ್ಲದೆ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಜೀರಿಗೆ : ನಮ್ಮ ಅಡುಗೆ ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತು ಇದು. ಇದು ಎಲ್ಲಾ ರೀತಿಯ ಉದರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ ಅಷ್ಟೆ ಅಲ್ಲದೆ ಇದು ನರ ವ್ಯೂಹವನ್ನು ಚುರುಕುಗೊಳಿಸುತ್ತದೆ ಪ್ರತಿ ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ಹಾಕಿದ ನೀರು ಸೇವಿಸುವುದು ತುಂಬಾ ಉತ್ತಮ.
ಕರಿ ಮೆಣಸು : ಇದನ್ನು ನೀವು ಉಪ್ಪಿನ ಬದಲಾಗಿ ಉಪಯೋಗಿಸಬಹುದು ಇದು ಹೃದಯ ಸ್ನೇಹಿ ಮಸಾಲೆ ಪದಾರ್ಥವಾಗಿದೆ ಅಲ್ಲದೆ ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಗುಣ ಹೊಂದಿದೆ.
ಚಕ್ಕೆ : ಇದರಲ್ಲಿ ರಕ್ತದ ಒತ್ತಡವನ್ನು ಕಡಿಮೆ ಮಾಡುವ ಗುಣ ಶಕ್ತಿ ಇದೆ ಹಾಗೂ ದೇಹದಲ್ಲಿ ಇರುವ ಸಕ್ಕರೆ ಅಂಶವನ್ನು ಕಡಿಮೆ ಗೊಳಿಸಿ ತೂಕ ಕಡಿಮೆ ಮಾಡುವುದರಲ್ಲಿ ಸಹಾಯಕ ವಾಗಿದೆ. ಈ ಮಸಾಲೆ ಪದಾರ್ಥ ಗಳನ್ನು ನೀವು ಹೆಚ್ಚು ಹೆಚ್ಚು ಸೇವಿಸುವುದರಿಂದ ಖಂಡಿತ ದೀರ್ಘಾಯುಷಿ ಆಗುತ್ತಿರಿ ಇದು ಆಶ್ಚರ್ಯ ಆದರೂ ಸತ್ಯ ಸ್ನೇಹಿತರೆ. ಇವನ್ನೂ ತಿಂದು ನಿಮ್ಮ ಜೀವನವನ್ನು ಸುಂದರವಾಗಿ ಇರಿಸಿ.
Comments are closed.