ಆರೋಗ್ಯ

ಕ್ವಾರೆಂಟೈನ್ ಉಲ್ಲಂಘಿಸಿದರೆ ಕೇಸು ಗ್ಯಾರೆಂಟಿ: ಜಿಲ್ಲೆಯಲ್ಲಿ ಈಗಾಗಲೇ 69 ಮಂದಿ ಮೇಲೆ ಪ್ರಕರಣ- ಡಿಸಿ ಜಿ. ಜಗದೀಶ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಗೆ ವಿದೇಶ,ಹೊರ ರಾಜ್ಯಗಳಿಂದ ಬಂದಿರುವ ವ್ಯಕ್ತಿಗಳು ಹಾಗೂ ಕೋವಿಡ್ ಪಾಸಿಟಿವ್‌ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಅವರು 14 ದಿನ ಹೋಂ ಕ್ವಾರಂಟೈನ್‌ ನಲ್ಲಿ ಇರುವುದು ಕಡ್ಡಾಯವಾಗಿರುತ್ತದೆ. ಆದರೆ ಅವರು ನಿಯಮ ಬಾಹಿರವಾಗಿ ಹೊರಗಡೆ ತಿರುಗುತ್ತಿರುವುದು ಕಂಡುಬಂದಿರುತ್ತದೆ. ಇದರಿಂದಾಗಿ ಕೋವಿಡ್ ರೋಗ ನಿಯಂತ್ರಣದಲ್ಲಿ ಹಿನ್ನಡೆಯಾಗುತ್ತಿದು ಅತಂತವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಉಡುಪಿ ಡಿಸಿ ಎಚ್ಚರಿಸಿದ್ದಾರೆ.

ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ದ ನಿಗಾ ಇಡಲು Quarantine Watch App ತಂತ್ರಜ್ಞಾನದ ಬಳಕೆಯಾಗುತ್ತಿದ್ದು, ಇದರಿಂದಾಗಿ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡುತ್ತಿರುವ ವ್ಯಕ್ತಿಗಳ ಮಾಹಿತಿಯು ಲಭ್ಯವಾಗುತ್ತಿದೆ. ಅಂತಹವರ ವಿರುದ್ದ ಈಗಾಗಲೇ ಅಧಿಕಾರಿಗಳು ಅವರ ಮನೆ ಭೇಟಿ ಮಾಡಿ ಎಚ್ಚರಿಕೆಗಳನ್ನು ಕೊಟ್ಟು ಹೊರಗಡೆ ತಿರುಗಾಟ ನಡೆಸದಂತೆ ಮನವರಿಕೆ ಮಾಡಿದರೂ ಕೂಡಾ ನಿಯಮಗಳನ್ನು ಪಾಲಿಸದೇ ಪುನ:ರಪಿ ಉಲ್ಲಂಘನೆ ಮಾಡಿರುವ ಒಟ್ಟು 69 ವ್ಯಕ್ತಿಗಳ ವಿರುದ್ಧ FIR ದಾಖಲಿಸಲಾಗಿದೆ. ಹೋಂ ಕ್ವಾರಂಟೈನ್ ಹಾಗೂ ಹೋಂ ಐಸೋಲೇಷನ್‌ ನಲ್ಲಿರುವ ಯಾರೂ ಕೂಡ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿ ಹೊರಗಡೆ ತಿರುಗಾಟ ನಡೆಸಬಾರದಾಗಿ ಎಚ್ಚರಿಕೆ ನೀಡಲಾಗಿದೆ.ಒಂದು ವೇಳೆ ಉಲ್ಲಂಘನೆ ಮಾಡಿದಲ್ಲಿ ಅಂತಹವರ ವಿರುದ್ದ ಪ್ರಕರಣ ದಾಖಲಿಸಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

Comments are closed.