ಕಹಿ ಹಾಗೂ ಸುವಾಸನಾಯುಕ್ತ ರುಚಿಯಲ್ಲಿ ಕಾರ, ತೀವ್ರವಾದ ಘಾಟು ವಾಸನೆಯುಳ್ಳ ಬಜೆ ಬೇರು. ಇದು ಧ್ವನಿ ಕಂಠಕ್ಕೆ ಹಿತಕಾರಿ. ಶ್ವಾಸನಾಳದ ದೋಷಗಳನ್ನು ಪರಿಹರಿಸಿ, ನಾಲಿಗೆಯನ್ನು ಚುರುಕುಗೊಳಿಸುತ್ತದೆ. ಜಡತ್ವವನ್ನು ಹೋಗಲಾಡಿಸಿ ಸ್ಮರಣ ಶಕ್ತಿಯನ್ನು ಹೆಚ್ಚಿಸುತ್ತದೆ. ತೊದಲು ಉಗ್ಗು ನಿವಾರಣೆಗೆ. ಮಾತು ಸ್ಪಷ್ಟವಾಗಲು, ತ್ರಾಣ, ಬುದ್ಧಿ ಶಕ್ತಿ ಹೆಚ್ಚಳಕ್ಕೆ, ರೋಗ ನಿರೋಧಕತೆ ಹೆಚ್ಚಿಸಲು. ಗಂಟಲು ನೋವು ನಿವಾರಣೆಗೆ ಬಜೆಯನ್ನು ನೀರಿನಲ್ಲಿ ಇಲ್ಲವೆ ಎದೆ ಹಾಲಿನಲ್ಲಿ ತೇಯ್ದು ಗುಂಜಿಯಷ್ಟು ಗಂಧ ಸೇರಿಸಿ ಜೇನಿನೊಂದಿಗೆ ನೆಕ್ಕಿಸುವುದು.
ಈ ಮೂಲಿಕೆ ಭಾರತ ಮತ್ತು ಶ್ರೀಲಂಕಾದಲ್ಲಿ ವಿಪಲವಾಗಿ ಬೆಳೆಯುತ್ತದೆ. ಹಿಮಾಲಯದ ತಪ್ಪಲು ಪ್ರದೇಶ, ಸಿಕ್ಕಿಂ, ಮಣಿಪುರ ಮತ್ತು ನಾಗಗುಡ್ಡಗಳಲ್ಲಿ ಭೂಮಟ್ಟದಿಂದ ಸುಮಾರು 6-8 ಸಾವಿರ ಎತ್ತರ ಪ್ರದೇಶದಲ್ಲಿ ಈ ಮೂಲಿಕೆ ಬೆಳೆಯುತ್ತದೆ. ಸಂಸ್ಕೃತದಲ್ಲಿ ಉಗ್ರಗಂಧ, ತೆಲುಗಿನಲ್ಲಿ ವಸ, ತಮಿಳಿನಲ್ಲಿ ವಸಂಬು, ಕೊಂಕಣಿಯಲ್ಲಿ ವೈಕುಂಡ, ಕನ್ನಡದಲ್ಲಿ ಬಜೆ (ಬಜೆ ಬೇರು), ಇಂಗ್ಲೀಷ್ ನಲ್ಲಿ ಸ್ಟೀಟ್ ಫ್ಲಾಗ್ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ಎಕೊರಸ್ ಕ್ಯಾಲಮಸ್ ಎಂದು ಕರೆಯುತ್ತಾರೆ.
ಔಷಧೋಪಯೋಗಗಳು:
*ನಾಲಿಗೆ ತೆಳ್ಳಗಾಗಲು: ಬಿಸಿ ನೀರಲ್ಲಿ ಬಜೆಯನ್ನು ತೇಯ್ದು ಆ ರಸವನ್ನು ಸರಾಗವಾಗಿ ಮಾತನಾಡಲಾರದ ಮಕ್ಕಳ ನಾಲಿಗೆಯ ಮೇಲೆ ಪ್ರತಿದಿನ ಮುಂಜಾನೆ ಸ್ವಲ್ಪ ಇಟ್ಟು ತಿಕ್ಕಿದರೆ ಕೆಲದಿನಗಳ ನಂತರ ನಾಲಿಗೆ ತೆಳ್ಳಗಾಗಿ ಮಾತನಾಡುವಾಗ ಉಚ್ಛಾರವು ಸ್ಪಷ್ಟವಾಗುತ್ತದೆ.
*ಶಿಶುಗಳ ಜಾಡ್ಯಕ್ಕೆ : ಶಿಶು ಬೆಚ್ಚಿದರೆ, ಬೆದರಿರೆ, ಸಣ್ಣಜ್ವರ ಬಂದರೆ ಅವು ನಿದ್ರಿಸುವ ಪೂರ್ವ ದಲ್ಲಿ ಅತಿ ತೆಳ್ಳಗಾದ ಬಜೆಯ ರಸವನ್ನು ಮೈಗೆ ನೇವರಿಸುವುದರಿಂದ ಪರಿಹಾರ ಕಾಣಬಹುದು.
*ವಿವಿಧ ಕಾಯಿಲೆಗೆ: ಆಯುರ್ವೇದದ ಪ್ರಕಾರ ಬಜೆಯನ್ನು ವಾಂತಿ ನಿವಾರಕ, ಜಠರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ, ಅಗ್ನಿಮಾಂದ್ಯ, ಅಜೀರ್ಣ, ಹೊಟ್ಟೆ ನೋವು, ನರಗಳ ದೌರ್ಬಲ್ಯಕ್ಕೆ, ಶ್ವಾಸನಾಳದ ಸೋಂಕಿಗೆ, ಮಕ್ಕಳಲ್ಲಿ ಅಮಶಂಕೆ. ಹಾವಿನ ಕಡಿತಕ್ಕೆ ಔಷಧಿಯಾಗಿಯೂ ಬಜೆಯನ್ನು ಉಪಯೋಗಿಸಲಾಗುವುದು.
*ಹೊಟ್ಟೆಯ ಕ್ರಿಮಿಗೆ: ಬಜೆ ಸೇವಿಸುತ್ತಿದ್ದರೆ ಜಂತು ಹುಳ ಕ್ರಿಮಿಗಳಾಗುವುದಿಲ್ಲ.
*ಕುದುರೆಯ ಶಕ್ತಿವರ್ಧನೆಗೆ: ಉಪ್ಪು. ಸಕ್ಕರೆ, ಜೀರಿಗೆಯೊಂದಿಗೆ ಬೆಳ್ಳುಳ್ಳಿಯನ್ನು ಬೆರೆಸಿ ಬಜೆಯಿಂದ ತಯಾರಿಸಿದ ಮಿಶ್ರಣವನ್ನು ಕುದುರೆಗಳಿಗೆ ನೀಡುವುದರಿಂದ ಶಕ್ತಿವರ್ಧಿಸುವುದು.
*ದನಗಳ ಕಾಲು ಬಾಯಿ ಬೇನೆಗೆ: ಬಜೆಯ ಎಲೆಗೆಳಿಂದ ತಯಾರಿಸಿದ ಹಸಿರಾದ ತೈಲವು ದನ-ಕರಗಳ ಕಾಲು ಬಾಯಿ (ವಡೆ) ರೋಗಕ್ಕೆ ರಾಮಬಾಣ.
*ಬಟ್ಟೆಯ ರಕ್ಷಣೆಗೆ: ರೇಷ್ಮೆ, ಜರತಾರಿಯಂತಹ ದುಬಾರಿ ಬಟ್ಟೆಗಳು ಹಾಳಾಗದಂತೆ ರಕ್ಷಿಸಲು ಬಜೆಯನ್ನು ಉಪಯೋಗಿಸಲಾಗುವುದು.
*ತೈಲ ತಯಾರಿಕೆ: ಕ್ಯಾಲಿಮಿಸ್ ಎಂಬ ತೈಲ ಪರಿಮಳಯುಕ್ತವಾಗಿದ್ದು, ಇದನ್ನು ಬಜೆಯ ಕಾಂಡಿದಿಂದ ತಯಾರಿಸುತ್ತಾರೆ.
Comments are closed.