ಉಡುಪಿ: ಉಡುಪಿ ಜಿಲ್ಲೆಯಲ್ಲಿ ಗುರುವಾರ ಕೋವಿಡ್ 402 ಪಾಸಿಟಿವ್, 1,185 ನೆಗೆಟಿವ್ ಕೇಸುಗಳು ದಾಖಲಾಗಿದೆ. ಒಟ್ಟು ಪ್ರಕರಣಗಳ ಸಂಖ್ಯೆ 7,000 ದಾಟಿದೆ. ಕೊರೋನಾ ಸೋಂಕಿನಿಂದ ಇಬ್ಬರು ಸಾವನ್ನಪ್ಪಿದ್ದಾರೆ.
ಮಾರಣಕಟ್ಟೆಯ 56 ವರ್ಷದ ವ್ಯಕ್ತಿಯೊಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಕೋಟತಟ್ಟು ನಿವಾಸಿ 61 ವರ್ಷ ಪ್ರಾಯದವರೊಬ್ಬರು ಬುಧವಾರ ರಾತ್ರಿ ಮನೆಯಿಂದ ಮಣಿಪಾಲ ಆಸ್ಪತ್ರೆಗೆ ಕರೆತರುವಾಗ ಕೊನೆಯುಸಿರೆಳೆದರು. ಇಬ್ಬರಿಗೂ ಕೂಡ ಬೇರೆ ಆರೋಗ್ಯ ಸಮಸ್ಯೆಗಳಿದ್ದವು ಎನ್ನಲಾಗಿದೆ.
ಪಾಸಿಟಿವ್ ಪ್ರಕರಣಗಳಲ್ಲಿ ಐವರು ಬಾಲಕರು, 18 ಬಾಲಕಿಯರು, 186 ಪುರುಷರು, 155 ಮಹಿಳೆಯರು, ತಲಾ 19 ಮಂದಿ 60 ವರ್ಷ ಮೇಲ್ಪಟ್ಟವರು ಇದ್ದಾರೆ. 99 ಮಂದಿ ರೋಗ ಲಕ್ಷಣದವರು, 303 ರೋಗಲಕ್ಷಣ ಇಲ್ಲದವರಿದ್ದಾರೆ. ಉಡುಪಿ ತಾಲೂಕಿನ 232, ಕುಂದಾಪುರ ತಾಲೂಕಿನ 117, ಕಾರ್ಕಳ ತಾಲೂಕಿನ 49 ಮಂದಿ, ಹೊರ ಜಿಲ್ಲೆಯ ನಾಲ್ವರು ಇದ್ದಾರೆ. ಗುರುವಾರ 292 ಮಂದಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ಒಟ್ಟು 7,175 ಪ್ರಕರಣ ಗಳಲ್ಲಿ 4,258 ಮಂದಿ ಗುಣಮುಖರಾಗಿದ್ದು 2,847 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಈವರೆಗೆ ಕೋವಿಡ್ ಕಾರಣಕ್ಕಾಗಿ 71 ಸಾವು ಸಂಭವಿಸಿದೆ. ಗುರುವಾರ 190 ಮಂದಿ ಆಸ್ಪತ್ರೆಗಳಲ್ಲಿ, 212 ಮಂದಿ ಮನೆ ಐಸೊಲೇಶನ್‌ಗೆ ದಾಖಲಾಗಿದ್ದಾರೆ. ಗುರುವಾರ 1,697 ಮಂದಿಯ ಗಂಟಲ ದ್ರವ ಸಂಗ್ರಹಿಸಲಾಗಿದ್ದು 1,855 ಮಾದರಿಯ ವರದಿಗಳು ಬರಬೇಕಿವೆ.
Comments are closed.