ಉಡುಪಿ: ಕೊರೋನಾ ಸೋಂಕಿತ 60 ವರ್ಷದ ವ್ಯಕ್ತಿಮೃತದೇಹವನ್ನು ಅಂತ್ಯಕ್ರಿಯೆಗೆಂದು ಸ್ಮಶಾನಕ್ಕೆ ತಂದಾಗ ಬಾರೀ ಎಡವಟ್ಟು ಬೆಳಕಿಗೆ ಬಂದಿದೆ. ಕುಟುಂಬಿಕರು ಮೃತದೇಹ ನೋಡಿದಾಗ ಅದು ಯುವಕನ ಮೃತದೇಹವಾಗಿದ್ದು ಸಿಟ್ಟುಗೊಂಡ ಕುಟುಂಬದವರು ಸಾರ್ವಜನಿಕರೊಡಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಂದಾಪುರದಲ್ಲಿ ಈ ಘಟನೆ ನಡೆದಿದೆ.
ತಾಲೂಕಿನ ಕೋಟೇಶ್ವರ ಸಮೀಪದ ನೇರಂಬಳ್ಳಿ ನಿವಾಸಿ 60 ವರ್ಷ ಪ್ರಾಯದ ವ್ಯಕ್ತಿಯನ್ನು ಬೆನ್ನು ನೋವಿನ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಜುಲೈ30ರಂದು ಆ ವ್ಯಕ್ತಿಗೆ ಕೊರೋನಾ ಪಾಸಿಟಿವ್ ದೃಢವಾಗಿದ್ದು ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆ.23 ಭಾನುವಾರ ಆ ವ್ಯಕ್ತಿ ಮೃತಪಟ್ಟ ಬಗ್ಗೆ ಕುಟುಂಬಿಕರಿಗೆ ತಿಳಿಸಿದ್ದು ಕುಂದಾಪುರ ಸಂಗಮ್ ಸಮೀಪದ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಳ್ಳಲಾಗಿದ್ದು ಅಂಬುಲನ್ಸ್ ವಾಹನದಲ್ಲಿ ಶವ ಕಳಿಸಲಾಗಿತ್ತು. ಇಲ್ಲಿ ಬಂದ ಮೃತದೇಹದ ಮುಖ ನೋಡಿದಾಗ ಅದು ಅವರ ಮೃತದೇಹವಾಗಿರದೆ ಬೇರೊಬ್ಬ ಯುವಕನದ್ದಾಗಿತ್ತು. ಸ್ಮಶಾನಕ್ಕೆ ಅದಲು-ಬದಲು ಮೃತದೇಹ ಕಳಿಸಿದ ಆಸ್ಪತ್ರೆ ವಿರುದ್ಧ ಮೃತರ ಮಕ್ಕಳು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
ಆಸ್ಪತ್ರೆಯ ಯಡವಟ್ಟಿನ ವಿರುದ್ಧ ಗರಂ ಆದ ಕುಟುಂಬಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮದ್ಯಾಹ್ನ 12 ಗಂಟೆ ವೇಳೆ ಮೃತ ವ್ಯಕ್ತಿ ಶವ ಸ್ಮಶಾನಕ್ಕೆ ತಂದಿದ್ದು ಯುವಕನ ಶವವಿದ್ದ ಅಂಬುಲೆನ್ಸ್ ಬಿಡಲಾಯಿತು.
(ವರದಿ- ಯೋಗೀಶ್ ಕುಂಭಾಸಿ)
Comments are closed.