ಅಂತರಾಷ್ಟ್ರೀಯ

ಅಕ್ಟೋಬರ್‌ನಲ್ಲಿ ಕೊರೊನಾ ಲಸಿಕೆ ಲಭ್ಯ : ಟ್ರಂಪ್ / ಇದು ಚುನಾವಣಾ ಗಿಮಿಕ್ : ಜೋ ಬಿಡೆನ್

Pinterest LinkedIn Tumblr

ವಾಷಿಂಗ್ಟನ್ : ಮುಂಬರುವ ಅಕ್ಟೋಬರ್ ಅಂತ್ಯದ ವೇಳೆಗೆ ಕೊರೊನಾ ವೈರಸ್ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಘೋಷಣೆ ಮಾಡುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮೆರಿಕನ್ನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಕೋವಿಡ್ ಲಸಿಕೆಗಾಗಿ ನಾವು ಹಗಲಿರುಳೂ ಶ್ರಮಿಸುತ್ತಿದ್ದು, ಕೊರೊನಾ ಲಸಿಕೆಯ ಸಂಶೋಧನಾ ಹಂತ ಯಶಸ್ವಿಯಾಗಿ ಸಾಗುತ್ತಿದೆ. ಅಕ್ಟೋಬರ್ ವೇಳೆಗಾಗಲೇ ಕೊರೊನಾ ಲಸಿಕೆ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಭರವಸೆ ಇದೆ ಎಂದು ಟ್ರಂಪ್ ಶ್ವೇತಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೂ ಮೊದಲೇ ಕೋವಿಡ್ ಲಸಿಕೆ ಹೊರತರಲು ಹೊರಟಿರುವ ಟ್ರಂಪ್ ಅವರ ಸ್ಪೀಡ್ ನೋಡಿದರೆ ಟ್ರಂಪ್ ಕೇವಲ ಚುನಾವಣಾ ಲಾಭವನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊರೊನಾ ಲಸಿಕೆ ಬಿಡುಗಡೆ ಮಾಡಲು ಹಾತೋರೆಯುತ್ತಿದ್ದಾರೆ ಎಂದು ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಆಪಾದಿಸಿದ್ದಾರೆ.

ಇದೇ ಕಾರಣಕ್ಕೆ ಟ್ರಂಪ್ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲೂ ಒತ್ತಡ ಹೇರುತ್ತಿದ್ದಾರೆ. ಗಡಿಬಿಡಿಯಲ್ಲಿ ದೇಶಕ್ಕೆ ಮಾರಕವಾಗುವ ನಿರ್ಧಾರ ಸಲ್ಲದು. ಕೊರೊನಾ ಲಸಿಕೆ ಸಂಶೋಧನೆಯಲ್ಲಿ ಸರ್ಕಾರ ಪಾರದರ್ಶಕ ವಾಗಿರಬೇಕು ಎಂದು ಜೋ ಬಿಡೆನ್ ಆಗ್ರಹಿಸಿದ್ದಾರೆ. ಜೊತೆಗೆ ಸೂಕ್ತ ವೈದ್ಯಕೀಯ ಪ್ರಮಾಣ ವಿಲ್ಲದೇ ಕೊರೊನಾ ಲಸಿಕೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಜೋ ಬಿಡೆನ್ ಆತಂಕ ವ್ಯಕ್ತಪಡಿಸಿದ್ದಾರೆ.

Comments are closed.