ಮಂಗಳೂರು : ಕಿವಿ ನೋವು ಕಾಣಿಸಿಕೊಂಡರೆ ಏನು ಮಾಡಬೇಕು. ಕಿವಿ ನೋವು ಬರದಂತೆ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸ ಬಹುದು ಎಂಬ ಬಗ್ಗೆ ನಮ್ಮ ಓದುಗರಿಗೆ ಇಲ್ಲಿದೆ ಸಮಗ್ರ ಮಾಹಿತಿ.
ಸಾಮಾನ್ಯವಾಗಿ ಹೆಚ್ಚು ಧೂಳಿರುವ ಪ್ರದೇಶದಲ್ಲಿ ನಾವು ಓಡಾಡಿದಾಗ ಅಥವಾ ಸ್ನಾನ ಮಾಡುವಾಗ ಕಿವಿಯೊಳಗೆ ನೀರು ಹೋದರೆ ವ್ಯಾಕ್ಸ್ ತುಂಬಿಕೊಂಡು ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕಿವಿಯಲ್ಲಿ ತುರಿಕೆ ಉಂಟಾಗುತ್ತದೆ. ತುರಿಕೆ ನಿವಾರಿಸಲು ನಾವು ಕಿವಿಯೊಳಗೆ ಬಡ್ಸ್ ಅಥಾವ ಇನ್ನಿತರ ಕಡ್ಡಿಗಳನ್ನು ತುರುಕಿಸಿಕೊಳ್ಳುತ್ತೇವೆ.
ಇಲ್ಲೇ ಸಮಸೈ ಆರಂಭವಾಗುವುದು. ಕಿವಿಯೊಳಗೆ ಏನೇನನ್ನೋ ತುರುಕಿಸಿಕೊಂಡಾಗ ಕಿವಿ ನೋವು ಮತ್ತಷ್ಟು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಮಾತ್ರವಲ್ಲದೇ ಕಿವಿಯೊಳಗೆ ಬಡ್ಸ್ ಅಥಾವ ಇನ್ನಿತರ ಕಡ್ಡಿಗಳನ್ನು ತುರುಕಿಸಿಕೊಂಡಾಗ ಕಿವಿಯೊಳಗೆ ತುಂಬಿಕೊಂಡಿರುವ ವ್ಯಾಕ್ಸ್ ಮತ್ತಷ್ಟು ಆಳ ಪ್ರದೇಶಕ್ಕೆ ದೂಡಲ್ಪಡುತ್ತದೆ. ಇದರಿಂದ ನೋವು ಹೆಚ್ಚಿಸಿಕೊಂಡು ನಾವು ಬವಣೆ ಪಡಬೇಕಾಗುತ್ತದೆ.
ಮುನ್ನೆಚ್ಚರಿಕೆ ಹೇಗೆ?
ಕಿವಿ ಸಂಬಂಧಿ ಸಮಸ್ಯೆ ಇರುವವರು ಕಡ್ಡಾಯವಾಗಿ ಕಿವಿಗೆ ಹತ್ತಿಯನ್ನು ಇಟ್ಟುಕೊಂಡು ತಲೆ ಸ್ನಾನ ಮಾಡಬೇಕು. ಸ್ವಿಮ್ಮಿಂಗ್ ಫೂಲ್ ಗೆ ಇಳಿಯುವ ಮುನ್ನ ಕಡ್ಡಾಯವಾಗಿ ಕಿವಿ ಮುಚ್ಚಿಕೊಳ್ಳುವ ಸಾದನ ಬಳಸಿ.
ಕಿವಿ ನೋವಿಗೆ ಇಲ್ಲಿದೆ ಕೆಲವೊಂದು ಮನೆ ಮದ್ದು :
1, ಕಿವಿ ನೋವು ಉಲ್ಭಣಗೊಳ್ಳದಂತೆ ಮನೆ ಮದ್ದುಗಳ ಮೂಲಕ ಇದನ್ನು ನಿಯಂತ್ರಿಸಬಹುದು. ಕಿವಿಯಲ್ಲಿ ವ್ಯಾಕ್ಸ್ ತುಂಬಿಕೊಂಡರೆ ಹೀಗೆ ಮಾಡಿ. ಅಡುಗೆ ಸೋಡಾವನ್ನು ನೀರಿನಲ್ಲಿ ಕದಡಿಸಿ ಎರಡು ಹನಿಯನ್ನು ಕಿವಿಯೊಳಗೆ ಬಿಡಿ. ಇದರಿಂದ ಕಿವಿಯಿಂದ ವಾಸನೆ ಬರುವುದು ನಿಲ್ಲುತ್ತದೆ ಹಾಗೂ ವ್ಯಾಕ್ಸ್ ಸಮಸ್ಯೆ ದೂರವಾಗುತ್ತದೆ.
2, ಸಣ್ಣ ಈರುಳ್ಳಿಯನ್ನು ತೆಗೆದುಕೊಂಡು ಅದನ್ನು ಕತ್ತರಿಸಿಕೊಳ್ಳಿ. ಮೈಕ್ರೋವೇವ್‌ನಲ್ಲಿ 2 ನಿಮಿಷಗಳಷ್ಟು ಕಾಲ ಬಿಸಿ ಮಾಡಿಕೊಳ್ಳಿ. ಅದು ತಣ್ಣಗಾದ ನಂತರ, ರಸವನ್ನು ಹಿಂಡಿ ತೆಗೆಯಿರಿ. ನೋವಿರುವ ಕಿವಿಗೆ 2-3 ಹನಿ ಹಾಕಿಕೊಳ್ಳಿ. ನಂತರ ಮತ್ತೊಂದು ಬದಿಗೆ ಮಲಗಿಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಕಿವಿಗೆ ಸರಿಯಾಗಿ ಮದ್ದು ತಲುಪುತ್ತದೆ.
3, ಬೆಳ್ಳುಳ್ಳಿಯನ್ನು ಜಜ್ಜಿ ಅದರ ರಸ ತೆಗೆದು ಕೆಲವು ಬಿಂದುಗಳನ್ನು ನೊವಿರುವ ಕಿವಿಗೆ ಹಾಕಿ. ನೋವನ್ನು ನಿವಾರಿಸಿ ಕಿವಿ ಸೋರುವುದನ್ನು ಇದು ಕಡಿಮೆಗೊಳಿಸುತ್ತದೆ. ಈ ರೀತಿಯಲ್ಲೂ ಕಿವಿ ನೋವನ್ನು ಶಮನಗೊಳಿಸಬಹುದು. ಬೆಳ್ಳುಳ್ಳಿ ಎಣ್ಣೆಯಿಂದಲೂ ಇದೇ ಪ್ರಯೋಜನವನವನ್ನು ಪಡೆಯಬಹುದು.
4, ಒಂದು ಕಪ್‌ನಷ್ಟು ಉಪ್ಪು ತೆಗೆದುಕೊಂಡು ಅದನ್ನು ಮೈಕ್ರೋವೇವ್‌ನಲ್ಲಿ 3-5 ನಿಮಿಷಗಳ ಕಾಲ ಬಿಸಿ ಮಾಡಿಕೊಳ್ಳಿ. ದಪ್ಪನೆಯ ಕಾಲುಚೀಲದಲ್ಲಿ ಬಿಸಿ ಮಾಡಿದ ಉಪ್ಪನ್ನು ಹಾಕಿ ಕಾಲುಚೀಲದ ತೆರೆದ ಕೊನೆಯನ್ನು ಕಟ್ಟಿಕೊಳ್ಳಿ. ಇದೀಗ ನೋವಿರುವ ಕಿವಿಯ ಬದಿಯಲ್ಲಿ ಮಲಗಿ ಕಿವಿಯ ಅಡಿಯಲ್ಲಿ ಕಾಲುಚೀಲವನ್ನು ಇಡಿ. 8-10 ಬಾರಿ ನಿಮಗೆ ಅವಶ್ಯವಿರುವಷ್ಟು ಬಾರಿ ಹೀಗೆ ಮಾಡಿ. ಇದು ಕಿವಿ ನೋವನ್ನು ತಕ್ಷಣ ನಿವಾರಿಸುತ್ತದೆ.
5, ಕಿವಿ ನೋವನ್ನು ಕೂಡಲೇ ಪರಿಹರಿಸಲು ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಬಿಳಿ ವಿನೇಗರ್ ಅನ್ನು ಮಿಶ್ರ ಮಾಡಿ. ನೋವಿರುವ ಕಿವಿಗೆ ಹಾಕಿ. ನಂತರ ಅದನ್ನು ಸರಿಯಾಗಿ ಒಣಗಿಸಿಕೊಳ್ಳಿ.
6, ಕಿವಿಯಲ್ಲಿ ಬ್ಯಾಕ್ಟಿರಿಯಾದ ಬೆಳವಣಿಗೆಯನ್ನು ತಡೆಯಲು ಪ್ಯಾನ್‌ನಲ್ಲಿ ಆಲೀವ್ ಆಯಿಲ್ ಬಿಸಿ ಮಾಡಿಕೊಳ್ಳಿ. ಇದರ ಕೆಲವು ಹನಿಗಳನ್ನು ನೋವಿರುವ ಕಿವಿಗೆ ಹಾಕಿ. ಎಣ್ಣೆ ತುಂಬಾ ಬಿಸಿಯಾಗಿರಬಾರದು.
ದೊಡ್ಡವರಿಗಿಂತ ಸಣ್ಣ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಕಿವಿಯಲ್ಲಿರುವ ನೀರ ಪಸೆ ಅಥವಾ ಕಿವಿ ಕಾಲುವೆಯ ಮೇಲೆ ಉಂಟಾಗುವ ಸಣ್ಣ ಗಾಯ ಕಿವಿ ನೋವಿಗೆ ಕಾರಣ. ದೀರ್ಘ ಕಾಲದ ಕಿವಿ ನೋವಿನ ಸಮಸ್ಯೆ ಕಿವಿ ಕೇಳಿಸದಿರುವಿಕೆ ಅಥವಾ ಕಿವಿಯಲ್ಲಿ ತೀವ್ರವಾದ ನೋವಿಗೆ ಕಾರಣವಾಗ ಬಹುದು.
ಕಿವಿಯ ಕೊಳಕು ತೆಗೆದು ಹಾಕಲು ಹೈಡ್ರೋಜನ್ ಪೆರಾಕ್ಸೈಡ್ ಸಾಮಾನ್ಯವಾಗಿ ಬಳಸುತ್ತಾರೆ. ಇದರಿಂದ ನಿಮ್ಮ ಕಿವಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಾವು. ಹಾಗಾಗಿ ಇದನ್ನು ಬಳಸುವ ಮುನ್ನ ಎಚ್ಚರವಿರಲಿ.
ಕಿವಿ ದೇಹದ ಸೂಕ್ಷ್ಮ ಭಾಗಗಳಲ್ಲಿ ಒಂದಾದ್ದರಿಂದ ಯಾವೂದೇ ಪ್ರಯೋಗಕ್ಕೆ ಮುಂದಾಗುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು. ಕಿವಿ ನೋವಿನ ಸಮಸ್ಯೆ ಮತ್ತಷ್ಟು ಹೆಚ್ಚಾದರೆ ಅವಶ್ಯವಾಗಿ ವೈದ್ಯರನ್ನು ಸಂಪರ್ಕಿಸಿರಿ.
Comments are closed.