ಆರೋಗ್ಯ

ಅಣಬೆ ಮಾನವನ ಆರೋಗ್ಯಕ್ಕೆ ಅದ್ಭುತ ರಾಮಬಾಣವಿದ್ದಂತೆ..

Pinterest LinkedIn Tumblr

ಅಣಬೆಯು ಆ್ಯಂಟಿ ಬ್ಯಾಕ್ಟೇರಿಯಲ್ ಕಿಣ್ವಗಳನ್ನು ಹೂಂದಿದೆ ಹಾಗೂ ಶೇಕಡಾ 8-10ರಷ್ಟು ನಾರಿನಂಶ ಇದರಲ್ಲಿದೆ. ಒಣಗಿದ ಅಣಬೆಯಲ್ಲಿ ವಿಶೇಷವಾಗಿ ವಿಟಾಮಿನ್ ಬಿ1, ಬಿ2, ಬಿ5, ಬಿ6, ಮತ್ತು ಬಿ7 ಅಂಶ ಹೆಚ್ಚಾಗಿ ಇರುತ್ತದೆ. ಮಾನವನ ಆರೋಗ್ಯಕ್ಕೆ ಅಣಬೆ ತುಂಬ ಒಳ್ಳೆಯ ಆಹಾರವಾಗಿದೆ ಮತ್ತು ಆಯುರ್ವೇದದಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ.

ಆರೋಗ್ಯದ ಕಣಜ ಎಂದು ಹೆಸರು ಪಡೆದಿರುವ ಅಣಬೆ ಮಾನವನ ಆರೋಗ್ಯಕ್ಕೆ ಅದ್ಭುತ ರಾಮಬಾಣವಿದ್ದಂತೆ, ವಿಟಮಿನ್ ಡಿ ಹೊಂದಿರುವ ಏಕೈಕ ತರಕಾರಿಯೆಂದರೆ ಅಣಬೆ. ಎಲುಬಿಗೆ ಶಕ್ತಿ ನೀಡುವ ಕ್ಯಾಲ್ಸಿಯಂ, ರಕ್ತಹೀನತೆ ನಿವಾರಿಸುವ ಕಬ್ಬಿಣಾಂಶ ಮತ್ತು ರಕ್ತದೊತ್ತಡ ಕಡಿಮೆ ಮಾಡಲು ವಿಟಮಿನ್‌ ಡಿ ಅತ್ಯವಶ್ಯಕ. ಇದನ್ನು ಸೇವಿಸಿದರೆ ಇವೇಲ್ಲ ಅವಶ್ಯಕತೆಯನ್ನು ಅಣಬೆ ಪೂರೈಸುತ್ತದೆ.

ಇದು ಕಡಿಮೆ ಕೊಬ್ಬಿನ ಅಂಶ ಹೂಂದಿದ್ದು ಹೇರಳವಾದ ಪ್ರೊಟೀನ್, ವಿಟಮಿನ್ ಬಿ-1, ಬಿ-2 , ಕಬ್ಬಿಣಾಂಶ, ಪೊಟ್ಯಾಶಿಯಂ, ಸೋಡಿಯಂ ಹಾಗೂ ಅಮೈನೋ ಆಮ್ಲಗಳನ್ನು ಹೂಂದಿದೆ.

ಅಣಬೆಯಲ್ಲಿ ಮಿಟಮಿನ್‌ ಡಿ ಅಂಶ ಹೇರಳವಾಗಿದೆ. ವಿಟಮಿನ್‌ ಡಿ ನಮ್ಮ ದೇಹದ ಎಲುಬಿಗೆ ಅವಶ್ಯಕತೆ ಇರುವ ಪ್ರೊಟೀನ್ ಒದಾಗಿಸುತ್ತದೆ. ಇದಕ್ಕೆ ಕಾರಣ, ಅಣಬೆಗಳು ಸೂರ್ಯನ ಬೆಳಕಿನಿಂದ ನೈಸರ್ಗಿಕವಾಗಿ ವಿಟಮಿನ್ ‘ಡಿ’ ಯನ್ನು ಪಡೆಯುತ್ತದೆ. ದೇಹಕ್ಕೆ ಒಂದು ದಿನಕ್ಕೆ ಬೇಕಾಗಿರುವ ಶೇ.20ರಷ್ಟು ವಿಟಮಿನ್ ಡಿ ಅಣಬೆಯಲ್ಲಿದೆ.

ಮಧುಮೇಹಿಗಳಿಗೆ ಅಣಬೆ ಉತ್ತಮ ಆಹಾರ. ಏಕೆಂದರೆ ಇದರಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶ ಇಲ್ಲ. ಇದರಲ್ಲಿನ ನೈಸರ್ಗಿಕ ಇನ್ಸುಲಿನ್ ಮತ್ತು ಎಂಜೈಮುಗಳು ಸೇವಿಸಿದ ಆಹಾರದಲ್ಲಿನ ಸಕ್ಕರೆ ಮತ್ತು ಸ್ಟಾರ್ಚ್ ಅಂಶವನ್ನು ತೆಗೆದುಹಾಕುತ್ತದೆ. ಅಧ್ಯಯನಗಳ ಪ್ರಕಾರ ಅಣಬೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ.

ದೇಹದ ತೂಕವನ್ನು ಕಡಿಮೆ ಮಾಡಿಕೂಳ್ಳಲು ಅಣಬೆ ವರದಾನವಿದ್ದಂತೆ, ಇದರಲ್ಲಿ ಮೊದಲೇ ಹೇಳಿದಂತೆ ಕೊಲೆಸ್ಟ್ರಾಲ್ ಅಂಶ ಇಲ್ಲ. ಇದು ಕೊಬ್ಬು ರಹಿತವಾಗಿರುವುದರಿಂದ ಇದು ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ. ಅಣಬೆಯು ಹಸಿವಿಗೆ ತೃಪ್ತಿಯಾಗುವಂತೆ ಮಾಡಿ ಕಡಿಮೆ ತಿನ್ನುವಂತೆ ಮಾಡುತ್ತದೆ. ನಾವು ತಿನ್ನುವ ಆಹಾರವನ್ನು ಗ್ಲೂಕೋಸ್ ಆಗಿ ಪರಿವರ್ತನೆ ಮಾಡುವಲ್ಲಿ ವಿಟಮಿನ್ ಬಿ ಅತ್ಯಗತ್ಯ. ಅಣಬೆಯಲ್ಲಿ ಅತಿ ಹೆಚ್ಚು ವಿಟಮಿನ್ ಬಿ2 ಮತ್ತು ಬಿ3 ಇದೆ. ಆದ್ದರಿಂದ ಇದರ ಸೇವನೆಯಿಂದ ಆರೋಗ್ಯವನ್ನು ಸುರಕ್ಷಿತವಾಗಿಟ್ಟುಕೂಳ್ಳಬಹುದು.

ಅಣಬೆಯಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದೆ, ಇದನ್ನು ಸೇವಿಸುತ್ತಿದ್ದರೆ ದೇಹದ ಆರೋಗ್ಯದಲ್ಲಿ ಆಗುವ ಸಣ್ಣ ಸಮಸ್ಯೆಗಳಿಂದ ದೂರ ಇರಬಹುದು.ಇದರಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿದೆ. ಪ್ರೋಸ್ಟೇಟ್ ಹಾಗೂ ಬ್ರೆಸ್ಟ್ ಕ್ಯಾನ್ಸರ್ ಅಪಾಯದಿ೦ದ ತಪ್ಪಿಸಿಕೊಳ್ಳಲು ಮಹಿಳೆಯರು ಇದನ್ನು ಸೇವಿಸಿದರೆ ಅಪಾಯದ ಪ್ರಮಾಣ ಕಡಿಮೆಯಾಗುತ್ತದೆ.

Comments are closed.