ಇತರೆ ಸಮಯದಲ್ಲಿ ಉಂಟಾಗುವ ತಲೆನೋವಿಗೆ ಪರಿಹಾರವಾಗಿ ಶುಂಠಿ ಪೇಸ್ಟ್ ಅನ್ನು ಬಳಸಿಕೊಳ್ಳಬಹುದು. ಶುಂಠಿಯನ್ನು ಅರೆದು, ಅದನ್ನು ಸ್ವಲ್ಪ ನೀರಿನೊಂದಿಗೆ ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.ಅದೇ ರೀತಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ತಲೆನೋವಿಗೆ ಶುಂಠಿ ಕಾಫಿ ಅತ್ಯುತ್ತಮ ಮನೆಮದ್ದು.
ತುಳಸಿ ಮತ್ತು ಶುಂಠಿಯನ್ನು ಬಳಸಿ ಕೂಡ ತಲೆನೋವನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ತುಳಸಿ ಎಲೆಗಳನ್ನು ಮತ್ತು ಶುಂಠಿ ರಸವನ್ನು ಮಿಶ್ರಣ ಮಾಡಬೇಕು. ನಂತರ ಇದನ್ನು ಹಣೆಯ ಮೇಲೆ ಇರಿಸಿದರೆ ತಲೆನೋವು ಕಡಿಮೆಯಾಗುತ್ತದೆ. ಇದರ ಹೊರತಾಗಿ ಈ ರಸವನ್ನು ತಿನ್ನಬಹುದು ಅಥವಾ ಕುಡಿಯಬಹುದಾಗಿದೆ. ಇದು ತಲೆನೋವಿನ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.
ನೀವು ತಲೆನೋವಿನಿಂದ ಬಳಲುತ್ತಿದ್ದರೆ ಲವಂಗ ಮತ್ತು ಉಪ್ಪನ್ನು ಬಳಸಿ ಪರಿಹಾರ ಕಾಣಬಹುದು. ಈ ಮನೆಮದ್ದನ್ನು ತಯಾರಿಸಲು ಲವಂಗ ಪುಡಿ ಮತ್ತು ಉಪ್ಪಿನ ಮಿಶ್ರಣವನ್ನು ಸಿದ್ಧಪಡಿಸಬೇಕು. ಈ ಮಿಶ್ರಣವನ್ನು ಹಾಲಿನೊಂದಿಗೆ ಸೇರಿಸಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ. ಲವಂಗ ಮತ್ತು ಉಪ್ಪಿನ ಸಂಯೋಜನೆಯು ನಿಮ್ಮ ತಲೆನೋವನ್ನು ಒಂದು ಕ್ಷಣದಲ್ಲಿ ಮುಟ್ಟುತ್ತದೆ. ಹಾಗೆಯೇ ಉಪ್ಪಿನಲ್ಲಿರುವ ಹೈಗ್ರಾಕೊಪಿಕ್ ಅಂಶಗಳು ತಲೆನೋವಿಗೆ ಪರಿಣಾಮಕಾರಿಯಾಗಿ ಫಲಿಸುತ್ತದೆ. ಹೀಗಾಗಿ ಈ ಮನೆಮದ್ದನ್ನು ಬಳಸಿ ಶ್ರೀಘ್ರದಲ್ಲೇ ತಲೆನೋವನ್ನು ನಿವಾರಿಸಿಕೊಳ್ಳಬಹುದು.
ನೀವು ಮನೆಯಿಂದ ಹೊರಗಿದ್ದಾಗ ಅಥವಾ ಶ್ರೀಘ್ರದಲ್ಲೇ ತಲೆನೋವಿಗೆ ಪರಿಹಾರ ಕಂಡುಕೊಳ್ಳಬೇಕಿದ್ದರೆ ನಿಂಬೆ ಮತ್ತು ಬಿಸಿ ನೀರಿನ ಸೂತ್ರದ ಮೊರೆ ಹೋಗಬಹುದು. ಇದು ಬಹಳ ಉಪಯುಕ್ತ ಮನೆಮದ್ದಾಗಿದೆ.ತಲೆ ನೋವು ನಿವಾರಣೆಗೆ ಇವೇಲ್ಲ ಉತ್ತಮ ಸರಳವಾದ ಸಲಹೆಗಳಾಗಿವೆ.
Comments are closed.