ಆರೋಗ್ಯ

ಮಗುವಾದ ನಂತರ ಬದಲಾಗತ್ತಾ ಲೈಂ#ಗಿಕ ಬದುಕು? ಇಲ್ಲಿದೆ ಸಮರ್ಪಕ ಉತ್ತರ !

Pinterest LinkedIn Tumblr

ಮಗುವೊಂದು ದಂಪತಿ ನಡುವೆ ಬಂದಾಗ ಹೊಸ ಜವಾಬ್ದಾರಿಗಳು ಸಹ ಜೊತೆ ಬರುತ್ತವೆ. ಆದರೆ ಈ ಎಲ್ಲಾ ಜವಾಬ್ದಾರಿಗಳ ನಡುವೆ ದಂಪತಿಗಳು ಪರಸ್ಪರ ದೂರಾಗುವ ಸಂದರ್ಭವಿರುತ್ತದೆ. ಇಂತಹ ಸಮಯದಲ್ಲಿ ನಿಯಮಿತವಾದ ಸೆ#ಕ್ಸ್‌ಇದ್ದರೆ ದಂಪತಿ ಮೊದಲಿನಂತೆ ಇರಬಹುದು.

ಮಗುವಾದ ನಂತರ ಸೆ#ಕ್ಸ್‌ಗೆ ಸಮಯ ನೀಡಲು ಆಗದೇ ಇರಬಹುದು. ಆಗ ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು ಅನಿವಾರ್ಯ ಮತ್ತು ಅವಶ್ಯ. ಈ ಕೆಳಗಿನ ಸಲಹೆಗಳಿಂದ ನಿಮ್ಮ ಸೆ#ಕ್ಸ್‌ಜೀವನ ಸುಧಾರಿಸಬಹುದು.

ಬೆಡ್‌ರೂಮ್‌ನಿಂದ ಹೊರಗೆ ಬನ್ನಿ
ಬಹುತೇಕ ದಂಪತಿ ಮಗುವಿನ ಎದುರು ಸೆ#ಕ್ಸ್‌ ಮಾಡಲು ಇಷ್ಟಪಡುವುದಿಲ್ಲ. ಮಗು ಮಲಗಿದ್ದಾಗಲೂ ಸಹ ಮಗುವಿರುವ ಕೋಣೆಯಲ್ಲಿ ಸೆ#ಕ್ಸ್‌ಮಾಡಲು ಹಿಂಜರಿಯುತ್ತಾರೆ. ಅಂತಹವರು ಬೆಡ್‌ರೂಮ್‌ಬಿಟ್ಟು ಬೇರೆ ಕಡೆಯಲ್ಲಿ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಪ್ರಯತ್ನಿಸಬಹುದು.

ಸಮಯ ಹೊಂದಾಣಿಕೆ ಮಾಡಿಕೊಳ್ಳಿ
ಮಗು ಮಲಗಿದಾಗ ಅಥವಾ ಮನೆಯ ಇತರ ಸದಸ್ಯರೊಂದಿಗಿರುವಾಗ, ನೀವು ಕಚೇರಿಗೆ ಹೋಗಲು ತಯಾರಾಗುವ ಸಂದರ್ಭದಲ್ಲಿ ಒಟ್ಟಾರೆಯಾಗಿ ಮಗು ನಿಮ್ಮೊಂದಿಗಿರದ ಸಂದರ್ಭದಲ್ಲಿ ಸಂಗಾತಿಯೊಡನೆ ಬೆರೆಯಲು ಪ್ರಯತ್ನಿಸಿ.

ಜೊತೆಯಾಗಿ ಸ್ನಾನ ಮಾಡಿ
ಇದೊಂದು ಹಳೆಯ ಟ್ರಿಕ್‌ಎಂದೆನಿಸಿದರೂ ಪರಸ್ಪರ ಅಂತರ ಕಡಿಮೆಯಾಗಿ ಪ್ರೀತಿ ಮೂಡುತ್ತದೆ. ಗಂಡ ಹೆಂಡತಿ ಜೊತೆಯಲ್ಲಿ ಸ್ನಾನ ಮಾಡುವುದರಿಂದ ಪರಸ್ಪರರ ನಡುವಿನ ಆಕರ್ಷಣೆ ಜಾಸ್ತಿಯಾಗಿ ಸೆ#ಕ್ಸ್‌ಗೆ ಒಳ್ಳೆಯ ಮೂಡ್‌ಬರುತ್ತದೆ. ಈ ಸಮಯದಲ್ಲಿ ನಿಮ್ಮ ಸಂಗಾತಿಯನ್ನು ಒಲಿಸಿಕೊಳ್ಳುವುದು ಬಹಳ ಸುಲಭ. ನಿಮ್ಮ ಸಂಗಾತಿಗೆ ನೀವು ಹಣೆಗೆ ನೀಡುವ ಮುತ್ತು ಭದ್ರತಾ ಭಾವ ಹೆಚ್ಚಿಸುತ್ತದೆ.

ರೊಮ್ಯಾಂಟಿಕ್ ‌ಸಂದೇಶ ರವಾನಿಸಿ
ಕಚೇರಿಯಲ್ಲಿರುವಾಗ ಅಥವಾ ಹೊರಗಡೆ ಇರುವಾಗ ನಿಮ್ಮ ಸಂಗಾತಿಗೆ ರೊಮ್ಯಾಂಟಿಕ್‌ಸಂದೇಶ ಕಳುಹಿಸಿ. ಸ್ವಲ್ಪ ಪೋಲಿ ಎನಿಸಿದರೂ ಇದರಿಂದ ನಿಮ್ಮ ಸೆ#ಕ್ಸ್‌ಜೀವನ ಹೊಸ ಅರ್ಥ ಪಡೆದುಕೊಳ್ಳುತ್ತದೆ.

ಆಗಾಗ ಚುಂಬಿಸಿ
ಮುತ್ತು ಯಾರಿಗೆ ತಾನೇ ಮತ್ತು ತರಿಸುವುದಿಲ್ಲ? ಇಬ್ಬರೇ ಇರುವಾಗ ಪರಸ್ಪರ ಚುಂಬಿಸಿಕೊಳ್ಳಿ. ಆಗ ಸೆ#ಕ್ಸ್‌ಹಾರ್ಮೋನು ತಂತಾನೇ ಜಾಗೃತಗೊಳ್ಳುತ್ತದೆ. ನಿಮ್ಮ ನಡುವಲ್ಲಿ ಮಗುವಿದ್ದಾಗಲೂ ಚುಂಬಿಸಲಡ್ಡಿಯಿಲ್ಲ.

ಸೆ#ಕ್ಸ್‌ ಬಗ್ಗೆ ಮುಕ್ತವಾಗಿ ಮಾತಾಡಿ
ದಂಪತಿಗಳ ನಡುವೆ ಮಾತು ಬಹು ಮುಖ್ಯ. ಅದರಲ್ಲೂ ಸೆ#ಕ್ಸ್‌ವಿಷಯದಲ್ಲಂತೂ ಮಾತು ಬೇಕೇಬೇಕು. ಈ ಎಲ್ಲ ಸಲಹೆಗಳನ್ನು ಪ್ರಯತ್ನಿಸಿ. ನಿಮ್ಮ ದಾಂಪತ್ಯವನ್ನು ಸುಖಕರವಾಗಿಸಿಕೊಳ್ಳಿ.

Comments are closed.