ನಾವು ತಿನ್ನುವ ಅನ್ನ ಹೇಗಿರಬೇಕು ಎಂಬುದರ ಕುರಿತು ಉಪಯುಕ್ತ ಮಾಹಿತಿ ನೀಡಿದ್ದಾರೆ ನೋಡಿ…
ಯಾವ ಅಕ್ಕಿ ತಿನ್ನಲು ಉತ್ತಮ
ಹೆಚ್ಚು ಬೆಲೆಯ ಅಕ್ಕಿ ಒಳ್ಳೆಯದು, ಕಡಿಮೆ ಬೆಲೆಯ ಅಕ್ಕಿ ಒಳ್ಳೆಯದಲ್ಲ ಹಂಗೇನು ಇಲ್ಲ. ಸ್ಥಳೀಯವಾಗಿ ಯಾವ ಅಕ್ಕಿ ಬೆಳೆಯುತ್ತಾರೋ ಆ ಅಕ್ಕಿಯ ಅನ್ನ ತುಂಬಾ ಒಳ್ಳೆಯದು.
ಗಂಜಿಯನ್ನು ಬಸಿಯಬೇಡಿ
ಗಂಜಿಯನ್ನು ಬಸಿದು ತಿನ್ನುವುದಕ್ಕಿಂತ ಗಂಜಿಯನ್ನ ಹೆಚ್ಚು ಆರೋಗ್ಯಕರ. ಅನ್ನವನ್ನು ಬಸಿಯದೆ ತಿಂದರೆ ತ್ವಚೆ ಸೌಂದರ್ಯಕ್ಕೆ ಒಳ್ಳೆಯದು.
ಗಂಜಿಯಲ್ಲಿದೆ ವಿಟಮಿನ್ ಬಿ
ಒಂದು ವೇಳೆ ಗಂಜಿಯನ್ನು ಬಸಿದರೆ ಆ ಗಂಜಿ ನೀರನ್ನು ಬಿಸಾಡುವ ಬದಲು ಆ ನೀರನ್ನು ಸಾರಿಗೆ ಹಾಕುವುದರಿಂದ ಅದರಲ್ಲಿರುವ ವಿಟಮಿನ್‌ಬಿ ಹಾಳಾಗುವುದಿಲ್ಲ.
ರಾತ್ರಿ ಹೊತ್ತು ಅನ್ನ ತಿನ್ನುವುದು ಒಳ್ಳೆಯದು
ರಾತ್ರಿ ಅನ್ನತಿನ್ನಬಾರದೆನ್ನುವುದು ತಪ್ಪು ಕಲ್ಪನೆ. ರಾತ್ರಿ ಅನ್ನ ತಿಂದು ಮಲಗಿದರೆ ಒಳ್ಳೆ ನಿದ್ದೆಗೆ ಸಹಕಾರಿ. ಬೆಳಗ್ಗೆ ಏಳುವಾಗ ಫ್ರೆಶ್ ಆಗಿರುತ್ತೇವೆ. ಆದರೆ ಲೇಟ್‌ನೈಟ್‌ತಿನ್ನುವ ಬದಲು ರಾತ್ರಿ 8 ಗಂಟೆಯ ಒಳಗೆ ಆಹಾರ ತಿನ್ನುವುದು ಒಳ್ಳೆಯದು.
Comments are closed.