ಮಳೆಗಾಲದ ಶೀತದಿಂದ ದೇಹವನ್ನು ರಕ್ಷಿಸಿ , ಶರೀರಕ್ಕೆ ಬೆಚ್ಚನೆಯ ಆಹಾರ ಕ್ರಮವನ್ನು ಮಾಡೋದು ಹೇಗೆ ಅನ್ನೋದನ್ನ ನಾವು ನೋಡೊಣ, ಮಳೆಗಾಲ ಬಂದ್ರೆ ಸಾಕು ನಾನಾ ರೀತಿಯ ರೋಗಗಳು ಕಾಡುತ್ತವೆ, ಹೌದು ಕೆಮ್ಮು ಶೀತ ನೆಗಡಿ ಜ್ವರದಂತ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ, ಹಾಗಾಗಿ ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇನ್ನು ಮನೆಯಲ್ಲೇ ಇದ್ದುಕೊಂಡು ಈ ಮೂಲಕ ತಿಳಿಯೋಣ.
ಈ ಮಳೆಗಾಲದಲ್ಲಿ ನೀವು ತಯಾರಿಸುವಂತ ಆಹಾರಗಳಲ್ಲಿ ಕಾಳುಮೆಣಸು ಶುಂಠಿ ಬಳಸುವುದು ಉತ್ತಮ ಇನ್ನು ನೀವು ಸೇವಿಸುವಂತ ನೀರಿನಲ್ಲಿ ಅಂದರೆ ಒಂದು ಲೀಟರ್ ನೀರಿನಲ್ಲಿ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಜಜ್ಜಿ ನೀರಿನಲ್ಲಿ ಹಾಕಿ ಅದನ್ನು ಚನ್ನಾಗಿ ಕುದಿಸಿ ಕುಡಿಯಿರಿ ಯಾಕೆಂದರೆ ಮಳೆಗಾಲದಲ್ಲಿ ಶರೀರಕ್ಕೆ ಬ್ಯಾಕ್ಟಿರಿಯಾಗಳು ಬೇಗನೆ ಪ್ರವಿಸಿಸುತ್ತವೆ ಅವುಗಳನ್ನು ತಡೆಯುವ ಗುಣ ಶುಂಠಿ ಯಲ್ಲಿದೆ.
ಇನ್ನು ಒಂದಿಷ್ಟು ಕಷಾಯಗಳನ್ನು ಮಾಡಿಕೊಳ್ಳಿ, ಶುಂಠಿ, ಧನಿಯಾ, ಜೀರಿಗೆ, ಜೇಷ್ಟಮಧು ಎಲ್ಲವೂ ತಲಾ 20 ಗ್ರಾಂ, ಕಾಳುಮೆಣಸು 10 ಗ್ರಾಂ ಎಲ್ಲವನ್ನೂ ಪುಡಿ ಮಾಡಿಟ್ಟುಕೊಳ್ಳಿ. ಒಂದು ಲೋಟ ನೀರಿಗೆ ಅರ್ಧ ಚಮಚದಂತೆ ಈ ಪುಡಿಯನ್ನು ಬೆರೆಸಿ. ನೀರನ್ನು ಕುದಿಸಿ, ತಣ್ಣಗಾಗಿಸಿ. ನಂತರ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿಯಬಹುದು.
ಬೆಳಗ್ಗೆ ಸಂಜೆ ಮಾಡುವಂತ ಕಾಫಿ ಟೀ ಯಲ್ಲಿ ಶುಂಠಿಯನ್ನು ಬಳಸಿ ಕುಡಿಯಿರಿ, ಅಷ್ಟೇ ಅಲ್ದೆ ಈ ಶೀತ ಕಾಲದಲ್ಲಿ ಚಟ್ನಿಗೆ ಹಸಿರು ಮೆಣಸಿನಕಾಯಿ, ಒಣಮೆಣಸಿನಕಾಯಿ ಬಳಸುವ ಬದಲಿಗೆ ಕಾಳುಮೆಣಸನ್ನು ಬಳಸಬಹುದು. ಬೆಳ್ಳುಳ್ಳಿಯನ್ನು ಎಣ್ಣೆ ಹಾಕದೇ ಹುರಿದು, ಸಿಪ್ಪೆ ಬಿಡಿಸಿ ತಿನ್ನಬಹುದು. ಇದರಿಂದ ಶೀತ ಬೇಗ ನಿಯಂತ್ರಣಕ್ಕೆ ಬರುತ್ತದೆ. ದೇಹವನ್ನು ಬಿಸಿಯಾಗಿಡುತ್ತದೆ. ಇನ್ನು ಉಷ್ಣ ಸಮಸ್ಯೆಯನ್ನು ಹೊಂದಿರುವವರು ದಿನಕ್ಕೆ ಒಂದು ಬಾರಿ ಶುಂಠಿ ಬಳಸಿದ ಪಾನೀಯ ಸೇವಿಸಬೇಕು.
Comments are closed.